ಖಾಸಗಿಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಮುಗಿದು ತಿಂಗಳುಗಳಾಗಿದ್ದು, ಸದಾ ವಿವಾದಗಳಿಂದಲೇ ಸದ್ದನ್ನು ಮಾಡಿದ ಸೀಸನ್ 10 ರಲ್ಲಿ ನಟ ಕಾರ್ತಿಕ್ ಮಹೇಶ್ ಅವರು ಗೆದ್ದು ಬೀಗಿದರೆ ಹಾಗೂ ಡ್ರೋನ್ ಪ್ರತಾಪ್ ಅವರು ರನ್ನರ್ಅಪ್ ಆಗಿದ್ದರು.
ಇದೀಗ ಬಿಗ್ಬಾಸ್ 11ನೇ ಸೀಸನ್ ಬಗ್ಗೆ ಮಾತುಗಳು ಸಹ ಕೇಳಿ ಬರುತ್ತಿದ್ದು, ಯಾರೆಲ್ಲ ಬಿಗ್ ಬಾಸ್ ಮನೆ ಸ್ಪರ್ಧಿಸಲಿದ್ದಾರೆ ಹಾಗೂ ಯಾವಾಗ ಆರಂಭವಾಗಲಿದೆ ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಈಗಾ ಕೇಳಿ ಬಂದಿರುವ ಮಾಹಿತಿಯ ಪ್ರಕಾರ 11ನೇ ಸೀಸನ್ ನ ಬಿಗ್ಬಾಸ್ ಕಾರ್ಯಕ್ರಮ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿದ್ದು, ಈ ಬಾರಿ ನಟ-ನಟಿಯರು, ಬ್ಯುಸಿನೆಸ್ಮ್ಯಾನ್, ಸೋಶಿಯಲ್ ಮೀಡಿಯಾ ಸ್ಟಾರ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವವರು ಸ್ಪರ್ಧಿಗಳಾಗಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ತುಂಬ ಬಿರುಸಿನಿಂದ ಸಾಗುತ್ತಿದೆ.
ಇದನ್ನೂ ಸಹ ಓದಿ: ಗೃಹಲಕ್ಷ್ಮಿಯರಿಗೆ ಡಬಲ್ ಖುಷಿ! 2 ತಿಂಗಳ ಕಂತಿನ ಹಣ ಈ ವಾರ ನಿಮ್ಮ ಖಾತೆಗೆ!
ಸೀಸನ್ 10 ರಲ್ಲಿ ಹುಲಿ ಉಗುರು ಪ್ರಕರಣ, ಡ್ರೋನ್ ಪ್ರತಾಪ್, ವಿನಯ್ ಗೌಡ ಹಾಗೂ ಸ್ಪರ್ಧಿಗಳ ಮನಸ್ತಾಪದಿಂದಾಗಿ ಬಿಗ್ಬಾಸ್ ಹೆಚ್ಚು ಸುದ್ದಿಯನ್ನು ಮಾಡಿತ್ತು. ಅದೇ ರೀತಿ ಈ ಬಾರಿ ಕೂಡ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ, ರಾಘವೇಂದ್ರ, ಭವ್ಯ ಗೌಡ, ಸುನೀಲ್ ರಾವ್, ಮೋಕ್ಷಿತಾ ಪೈ, ಭೂಮಿಕಾ ಬಸವರಾಜ್, ವರುಣ್ ಆರಾಧ್ಯ, ವರ್ಷಾ ಕಾವೇರಿ, ರೀಲ್ಸ್ ರೇಷ್ಮಾ ಸೇರಿದಂತೆ ಕೆಲವರ ಹೆಸರುಗಳನ್ನು ಮುನ್ನೆಲೆಗೆ ಬಂದಿದೆ. ಹೀಗಾಗಿ ಈ ಸೀಸನ್‌ನಲ್ಲಿ ಏನು ವಿಶೇಷತೆ ಇರಲಿದೆ ಎನ್ನುವ ಕುತೂಹಲವಿದೆ.
2022ರಲ್ಲಿ ಬಿಗ್ ಬಾಸ್ ಕನ್ನಡದ OTT ಸೀಸನ್ 1 ಪ್ರಸಾರ ಆಗಿತ್ತು. ಈ ಬಾರಿ ಬಿಗ್ ಬಾಸ್ OTT ಇರೋದಿಲ್ವಂತೆ. ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ಬಗ್ಗೆ ಅಥವಾ ಬಿಗ್ ಬಾಸ್ ಕನ್ನಡ OTT ಸೀಸನ್ 1 ಬಗ್ಗೆಯೂ ಯಾವುದೇ ಅಧಿಕೃತ ಹೇಳಿಕೆಯನ್ನು ವಾಹಿನಿ ಕೊಟ್ಟಿಲ್ಲ. ಎಂದಿನಂತೆ ಕಿಚ್ಚ ಸುದೀಪ್ ಅವರು ಈ ಶೋ ನಿರೂಪಣೆಯನ್ನು ಮಾಡಬಹುದು ಎಂಬ ನಿರೀಕ್ಷೆ ಇದೆ.
ಇತರೆ ವಿಷಯಗಳು:
ಕೇಂದ್ರದ ಉಚಿತ ಪಡಿತರ ಯೋಜನೆಯಲ್ಲಿ ಮಹತ್ವದ ನಿರ್ಧಾರ.! ಪ್ರಲ್ಹಾದ ಜೋಶಿ
ನಮ್ಮ ಯಾತ್ರಿ ವಿದ್ಯಾರ್ಥಿವೇತನ.! 10 & 12ನೇ ತರಗತಿ ಮಕ್ಕಳಿಗಾಗಿ ಘೋಷಣೆ