ಹಲೋ ಸ್ನೇಹಿತರೇ, ಸರ್ಕಾರಿ ನೌಕರರ ಖಾತೆಗೆ ಭರ್ಜರಿ ಮೊತ್ತ ಸೇರಲಿದೆ, ಹೆಚ್ಚಿದ ತುಟ್ಟಿಭತ್ಯೆ ಜೊತೆಗೆ ಅರಿಯರ್ಸ್ ಸಿಗಲಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
DA ಅರಿಯರ್ಸ್ : ನೀವೇ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೆ / ನಿಮ್ಮ ಕುಟುಂಬದ ಯಾರಾದರೂ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗಾಗಿ. ಮಾರ್ಚ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಶೇಕಡಾ 4 ರಷ್ಟು DA ಏರಿಕೆಯನ್ನು ಘೋಷಿಸಿತು. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಡಿಎ & ಪಿಂಚಣಿದಾರರ DR ನಲ್ಲಿ ಹೆಚ್ಚಳ ಕಂಡು ಬಂದಿದ. ಇದಾದ ನಂತರ DA ಮತ್ತು DR ಅನ್ನು ಶೇಕಡಾ 50ಕ್ಕೆ ಏರಿಸಲಾಯಿತು.
Contents
ವರದಿಗಳ ಪ್ರಕಾರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ :
ಏಪ್ರಿಲ್ ವೇತನದ ಜೊತೆ ಉದ್ಯೋಗಿಗಳು ಹೆಚ್ಚಿದ ಸಂಬಳ & 3 ತಿಂಗಳ DA ಬಾಕಿಯನ್ನು ಪಡೆಯುವ ನಿರೀಕ್ಷೆಯಿದೆ. 2024ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಶೇ.4ರಷ್ಟು ತುಟ್ಟಿಭತ್ಯೆ ಏರಿಸಿದೆ, ಮಾರ್ಚ್ ತಿಂಗಳಿನಲ್ಲಿ ನೌಕರರ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಿಲ್ಲ. ಅಂದರೆ ಮಾರ್ಚ್ ತಿಂಗಳ ವೇತನದಲ್ಲಿ ಏರಿಕೆಯಾದ ತುಟ್ಟಿಭತ್ಯೆ ಮೊತ್ತವನ್ನು ವರ್ಗಾವಣೆ ಮಾಡಿಲ್ಲಾ.
ಡಿಎ ಮತ್ತು ಡಿಆರ್ ಎಂದರೇನು?:
ಡಿಎ & ಡಿಆರ್ ಎಂದರೆ ಸರ್ಕಾರಿ ನೌಕರರು & ಪಿಂಚಣಿದಾರರಿಗೆ ಸಿಗುವ ತುಟ್ಟಿಭತ್ಯೆ ಮೊತ್ತ. ತುಟ್ಟಿಭತ್ಯೆಯನ್ನು (ಡಿಎ) ಸರ್ಕಾರವು ನೌಕರರ ಖಾತೆಗೆ ಜಮೆ ಮಾಡುತ್ತದೆ. ಪಿಂಚಣಿದಾರರು ತುಟ್ಟಿ ಪರಿಹಾರವನ್ನು (ಡಿಆರ್). ಸಾಮಾನ್ಯವಾಗಿ DA & DR ಅನ್ನು ವರ್ಷಕ್ಕೆ 2 ಬಾರಿ ಹೆಚ್ಚಿಸಲಾಗುತ್ತದೆ. ಮೊದಲ ಹೆಚ್ಚಳವು ಜನವರಿ 1 ರಿಂದ ಜಾರಿಯಾದರೆ 2ನೇ ಯದು ಜುಲೈನಿಂದ ಅನ್ವಯವಾಗುತ್ತದೆ.
ಮಾರ್ಚ್ 7 ರಂದು ತುಟ್ಟಿಭತ್ಯೆ ಹೆಚ್ಚಳ ಘೋಷಣೆ :
ಕೇಂದ್ರ ಸರ್ಕಾರ ಮಾರ್ಚ್ 7 ರಂದು DA ಶೇಕಡಾ 4 ರಷ್ಟು ಏರಿಕೆಗೆ ಅನುಮೋದನೆ ನೀಡಿದೆ. ಈ ಏರಿಕೆ ಜನವರಿ ಒಂದರಿಂದ ಜಾರಿಗೆ ಬಂದಿದೆ. ಇದರಿಂದ 1 ಕೋಟಿಗೂ ಹೆಚ್ಚು ಕೇಂದ್ರ ನೌಕರರು & ಪಿಂಚಣಿದಾರರು ಪ್ರಯೋಜನ ಪಡೆಯುತ್ತಿದ್ದಾರೆ. DA ಜೊತೆಗೆ ಉದ್ಯೋಗಿಗಳ HRA ಕೂಡಾ ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದೆ. ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಎಷ್ಟು ವ್ಯತ್ಯಾಸವಾಗುತ್ತದೆ ಎಂದು ನೋಡಬೇಕೆಂದರೆ, ಉದ್ಯೋಗಿಯ ಮೂಲ ವೇತನ 15,000 ರೂ.ಇದ್ದರೆ 46% DA ಲೆಕ್ಕಾಚಾರದ ಪ್ರಕಾರ ಆತ ಪಡೆಯುವ ತುಟ್ಟಿಭತ್ಯೆಯು 6900 ರೂ..ಡಿಎ ಏರಿಕೆ ಘೋಷಣೆಯ ನಂತರ ತುಟ್ಟಿಭತ್ಯೆ 46% ದಿಂದ 50 ಕ್ಕೆಹೆಚ್ಚಳವಾಗಲಿದೆ. ಹೀಗಿದ್ದಾಗ ಪಡೆಯುವ ತುಟ್ಟಿಭತ್ಯೆ ತಿಂಗಳಿಗೆ 7500 ರೂ.ಅಂದರೆ ಒಟ್ಟು ವೇತನದಲ್ಲಿ 600 ರೂ.ಗಳಷ್ಟು ಏರಿಕೆಯಾಗುವುದು.
ಇತರೆ ವಿಷಯಗಳು
ಬೇಸಿಗೆ ರಜೆ ಕುರಿತು ಶಾಲಾ ಶಿಕ್ಷಣ ಇಲಾಖೆ ಹೊಸ ಅಪ್ಡೇಟ್!!
ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ.! ಆಸಕ್ತರಿಗೆ ಅಪ್ಲೇ ಮಾಡಲು ಇಂದೇ ಕೊನೆ ಅವಕಾಶ