ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಗಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಯಲ್ಲಿ ಗುಡ್ಡಗಳ ಕುಸಿತವುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ 14 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆಯು ರದ್ದುಗೊಳಿಸಿದೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುವಂತಹ ರೈಲುಗಳು ರದ್ದಾಗಿದ್ದು, ಊರಿಗೆ ಹೋಗಬೇಕಾದ ಪ್ರಯಾಣಿಕರು ಭಾರಿ ಬೆಲೆಯನ್ನು ತೆರಬೇಕಾದ ಸ್ಥಿತಿಯು ಎದುರಾಗಿದೆ. ರೈಲುಗಳು ಸ್ಥಗಿತಗೊಂಡಿರುವ ಕಾರಣದಿಂದ ಖಾಸಗಿ ಬಸ್ ಗಳು ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದು, ಬಸ್ ಪ್ರಯಾಣದ ದರವನ್ನು ಹೆಚ್ಚಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುವಂತಹ ಖಾಸಗಿ ಬಸ್ ಗಳ ಟಿಕೆಟ್ ದರವು ದುಪ್ಪಟ್ಟಾಗಿದೆ. 500 ರೂ, 600 ರೂ ಇದ್ದ ಟಿಕೆಟ್ ಬೆಲೆಯು ಏಕಾಏಕಿ 1000 ರೂ. ನಿಂದ 1200 ರೂಪಾಯಿಗೆ ಏರಿಸಲಾಗಿದೆ. ಎಸಿ ಬಸ್ ಗಳ ಟಿಕೆಟ್ ಬೆಲೆಯಂತು 2000ರೂ ನಿಂದ 4000 ರೂವರೆಗೂ ಏರಿಕೆಯಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಜನರಿಗೆ ಬಸ್ ಟಿಕೆಟ್ ಬೆಲೆ ಏರಿಕೆಯ ಶಾಕ್ ಅನ್ನು ನೀಡಿದೆ.
ಇತರೆ ವಿಷಯಗಳು:
1ನೇ ತರಗತಿಗೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿ ನಿಗದಿ!
ಉದ್ಯೋಗಿಗಳಿಗೆ ಭರ್ಜರಿ ಸುದ್ದಿ..! DA ಮೊದಲ ಕಂತು ಈ ದಿನ ಖಾತೆಗೆ ಜಮಾ