rtgh
Headlines

BPL ಕಾರ್ಡ್‌ದಾರರು ಸಲ್ಲಿಸಬೇಕು ಆದಾಯ ಪ್ರಮಾಣಪತ್ರ.! ಆಹಾರ ಇಲಾಖೆಯ ಆದೇಶ

bpl ration card new rule
Share

ಹಲೋ ಸ್ನೇಹಿತರೇ, BPL ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಆದಾಯ ಪ್ರಮಾಣ ಪತ್ರ ಸಲ್ಲಿಸುವಂತೆ ಆಹಾರ ಇಲಾಖೆ ಸೂಚನೆಯನ್ನು ನೀಡಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ, ಹೊಸ / ನಿಗದಿತ ಮೊತ್ತಕ್ಕೆ ಆದಾಯ ಪತ್ರ ಪಡೆಯಲು, ಜನ ಕಚೇರಿಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ.

bpl ration card new rule

Contents

ಬ್ರಹ್ಮಾನಂದ ಎ.ನಿಡಗುಂದಾ

ಕಲಬುರಗಿ: BPL ಪಡಿತರ ಚೀಟಿ ಹೊಂದಿರುವ ಆಹಾರ & ನಾಗರಿಕ ಸರಬರಾಜು ಇಲಾಖೆಗೆ ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು ಎಂಬ ನಿಯಮದಿಂದ ಕೆಲವು ದಿನಗಳಿಂದ ಜನಸಾಮಾನ್ಯರು ಆದಾಯ ಪ್ರಮಾಣ ಪತ್ರ ಪಡೆಯಲು ಹೆಚ್ಚಿನ ಅರ್ಜಿ ಸಲ್ಲಿಕೆಯಾಗುತ್ತಿವೆ. ಕಲಬುರಗಿ ನಗರವೊಂದರಲ್ಲಿ 8 ದಿನದಲ್ಲಿ 7,500ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ.

ವಾರದಿಂದ ಜಿಲ್ಲೆಯ ನಾಡ ಕಚೇರಿ, ಗ್ರಾಮ ಒನ್‌, ಕರ್ನಾಟಕ ಒನ್‌ ಮತ್ತು ತಹಸೀಲ್ದಾರ್‌ ಕಚೇರಿಗಳಲ್ಲಿ ಜನರಿಂದ ತುಂಬಿ ತುಳುಕುತ್ತಿರುವುದು ಕಂಡು ಬರುತ್ತಿದೆ. ಕಾರಣ ಆದಾಯ & ಕೆಲವರು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಲು ಎಂಬ ಮಾತು ಕೇಳಿ ಬರುತ್ತಿವೆ.

ಯಾಕೆ ನೂಕು ನುಗ್ಗಲು

ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರ ಆರ್ಥಿಕ ವರದಿಯಂತೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಇಳಿಕೆಯಾಗಿದೆ ಎಂದು ಹೇಳಿತ್ತು. ಆದರೆ, ರಾಜ್ಯದಲ್ಲಿ ಮಾತ್ರ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಬಿಪಿಎಲ್‌ ಪಡಿತರ ಚೀಟಿ ಸಂಖ್ಯೆ ಹೆಚ್ಚಳ ಏಕಿದೆ ಎಂದು ಸ್ವತಃ ಮುಖ್ಯಮಂತ್ರಿ ಪ್ರಶ್ನಿಸಿದ್ದರು. ಇದೀಗ ತಾವು ಬಡತನ ರೇಖೆಗಿಂತ ಕೆಳಗಿದ್ದೇವೆ ಎಂದು ತೋರಿಸಿಕೊಳ್ಳಲು ಪೂರ್ವ ಸಿದ್ಧತೆಯಂತೆ ಜನರು ಆದಾಯ ಪ್ರಮಾಣ ಪತ್ರಗಳ ಮೊರೆ ಹೋಗುತ್ತಿದ್ದಾರೆ.

ಕಾರ್ಡ್‌ಗಾಗಿ ಆದಾಯ ಪತ್ರ

6 ತಿಂಗಳಿಂದ ಆಹಾರ & ನಾಗರಿಕ ಸರಬರಾಜು ಇಲಾಖೆ BPL ಪಡಿತರ ಚೀಟಿ ಹೊಂದಿರುವವರು ತಮ್ಮ ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿತ್ತಲ್ಲದೆ, ಅದೇ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದರಲ್ಲಿ 2 ವಾರಗಳಿಂದ ಇಲಾಖೆ ಅಧಿಕಾರಿಗಳು ಚುರುಕಾಗಿದ್ದು, ಡೀಲರ್‌ಗಳಿಂದ ಆದಾಯ ಪ್ರಮಾಣ ಪತ್ರ ವೈರಿಫೈ ಮಾಡುತ್ತಿದ್ದಾರೆ. ಆದಾಯ ಪ್ರಮಾಣಪತ್ರ ಸಲ್ಲಿಕೆ ಮಾಡದಿರುವವರು ಕೂಡಲೇ ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಅರ್ಜಿ ಸಲ್ಲಿಕೆಗೆ ಮುಂದಾಗುವುದು ಕಂಡು ಬರುತ್ತಿದೆ. ಅದು ಕೂಡ 1.20 ಲಕ್ಷ ರೂ. ವಾರ್ಷಿಕ ಆದಾಯ ಇರುವ ಅರ್ಜಿಗಳ ಸಂಖ್ಯೆ ಹೆಚ್ಚಿದೆ.

