ಹಲೋ ಸ್ನೇಹಿತರೆ, ರಾಜ್ಯ ರೈತರಿಗೆ ಸರ್ಕಾರ ಒಂದು ಸಿಹಿ ಸುದ್ದಿ ತಂದಿದೆ. 10 ಎಚ್.ಪಿ. ವರೆಗಿನ ಅಕ್ರಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ಇಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಭರವಸೆ ನೀಡಿದರು. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಪಂಪ್ ಸೆಟ್ಗಳಿವೆ. ಕೆಲವರು ಇಂತಹ ಅಕ್ರಮ ಪಂಪ್ ಸೆಟ್ಗಳ ಮೂಲಕ ನದಿ ಮತ್ತು ಕಾಲುವೆಗಳಿಂದ ಅನುಮತಿ ಇಲ್ಲದೆ ನೀರು ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
10 ಹೆಚ್.ಪಿ ಗಿಂತ ಹೆಚ್ಚು ಸಾಮಥ್ರ್ಯದ ಅಕ್ರಮ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಆದರೆ, 10 ಹೆಚ್.ಪಿ ವರೆಗಿನ ವಿದ್ಯುತ್ ಪಂಪ್ ಸೆಟ್ ಗಳನ್ನು ಬಳಸಲು ಬೇರೆ ವ್ಯವಸ್ಥೆ ಮಾಡಿಕೊಳ್ಳುವರೆಗೆ ವಿದ್ಯುತ್ ಪೂರೈಕೆ ಮುಂದುವರಿಯಲಿದೆ ಎಂದು ಇಂಧನ ಸಚಿವರು ತಿಳಿಸಿದರು.
ಇದನ್ನು ಓದಿ: 8ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಜ್ಜು.! ಸರ್ಕಾರಿ ನೌಕರರಿಗೆ ಇಂದಿನಿಂದ ಜಾಕ್ ಪಾಟ್
ನದಿ ಮತ್ತು ಕಾಲುವೆಗಳಿಂದ ಅಕ್ರಮ ಪಂಪ್ ಸೆಟ್ಗಳ ಮೂಲಕ ನೀರು ಪಡೆಯುತ್ತಿರುವವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಲ ಸಂಪನ್ಮೂಲ ಇಲಾಖೆಯಿಂದ ಆದೇಶ ಬಂದಿದೆ. ಆದರೆ, 10 HP ಶಕ್ತಿವರೆಗಿನ ಪಂಪ್ ಸೆಟ್ಗಳ ಸಂಪರ್ಕ ಕಡಿತಗೊಳಿಸುವುದಿಲ್ಲ. ಅದಕ್ಕಿಂತ ಹೆಚ್ಚು ಅಶ್ವಶಕ್ತಿಯ ಪಂಪ್ಗಳನ್ನು ಬಳಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ವಿದ್ಯುತ್ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು. ಡೀಸೆಲ್ ಪಂಪ್ ಸೆಟ್ ಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇತರೆ ವಿಷಯಗಳು:
ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್..!
ಸರ್ಕಾರದಿಂದ ಸಬ್ಸಿಡಿ ಆಹಾರ ಪದಾರ್ಥ ಪಡೆಯಲು ಈ ಕೆಲಸ ಇಂದೇ ಮಾಡಿ!