rtgh
Headlines

ಪ್ರತಿ ತಿಂಗಳಿಗೆ ₹95 ಸಾವಿರ ಸಂಬಳ.! ಈ ಕೆಲಸಕ್ಕೆ ಇಂದೇ ಅರ್ಜಿಯನ್ನು ಸಲ್ಲಿಸಿ

bhel recruitment
Share

ಹಲೋ ಸ್ನೇಹಿತರೇ, BHELನಲ್ಲಿ ಖಾಲಿ ಇರುವ GDMO & ಸ್ಪೆಷಲಿಸ್ಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

bhel recruitment

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ (BHEL) ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. BHEL ಸರ್ಕಾರಿ ಉದ್ಯೋಗ ಪಡೆಯಬಯಸುವ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹುದ್ದೆಯ ವಿವಿರ: BHELನಲ್ಲಿ ಖಾಲಿಯಿರುವ GDMO ಮತ್ತು ಸ್ಪೆಷಲಿಸ್ಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://bhel.com/ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾರ್ಹತೆ ಹೊಂದಿರಬೇಕು. GDMO ಹುದ್ದೆಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟ ಕಾಲೇಜಿನಿಂದ ಕನಿಷ್ಠ MBBS ಪದವಿ & ಭಾರತೀಯ ವೈದ್ಯಕೀಯ ಮಂಡಳಿ OR ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ಅಭ್ಯರ್ಥಿಯು ತನ್ನ ಹೆಸರನ್ನು ನೋಂದಾವಣಿ ಮಾಡಿಕೊಂಡಿರಬೇಕು. ಸ್ಪೆಷಲಿಸ್ಟ್‌ ಹುದ್ದೆಗೆ ಸ್ನಾತಕೋತ್ತರ ಪದವಿಯೊಂದಿಗೆ MBBS ಪದವಿ ಮತ್ತು ಕೌನ್ಸಿಲ್ ಆಫ್ ಇಂಡಿಯಾ OR ಸ್ಟೇಟ್ ಮೆಡಿಕಲ್ ಕೌನ್ಸಿಲ್‌ನಲ್ಲಿ ಹೆಸರು ನೋಂದಾವಣಿ ಮಾಡಿಕೊಂಡಿರಬೇಕು. 

ವಯೋಮಿತಿ: ಈ ನೇಮಕಾತಿ ಅಡಿಯಲ್ಲಿ ಅಪ್ಲೇ ಮಾಡುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳಾಗಿರಬೇಕು. OBC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ಇರಲಿದೆ.

ವೇತನ: CMP (GDMO) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 95,000 ರೂ. ವೇತನ ನೀಡಲಾಗುತ್ತದೆ. ಅದೇ ರೀತಿ CMP (ಸ್ಪೆಷಲಿಸ್ಟ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 1,10,400 ರೂ. ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ವಾಕ್-ಇನ್‌ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ತರಬೇಕು ಮತ್ತು ದಾಖಲೆಗಳ ಸ್ವಯಂ-ದೃಢೀಕರಿಸಿದ ಫೋಟೊಕಾಪಿಗಳನ್ನು ಸಹ ತರಬೇಕು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

ಇತರೆ ವಿಷಯಗಳು

ನಿಮ್ಮ ಟ್ರಾಫಿಕ್ ಚಲನ್ ಅನ್ನು ಮನ್ನಾ ಮಾಡಲು ಬಯಸುತ್ತೀರಾ? ಇಂದೇ ಈ ಕೆಲಸ ಮಾಡಿ

ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಸಹಿತ ಭಾರೀ ಮಳೆ! IMD ಮುನ್ಸೂಚನೆ


Share

Leave a Reply

Your email address will not be published. Required fields are marked *