ಹಲೋ ಸ್ನೇಹಿತರೆ, ಕಳೆದ ವರ್ಷದಲ್ಲಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮವಾಗಿ ಕರ್ನಾಟಕದಲ್ಲಿ ಬರ ಉಂಟಾಗಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗಾಗಿ NDRFನ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಪರಿಹಾರವನ್ನು ರೈತರಿಗೆ ನೀಡಲಾಗುತ್ತಿದೆ. ಈ ಪರಿಹಾರದ ಹಣ ಬಂದಿರುವುದನ್ನು ಹೇಗೆ ಚೆಕ್ ಮಾಡುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಈಗಾಗಲೇ ಸರ್ಕಾರ ಮೊದಲ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಟ ರೂ. 2000 ವರೆಗೆ ಅರ್ಹತೆಯಂತೆ ಪಾವತಿಸಿದೆ. ಇದನ್ನು ಪರಿಗಣಿಸಿ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ FRUITS ID ಹೊಂದಿರುವ ರೈತರಿಗೆ ಪರಿಹಾರದ ಹಣವನ್ನು ಹಂತಹಂತವಾಗಿ ವಿತರಣೆ ಮಾಡಲಾಗುತ್ತಿದೆ. ಬರ ಪರಿಹಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ.
ಪರಿಹಾರ ಬಂದಿಲ್ಲ ಎಂಬ ದೂರು: ಹಲವು ರೈತರು ಬರ ಪರಿಹಾರ ಹಣ ಜಮಾ ಆಗಿಲ್ಲ ಎಂದು ಆರೋಪಿಸಿದ್ದಾರೆ. ಆದ್ದರಿಂದ ಸ್ಪಷ್ಟನೆಯನ್ನು ನೀಡಲಾಗಿದ್ದು, ಏಕೆ ಪರಿಹಾರ ಬಂದಿಲ್ಲ ಎಂದು ವಿವರಣೆಯನ್ನು ಸಹ ನೀಡಲಾಗಿದೆ.
- ಒಂದು ವೇಳೆ ನಿಮ್ಮ ಹೆಸರು, ಆಧಾರ್ ಮತ್ತು FRUITS ಐಡಿ ಒಂದೇ ರೀತಿ ಇಲ್ಲದಿರುವುದು.
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು.
- ನಿಮ್ಮ ಬ್ಯಾಂಕ್‌ನ ಐ.ಎಫ್.ಎಸ್.ಸಿ ಕೋಡ್ ಸರಿ ಇಲ್ಲದೆ ಇರುವುದು.
- ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ ಆಗಿರುವುದು ಮತ್ತು ಇತರೆ ಕಾರಣಗಳಿಂದ ಪರಿಹಾರದ ಹಣ ಜಮೆ ಆಗಿರುವುದಿಲ್ಲ ಎಂದು ತಿಳಿಸಲಾಗಿದೆ.
ಇದನ್ನು ಓದಿ: 2nd PUC ಪಾಸಾದವರಿಗೆ 1 ಲಕ್ಷ ರೂ.ಗಳ LG ಸ್ಕಾಲರ್‌ಶಿಪ್! ಇಂದಿನಿಂದ ಅರ್ಜಿ ಪ್ರಕ್ರಿಯೆ ಆರಂಭ
ಈ ಸಮಸ್ಯೆಗಳನ್ನು ರೈತರು ಪರಿಹರಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ರೈತರು ಬ್ಯಾಂಕ್ ಗೆ ತೆರಳಿ ಖಾತೆಯನ್ನು ರಿ-ಓಪನ್ ಮಾಡಿಸಬೇಕು. FRUITS ತಂತ್ರಾಂಶದಲ್ಲಿ ಹೆಸರುನ್ನು ಅಪ್‌ಡೇಟ್ ಮಾಡಬೇಕು. ರೈತರು ಬ್ಯಾಂಕ್‌ಗೆ ಹೋಗಿ ಎನ್‌ಪಿಸಿಐ ಮಾಡಿಸಬೇಕು. ಅಕೌಂಟ್ ಬ್ಲಾಕ್ ಅಥವಾ ಕ್ಲೋಸ್ ಆಗಿದ್ದರೆ ರಿ-ಓಪನ್ ಮಾಡಿಸಬೇಕು ಅಥವಾ ಖಾತೆಯಲ್ಲಿ ಬದಲಾವಣೆ ಇದ್ದರೆ ಸರಿಪಡಿಸಿಕೊಳ್ಳಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ ಐಎಫ್‌ಎಸ್‌ಸಿ ಅಪ್‌ಡೇಟ್ ಮಾಡಿಸಿ, N.P.C.I ಯನ್ನು ಸಹ ಮಾಡಿಸಬೇಕು.
