rtgh

ಚಹಾ ಪ್ರಿಯರೇ ಎಚ್ಚರ! 45 ಬಗೆಯ ಟೀ ಪುಡಿಯಲ್ಲಿ ಕೆಮಿಕಲ್

chemical Tea
Share

ಹಲೋ ಸ್ನೇಹಿತರೆ, ದಿನ ನಿತ್ಯ ಚಹಾ ಸೇವಿಸುವವರು ಈ ಸುದ್ದಿ ಓದಲೇಬೇಕು. ಟೀಯಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಗೋಬಿ ಮಂಚೂರಿ, ರಸ್ತೆ ಬದಿಯ ಆಹಾರ, ಪಾನಿಪುರಿ ನಂತರ ಇದೀಗ ಚಹಾ ಪುಡಿಯಲ್ಲಿಯೂ ಕೃತಕ ಬಣ್ಣ, ಕೆಮಿಕಲ್ ಪತ್ತೆ, ಟೀ ಪುಡಿಯ ರುಚಿ ಹೆಚ್ಚಿಸಲು ರಾಸಾಯನಿಕ ಬಳಕೆ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಇದೀಗ ಬಯಲಾಗಿದೆ. ರೋಡ್ ಸೈಡ್ ಚಹಾ ಕುಡಿಯುವವರಿಗಂತು ಇದು ದೊಡ್ಡ ಶಾಕಿಂಗ್ ಸುದ್ದಿ ಆಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

chemical Tea

ಈ ಬಗ್ಗೆ ಆಹಾರ ಸಂರಕ್ಷಣಾ ಇಲಾಖೆ ಕಮಿಷ್ನರ್ ಶ್ರೀನಿವಾಸ್ ಮಾಹಿತಿ ನೀಡಿದ್ದು, ಚಹಾ ಪುಡಿಯಲ್ಲಿಯೂ ಬಣ್ಣ, ಕೆಮಿಕಲ್, ರುಚಿ ಹೆಚ್ಚಿಸುವ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಕೃತಕ ಬಣ್ಣ ಮಾತ್ರವಲ್ಲದೆ ಮರದ ಪುಡಿಯನ್ನೂ ಬೆರೆಸಲಾಗುತ್ತಿದೆ. ಬೆಂಗಳೂರಿನ ಹಲವು ಕಡೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಉಚಿತ ಕೌಶಲ್ಯಾಭಿವೃದ್ದಿ ಕೋರ್ಸ್ ಗೆ ಅರ್ಜಿ ಆಹ್ವಾನ!

ಚಹಾ ಪುಡಿ ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಸಿಹಿ ತಿಂಡಿ, ಬೇಕರಿ ಪದಾರ್ಥಗಳಲ್ಲಿಯೂ ರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಮಿಕಲ್ ಬಳಕೆ ಹಾಗೂ ಕೃತಕ ಬಣ್ಣಗಳನ್ನು ಬೆರೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಟೀ ಪುಡಿ ಹಾಗೂ ರಾಸಾಯನಿಕಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

ನಗದು ರಹಿತ ಪ್ರಯಾಣ ಸೌಲಭ್ಯಕ್ಕೆ ಸಜ್ಜಾದ KSRTC..!

ಜನನ-ಮರಣ ಪ್ರಮಾಣ ಪತ್ರ ಪಡೆಯಲು ನೂತನ ಕ್ರಮ ಜಾರಿ


Share

Leave a Reply

Your email address will not be published. Required fields are marked *