8 ದಿನದಲ್ಲಿ7,500 ಅರ್ಜಿ

ಜಾತಿ & ಆದಾಯ ಪ್ರಮಾಣ ಪತ್ರಗಳ ಸೀಜನ್‌ ಎಂದು ಮೇ ತಿಂಗಳಿಂದ ಜೂನ್‌ ತಿಂಗಳು ಕರೆಸಿಕೊಳ್ಳುತ್ತದೆ. ಆ ವೇಳೆ ರಾಜ್ಯದ ಎಲ್ಲೆಡೆ ಶಾಲೆ ಕಾಲೇಜು ಆರಂಭದ ದಿನಗಳಾಗಿರುವ ಹಿನ್ನೆಲೆ ಹೆಚ್ಚಿನ ಅರ್ಜಿ ಬರುತ್ತವೆ. ಅದಾದ ನಂತರ ಉಳಿದ 10 ತಿಂಗಳು ಅರ್ಜಿಗಳ ಸಂಖ್ಯೆ ಕಡಿಮೆಯಾಗಿತ್ತಿತ್ತು. ಆದರೆ, ಈ ಬಾರಿ ಜುಲೈ ಮಧ್ಯದಿಂದ ಮತ್ತೆ ಸೀಜನ್‌ ಶುರುವಾದಂತಾಗಿದೆ. 8 ದಿನಗಳಲ್ಲಿ ಕಲಬುರಗಿ ನಗರವೊಂದರಲ್ಲಿ6452 ಆದಾಯ & ಜಾತಿ ಪ್ರಮಾಣ ಪತ್ರ ಹಾಗೂ 1399 ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆಯಾಗಿವೆ.

ಅನುಮಾನ ಬಂದವರಿಂದ ಪ್ರಮಾಣ ಪತ್ರ

ಆರು ತಿಂಗಳಿಂದ ಬಿಪಿಎಲ್‌ ಪಡಿತರ ಕಾರ್ಡ್‌ ಹೊಂದಿರುವವವರಿಂದ ಆದಾಯ ಪ್ರಮಾಣ ಪತ್ರ ತೆಗೆದುಕೊಳ್ಳುವುದು ನಡೆಯುತ್ತಿದೆ. ಸರಾಸಗಟವಾಗಿ ಎಲ್ಲರಿಂದ ಇಷ್ಟು ದಿನ ಪಡೆಯಲಾಗಿದೆ. ಇಲ್ಲಿವರೆಗೆ ನೀಡದೆ ಅನುಮಾನ ಮೂಡಿರುವ BPL ಕಾರ್ಡ್‌ ಬಳಕೆದಾರರು ಕಡ್ಡಾಯವಾಗಿ ಆದಾಯ ಪ್ರಮಾಣ ಪತ್ರ ನೀಡುವಂತೆ ಹೇಳಲಾಗುತ್ತಿದೆ. ಇದರಿಂದ ನಕಲಿ ಕಾರ್ಡ್‌ಗಳ ಪತ್ತೆಯಲ್ಲದೆ ಬಡವರಿಗೆ ಸೂಕ್ತ ಸೌಲಭ್ಯ ನೀಡಲು ಅನುಕೂಲ ಆಗುತ್ತದೆ ಎಂದು ಆಹಾರ & ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಹೇಳುತ್ತಾರೆ.

ಬೇಗ ಸಲ್ಲಿಸಿಬೇಕು

ನಕಲಿ BPL ಪಡಿತರ ಚೀಟಿ ಪತ್ತೆ ಹಚ್ಚಲು 6 ತಿಂಗಳಿಂದ ಆದಾಯ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ ಶೇ 70 ಕ್ಕಿಂತ ಹೆಚ್ಚಿನ BPL ಕಾರ್ಡ್‌ ಹೊಂದಿರುವವರು ಆದಾಯದ ದಾಖಲೆ ಸಲ್ಲಿಸಿದ್ದಾರೆ. ಇನ್ನುಳಿದವರು ಬೇಗ ಸಲ್ಲಿಸುವಂತೆ ತಿಳಿಸಲಾಗುತ್ತಿದೆ ಎಂದು ಆಹಾರ & ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಲಿ ಹೇಳಿದ್ದಾರೆ.

ಇತರೆ ವಿಷಯಗಳು

ಉಳಿತಾಯ ಖಾತೆಯಲ್ಲಿ ಇಷ್ಟು ಹಣವಿದ್ದರೆ ಕಟ್ಟಬೇಕು 60% ತೆರಿಗೆ..!

ಪ್ರತಿ ಮನೆಗೂ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್! ಸರ್ಕಾರದ ಹೊಸ ಸ್ಕೀಮ್


Share

Leave a Reply

Your email address will not be published. Required fields are marked *