rtgh
Headlines

ಈ ದಿನದಿಂದ QR ಕೋಡ್, DL, RC ಗೆ ಹೊಸ ನಿಯಮ! ಸಾರಿಗೆ ಇಲಾಖೆ ಹೊಸ ಅಪ್ಡೇಟ್

Department of Transport new rule
Share

ಬೆಂಗಳೂರು: ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ, ವಾಹನ ನೋಂದಣಿಯ ಪ್ರಮಾಣ ಪತ್ರದ ಜಾರಿಗೆ ಕೇಂದ್ರದಿಂದ ನಿಯಮವನ್ನು ತಂದಿದ್ದು, RC, DL ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆಗೆ ರಾಜ್ಯ ಸಾರಿಗೆ ಇಲಾಖೆಯು ಸಿದ್ಧತೆಯನ್ನು ಮಾಡಿಕೊಂಡಿದೆ.

Department of Transport new rule

DL ₹ RC ಕ್ಯೂಆರ್ ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ವಾಹನದ ಸಂಪೂರ್ಣವಾದ ವಿವರ ಮತ್ತು ಚಾಲಕನ ವಿವರಗಳು ಸಿಗಲಿದೆ. ವಾಹನಗಳ ಮೇಲೆ ಕೇಸುಗಳಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯೂ ಸುಲಭವಾಗಿ ಸಿಗುತ್ತದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯು ರೂಪಿಸಿರುವ ನಿಯಮದ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆಯು ಮುಂದಾಗಿದೆ. ಕ್ಯೂಆರ್ ಕೋಡ್ ಇರುವ DL & RC ಮುದ್ರಿಸಿ ವಿತರಿಸಲು ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್ ನಿಂದ ಹೊಸ ರೀತಿಯ DL & RC ಯನ್ನು ವಿತರಿಸಲು ಸಾರಿಗೆ ಇಲಾಖೆಯು ಕ್ರಮವನ್ನು ಕೈಗೊಂಡಿದೆ.

ಇದನ್ನೂ ಸಹ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ!

DL ನಲ್ಲಿ ಚಾಲಕನ ಹೆಸರು, ವಿಳಾಸ, ಜನ್ಮ ದಿನಾಂಕ, ರಕ್ತದ ಗುಂಪು ಇರುತ್ತಿದ್ದವು, ಇದರ ಜೊತೆಗೆ DL ಹೊಂದಿರುವವರು ಅಂಗಾಂಗದ ದಾನಿಯಾಗಿದ್ದಾರೆಯೇ ಎಂಬುದನ್ನು ನಮೂದಿಸಲಾಗುವು. DL ಹೊಂದಿದವರ ಮೊಬೈಲ್ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗುವುದು.

DL & RC ಕಾರ್ಡ್ ನ ಒಂದು ತುದಿಯಲ್ಲಿ ಎಲ್ಲಾ ವಿವರಗಳಿದ್ದು, ಇನ್ನೊಂದು ತುದಿಯಲ್ಲಿ ಮೈಕ್ರೋ ಚಿಪ್ ಅನ್ನು ಅಳವಡಿಸಲಾಗುವುದು. ವಾಹನ ಮಾಲೀಕರ ಮತ್ತು ವಾಹನದ ಅಥವಾ ಚಾಲಕರ ವಿವರವನ್ನು ನಮೂದಿಸಲಾಗುವುದು. ಲೇಸರ್ ಪ್ರಿಂಟ್ ಗಳಿಂದ ಇದನ್ನು ಮುದ್ರಿಸಲಾಗುವುದು. QR Coad ಸ್ಕ್ಯಾನ್ ಮಾಡಿದರೆ ಎಲ್ಲಾ ವಿವರಗಳು ಲಭ್ಯವಾಗುತ್ತದೆ.

SBI ಖಾತೆದಾರರಿಗೆ ಎಚ್ಚರಿಕೆ ನೀಡಿದ ಸರ್ಕಾರ.!

ರಾಜ್ಯದಲ್ಲಿ ಹೆಚ್ಚಾಗಲಿದೆ ಮಳೆ! ಈ ಭಾಗದ ಜನರಿಗೆ ಭೂ ಕುಸಿತದ ಎಚ್ಚರಿಕೆ..!


Share

Leave a Reply

Your email address will not be published. Required fields are marked *