ಹಲೋ ಸ್ನೇಹಿತರೇ, 2023-24ನೇ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಗೆ ಮೂರು ವಾರ್ಷಿಕ ಪರೀಕ್ಷಾ ಪದ್ಧತಿ ಜಾರಿಗೊಳಿಸಿದ್ದು, ಬೇಸಿಗೆ ರಜೆಯಲ್ಲಿ ಹೆಚ್ಚುವರಿ ಪರೀಕ್ಷೆ ಸಂಬಂಧ ಕಾರ್ಯ ನಡೆಸುವ ಶಿಕ್ಷಕರಿಗೆ ಹೆಚ್ಚುವರಿ ಗಳಿಕೆ ರಜೆ ಸೌಲಭ್ಯದ ಮೂಲಕ ರಜೆ ಕಡಿತಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜೂನ್ 7 ರಿಂದ 14 ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಕ್ಕೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ಮೇ 15 ರಿಂದ ಜೂನ್ 5 ರವರೆಗೆ ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆ. ಬೇಸಿಗೆ ರಜೆಯಲ್ಲಿ ಕೆಲಸ ಮಾಡುವುದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜಾ ದಿನಗಳಿಗೆ ಪರ್ಯಾಯವಾಗಿ ಗಳಿಕೆ ರಜೆ ನೀಡುವುದಾಗಿ ಸುತ್ತೋಲೆ ಹೊರಡಿಸಲಾಗಿದೆ. ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಆಯಾ ಆಡಳಿತ ಮಂಡಳಿಗಳೇ ಅಗತ್ಯ ಕ್ರಮ ವಹಿಸಬೇಕೆಂದು ಇಲಾಖೆ ಸೂಚಿಸಿದೆ.
ಇದನ್ನೂ ಸಹ ಓದಿ : ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗಾಗಿ ಹೊಸ ಪಟ್ಟಿ! 15 ದಿನಗಳಲ್ಲಿ ಸಿಗಲಿದೆ ರೇಷನ್
ವಿಶೇಷ ತರಗತಿ ನಡೆಸುವ ಸೂಚನೆ ನೀಡುತ್ತಿದ್ದಂತೆ ಶಿಕ್ಷಕ ವರ್ಗ ಆಕ್ರೋಶ ವ್ಯಕ್ತಪಡಿಸಿತ್ತು. ಮೇ 29 ರವರೆಗೂ ರಜೆ ಇದೆ, ಆದರೆ ವಿಶೇಷ ತರಗತಿ ಕಾರಣಕ್ಕೆ 14 ದಿನ ಬೇಸಿಗೆ ರಜಾದಿನಗಳು ಕಡಿತಗೊಳ್ಳುವ ಹಿನ್ನೆಲೆಯಲ್ಲಿ ವಿಶೇಷ ತರಗತಿ ನಡೆಸಲು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕರ ಸಂಘಟನೆಗಳೂ ಈ ಬಗ್ಗೆ ಶಿಕ್ಷಕರಿಗೆ ಬೆಂಬಲಿಸಿದ್ದವು. ಶಿಕ್ಷಕ ಸಮುದಾಯದಿಂದ ಅಸಮಾಧಾನ ಮುಂದುವರೆದಲ್ಲಿ ಆಗಬಹುದಾದ ಸಮಸ್ಯೆ ಊಹಿಸಿದ ಸರ್ಕಾರ, ತಕ್ಷಣವೇ ಹೆಚ್ಚುವರಿ ಗಳಿಕೆ ರಜೆಗೆ ಅವಕಾಶ ನೀಡಿ ಮನವೊಲಿಸಲು ಮುಂದಾಗಿದೆ.
ವಿಶೇಷ ತರಗತಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ವೇಳಾಪಟ್ಟಿ ಸಿದ್ಧಪಡಿಸಬೇಕು. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕಲ್ಪಿಸಬೇಕು. ಯಾವುದೇ ಶಾಲೆಯಲ್ಲಿ ವಿಷಯ ಶಿಕ್ಷಕರು ಇಲ್ಲದಿದ್ದರೆ, ತಾಲೂಕಿನ ಇತರೆ ಸಮೀಪದ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸಬಹುದು. ಇಡೀ ತಾಲೂಕಲ್ಲಿ ವಿಷಯ ಶಿಕ್ಷಕರು ಇಲ್ಲದಿದ್ದರೆ, ಅತಿಥಿ ಶಿಕ್ಷಕರನ್ನು ಬಿಇಒ ನೇಮಿಸಬೇಕು ಎಂಬುದು ಸೇರಿದಂತೆ ಒಟ್ಟು 18 ಅಂಶಗಳ ವಿವರವಾದ ಸುತ್ತೋಲೆ ಹೊರಡಿಸಲಾಗಿದೆ.
ಇತರೆ ವಿಷಯಗಳು:
SSLC Exam-2: ಜೂ.14 ರಿಂದ 2ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭ!
ಇನ್ನೂ 3 ದಿನಗಳಲ್ಲಿ PF ಖಾತೆದಾರರ ಖಾತೆಗೆ ಬರತ್ತೆ 1 ಲಕ್ಷ!
ಎಣ್ಣೆ ಪ್ರಿಯರಿಗೆ ಬಿಗ್ ಶಾಕ್! ರಾಜ್ಯದಲ್ಲಿ ಈ 3 ದಿನ ಮದ್ಯದಂಗಡಿ ಕ್ಲೋಸ್