ವಾರದ ಒಳಗೆ ಬೆಳೆ ಹಾನಿಗೆ ಒಳಗಾದ ಎಲ್ಲಾ ರೈತರಿಗೂ ಪರಿಹಾರವನ್ನು ನೀಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕೃಷಿ ಬೆಳೆಯ 78,679 ಹೆಕ್ಟೇರ್ ಜಾಗ ಹಾನಿಯಾಗಿದ್ದರೆ, ತೋಟಗಾರಿಕಾ ಬೆಳೆ 2,294 ಹೆಕ್ಟೇರ್ ಪ್ರದೇಶವು ಹಾನಿಯಾಗಿದೆ. ವಾರದ ಒಳಗೆ ಯಾವ ಯಾವ ಬೆಳೆಗಳು ಹಾನಿಯಾಗಿವೆ ಎನ್ನುವುದರ ಬಗ್ಗೆಯೂ ಖಚಿತವಾದ ಮಾಹಿತಿಗಳು ಸಿಗಲಿದೆ. ತದನಂತರ ರೈತರಿಗೆ ಪರಿಹಾರವನ್ನು ನೀಡುವ ಕಾರ್ಯಕ್ಕೂ ಚಾಲನೆಯನ್ನು ನೀಡಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರದ ಬಳಿ ಇರುವ ಸಂಪನ್ಮೂಲದಲ್ಲೇ ಪರಿಹಾರವನ್ನು ನೀಡಲಾಗುವುದು. ಇನ್ನೂ ಒಂದೂವರೆ ತಿಂಗಳು ಮಳೆಯ ಸಾಧ್ಯತೆಯು ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಹಾನಿಯಾಗುವ ಸಾಧ್ಯತೆಯು ಸಹ ಇದೆ. ಹೀಗಾಗಿ ಮುಂಗಾರಿನ ಸಂಪೂರ್ಣವಾದ ಅವಧಿಯು ಮುಗಿಯುವವರೆಗೆ ಕಾದು ತದನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇತರೆ ವಿಷಯಗಳು:
ಶಿಕ್ಷಕ ಹುದ್ದೆಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ 12 ಸಾವಿರ ಶಿಕ್ಷಕರ ನೇಮಕ!
ಸೆ.1 ರಿಂದ ಈ SIM ಗಳನ್ನು Block list ಗೆ ಸೇರಿಸುತ್ತಿರುವ TRAI..!