ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದ ಹಿನ್ನಲೇಯಲ್ಲಿ ಸರ್ಕಾರಿ ಬಸ್ ಗಳ ಪ್ರಯಾಣದ ದರವನ್ನು, ನೀರಿನ ಬೆಲೆಯು ಏರಿಕೆಯ ಸುಳಿವು ದೊರೆತಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದು, ಬಸ್ ಪ್ರಯಾಣದ ದರ ಹೆಚ್ಚಳದ ಬಗ್ಗೆ ಸಾರಿಗೆ ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲಿಸಿ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗದಂತೆ ಸೂಕ್ತ ತೀರ್ಮಾನವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜೂನ್ 15ರಂದು ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟದ ತೆರಿಗೆಯನ್ನು ಹೆಚ್ಚಳ ಮಾಡಿತ್ತು. ಡೀಸೆಲ್ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ಬೆಲೆಯನ್ನು ಸಹ ಏರಿಕೆ ಮಾಡುವ ಸಾಧ್ಯತೆಯು ದಟ್ಟವಾಗಿದೆ.
ಬೆಂಗಳೂರಿನಲ್ಲಿ ಜಲ ಮಂಡಳಿ ನೀರಿನ ದರ ಪರಿಷ್ಕರಿಸಲು ಮುಂದಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದು, ಜಲ ಮಂಡಳಿ ನಷ್ಟಕ್ಕೆ ಸಿಲುಕಿದ್ದು, ಆರ್ಥಿಕ ನೆರವು ನೀಡಲು ಯಾವುದೇ ಬ್ಯಾಂಕುಗಳು ಮುಂದೆ ಬರುತ್ತಿಲ್ಲ. 10 ವರ್ಷಗಳಿಂದ ನೀರಿನ ಬೆಲೆಯನ್ನು ಪರಿಷ್ಕರಿಸಿಲ್ಲ. ಹೀಗಾಗಿ ದರ ಪರಿಷ್ಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ಮೈಸೂರು ಸಿಟಿ ಕಾರ್ಪೊರೇಷನ್ ನಲ್ಲಿ 252 ಹುದ್ದೆಗಳ ನೇಮಕಾತಿ! ತಕ್ಷಣ ಅಪ್ಲೇ ಮಾಡಿ
ಎಲ್ಲಾ ರೈತರ ಖಾತೆಗೆ ₹2000! ಹೊಸ ಸರ್ಕಾರದಿಂದ ಗಿಫ್ಟ್