ಹಲೋ ಸ್ನೇಹಿತರೇ, ಬಿಬಿಎಂಪಿ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಚಿತವಾಗಿ laptop ನೀಡುವ ಬಗ್ಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಗ ಅರ್ಜಿ ಸಲ್ಲಿಸಿದವರಿಗೆ ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರ ಪ್ರಕಟಣೆಯಲ್ಲಿ ಹೇಳಿರುವುದೇನೆಂದರೆ, ಈಗಾಗಲೇ ಒಮ್ಮೆ ಆನ್ಲೈನ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕೆಲವು ದಾಖಲೆಗಳನ್ನು ನೀಡಿಲ್ಲ. ಅಂತಹ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳನ್ನು ಮತ್ತೊಮ್ಮೆ ಆನ್ಲೈನ್ ಮೂಲಕವಾಗಿ ಸಲ್ಲಿಸಬೇಕು. ಅವಧಿಗೂ ಮೊದಲು ದಾಖಲೆಗಳನ್ನು ಅಪ್ಲೋಡ್ ಮಾಡದ ವಿದ್ಯಾರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಲಾಗಿದೆ. ಹಳೆಯ ಅರ್ಜಿಗಳ ತಿದ್ದುಪಡಿಯ ಜೊತೆಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಸಹ ಆನ್ಲೈನ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಅರ್ಜಿಯನ್ನು ಸಲ್ಲಿಸಲು ಫೆಬ್ರುವರಿ 19 2019 ರಿಂದ ಫೆ. 29 2019 ರ ವರೆಗೆ ಸಮಯವನ್ನು ಕಲ್ಪಿಸಲಾಗಿದೆ.
Contents
ಈಗಾಗಲೇ ಅರ್ಜಿ ಸಲ್ಲಿಸಿರುವವರು ದಾಖಲೆಗಳನ್ನು upload ಮಾಡುವ ಹಂತಗಳು
- ಹಂತ 1- BBMP ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹಂತ 2- “ಉಚಿತ ಲ್ಯಾಪ್‌ಟಾಪ್ ಯೋಜನೆ” ಟ್ಯಾಬ್ ಕ್ಲಿಕ್ ಮಾಡಿಕೊಳ್ಳಿ.
- ಹಂತ 3- “ಅರ್ಜಿ ಸ್ಥಿತಿ & ತಿದ್ದುಪಡಿ” ಆಪ್ಷನ್ ಕ್ಲಿಕ್ ಮಾಡಿ.
- ಹಂತ 4- ನೀವು ಈ ಹಿಂದೆ ಅರ್ಜಿ ಸಲ್ಲಿಸುವಾಗ ನೀಡಿದ ಮೊಬೈಲ್ ಸಂಖ್ಯೆ & ಅರ್ಜಿ ಸಂಖ್ಯೆಯನ್ನು ನಮೂದಿಸಿ.
- ಹಂತ 5- “ಸಲ್ಲಿಸು” ಕ್ಲಿಕ್ ಮಾಡಿ.
- ಹಂತ 6- ಅಗತ್ಯ ದಾಖಲೆಗಳನ್ನು upload ಮಾಡಿ.
ಯಾವ ಯಾವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು:
ವಿದ್ಯಾರ್ಥಿಯು ಅರ್ಜಿ ಸಲ್ಲಿಸುವಾಗ aadhar card, ವಿದ್ಯಾರ್ಥಿ ವೇತನ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಜಾತಿ & ಆದಾಯ ಪ್ರಮಾಣಪತ್ರವನ್ನು ನೀಡಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2023ನೇ ಬಜೆಟ್‌ನ್ನು ಘೋಷಣೆ ಮಾಡಿತ್ತು. ಬೆಂಗಳೂರಿನಲ್ಲಿ BBMP ವ್ಯಾಪ್ತಿಯಲ್ಲಿ ಒಟ್ಟು 47 ಶಾಲೆಗಳು ಇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕು ಎಂದು ಬಿಬಿಎಂಪಿ 152.61 ಕೋಟಿ ರೂ ಅನುದಾನವನ್ನು ಘೋಷಣೆ ಮಾಡಿತ್ತು. ಅದರಲ್ಲಿ ಸುಮಾರು 25 ಕೋಟಿ ರೂ. ಅನುದಾನವನ್ನು ವಿದ್ಯಾರ್ಥಿಗಳಿಗೆ ಫ್ರೀ ಲ್ಯಾಪ್‌ಟ್ಯಾಪ್ ನೀಡಲು ಮೀಸಲು ಇಟ್ಟಿದ್ದೇವೆ ಎಂಬುದಾಗಿ ಹೇಳಿತ್ತು. BBMP ಅಧೀನದಲ್ಲಿರುವ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೈಕಿ ಒಟ್ಟು 10,000 ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು. ಇದರಿಂದ ಬಡ ಮಕ್ಕಳು ಲ್ಯಾಪ್‌ಟಾಪ್ ಪಡೆದುಕೊಂಡು ಇಂದಿನ ಡಿಜಿಟಲ್ ಶಿಕ್ಷಣವನ್ನು ಪಡೆದುಕೊಳ್ಳಬಹುದಾಗಿದೆ.
BBMP 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದೆ. ಅದರಂತೆಯೇ ಈಗ ಮತ್ತೊಮ್ಮೆ ದಾಖಲೆಯನ್ನು ಅಪ್ಲೋಡ್ ಮಾಡಲು ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸಧ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವ ನಿರೀಕ್ಷೆಯಿದೆ. ಬಡತನದ ರೇಖೆಗಿಂತ ಕೆಳಗಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡಿ ಈ ಯೋಜನೆಯನ್ನು ಜಾರಿಗೊಳಿಸಿದೆ. ಹೆಚ್ಚಿನ ಮಾಹಿತಿಗಾಗಿ BBMP ಕಚೇರಿಗೆ ಭೇಟಿ ನೀಡಿ / ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಇತರೆ ವಿಷಯಗಳು
ಯುವ ರೈತರನ್ನು ಮದುವೆಯಾಗುವ ವಧುವಿಗೆ ಸಿಗಲಿದೆ 5 ಲಕ್ಷ ರೂ.! ವಿವಾಹವಾದ ಮರುದಿನವೇ ಖಾತೆಗೆ ಹಣ
ಸೂರ್ಯ ರೈತ ಯೋಜನೆಯಡಿ ಉಚಿತ ಸೋಲಾರ್ ಪಂಪ್ ಸೆಟ್!!