ರೈತರಿಗೆ ಅಗತ್ಯವಿರುವ ಮೂಲ ಮಾಹಿತಿಗಳು
- ರೈತರು ತಮ್ಮ ಜಮೀನಿನ ಪಹಣಿಗೆ FRUITS ID ಸಂಖ್ಯೆ ಇದೆಯೋ?, ಇಲ್ಲವೋ? ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕು.
- ತಮ್ಮ ಬ್ಯಾಂಕ್ ಖಾತೆಗೆ N.P.C.I ಲಿಂಕ್ ಆಗಿದೆಯೇ?, ಇಲ್ಲವೇ? ಎಂಬುದನ್ನು ಚೆಕ್ ಮಾಡಬೇಕು.
- N.P.C.I ಲಿಂಕ್ ಇದ್ದಲ್ಲಿ FID (FRUITS ID)ಯಲ್ಲಿ ಇರುವಂತಹ ಬ್ಯಾಂಕ್ ಖಾತೆ ಸಂಖ್ಯೆಗೂ N.P.C.I ಲಿಂಕ್ ಇರುವ ಖಾತೆ ಸಂಖ್ಯೆಯೂ ಒಂದೇ ರೀತಿ ಇದೆಯಾ ಎಂದು ಚೆಕ್ ಮಾಡಬೇಕು.
- N.P.C.I ಲಿಂಕ್ ಹಾಗೂ FRUITS ID ಯಲ್ಲಿ ಬ್ಯಾಂಕ್ ಖಾತೆ ಸಂಖ್ಯೆ ಬೇರೆ ಬೇರೆ ಇದ್ದರೆ FID ಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾಸಿಕೊಳ್ಳುವುದು.
- ಆಧಾರ್ ಕಾರ್ಡ್‌ನಲ್ಲಿ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರೂ ಒಂದೇ ಆಗಿರಬೇಕು.
- ಅಕೌಂಟ್ ಇನ್-ವ್ಯಾಲಿಡ್, ಕ್ಲೋಸ್, ಬ್ಲಾಕ್, ಆಧಾರ್ ನಾಟ್ ಸೀಡಿಂಗ್ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು, ಪರಿಶೀಲಿಸಿ ಸಕ್ರಿಯ ಮಾಡಿಸಿಕೊಳ್ಳುಬೇಕು.
- ಆಧಾರ್ ಕಾರ್ಡ್‌ನಲ್ಲಿ ಹಾಗೂ ಪಹಣಿ ಪತ್ರದಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು.
- ರೈತರು https://parihara.karnataka.gov.in/service92/ ಈ ವೆಬ್‌ಸೈಟ್‌ನಲ್ಲಿ
ಹೋಗಿ ಚೆಕ್ ಮಾಡಿಕೊಳ್ಳಬಹುದು. - ಸರ್ಕಾರದಿಂದ ಇನ್ನು ಹಂತಹಂತವಾಗಿ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿರುತ್ತದೆ.
ಇತರೆ ವಿಷಯಗಳು:
ರೇಷನ್ ಕಾರ್ಡ್ ಫಲಾನುಭವಿಗಳಿಗೆ ಏಪ್ರಿಲ್ ಪಟ್ಟಿ ಬಿಡುಗಡೆ!!
ಜುಲೈನಿಂದ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ 8,500 ರೂ ಜಮಾ!!