ಹಲೋ ಸ್ನೇಹಿತರೇ, ಸಾಮಾನ್ಯವಾಗಿ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ಉಳಿತಾಯ ಖಾತೆಯನ್ನು ತೆರೆಯುತ್ತೇವೆ ಅಥವಾ ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರಗಳಿಗಾಗಿ ಕರೆಂಟ್ ಅಕೌಂಟ್ ಅಂದ್ರೆ ಚಾಲ್ತಿ ಖಾತೆ ತೆರೆಯಲಾಗುತ್ತದೆ. ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಖಾತೆ ತೆರೆಯುವುದು ಸಾಮಾನ್ಯ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ನಿಯಮ ಜಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯನ್ನು ನಾವು ಡಿಜಿಟಲ್ ಆಗಿಯೇ ನಿರ್ವಹಿಸುತ್ತೇವೆ ಯಾವುದೇ ಬ್ಯಾಂಕ್ ಗೆ ಹೋಗಿ ಹಣ ಡೆಪಾಸಿಟ್ ಮಾಡುವುದು ಅಥವಾ ಖಾತೆಯಿಂದ ಹಣ ಹಿಂಪಡೆಯುವುದು ಮಾಡುವ ಅಗತ್ಯ ಇಲ್ಲ. ಆನ್ಲೈನ್ ನಲ್ಲಿ ಈ ವಹಿವಾಟುಗಳು ನಡೆಯುತ್ತವೆ.
Contents
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಏನಾಗುತ್ತೆ ಗೊತ್ತಾ?
ಇನ್ನು ಬ್ಯಾಂಕುಗಳಲ್ಲಿ ಜನ ಒಂದು ಖಾತೆಯನ್ನು ಹೊಂದಿರುವುದು ಸಹಜ, ಆದ್ರೆ ಸಾಕಷ್ಟು ಜನ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ಖಾತೆಯನ್ನು ಹೊಂದಿರುತ್ತಾರೆ. ಉದಾಹರಣೆಗೆ ಉಳಿತಾಯ ಖಾತೆ ಅದರ ಜೊತೆಗೆ ಸಂಬಳಕ್ಕಾಗಿ ಇನ್ನೊಂದು ಖಾತೆ ತೆರೆಯುವವರು ಇದ್ದಾರೆ.
ಆದರೆ ನೀವು ನಿಜಕ್ಕೂ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಿರಬಹುದು ಗೊತ್ತ? ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಅದಕ್ಕೆ ಅನ್ವಯವಾಗುವ ನಿಯಮಗಳು ಏನು? ಮೊದಲಾದವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಇದನ್ನೂ ಸಹ ಓದಿ : ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಬದಲಾವಣೆ! ತಿಂಗಳಿಗೆ 1,000 ಕ್ಕೂ ಹೆಚ್ಚು ಹಣ ಖಾತೆಗೆ
ಹೆಚ್ಚು ಉಳಿತಾಯ ಖಾತೆ ಹೊಂದಿದ್ದರೆ ಈ ಸಮಸ್ಯೆ ಉಂಟಾಗಬಹುದು:
ಹೌದು, ಕೆಲವರು ಮೂರರಿಂದ ನಾಲ್ಕು ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಒಂದೇ ಬ್ಯಾಂಕ್ ನಲ್ಲಿ ಬೇರೆ ಬೇರೆ ಖಾತೆ ಅಥವಾ ಬೇರೆ ಬೇರೆ ಬ್ಯಾಂಕ್ ನಲ್ಲಿ ಒಂದೊಂದು ಖಾತೆಯನ್ನು ಹೊಂದಿರುವ ಸಂದರ್ಭ ಇರುತ್ತದೆ. ನಮ್ಮ ದೇಶದಲ್ಲಿ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಯಾವುದೇ ಮಿತಿ ಇಲ್ಲ ಅಂದ್ರೆ ಆರ್ಬಿಐ ಎಷ್ಟು ಖಾತೆ ತೆರೆಯಬಹುದು ಎನ್ನುವುದಕ್ಕೆ ಯಾವುದೇ ನಿಯಮ ಜಾರಿಗೆ ತಂದಿಲ್ಲ.
ಆದರೆ ನೀವು ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಎಷ್ಟೋ ಬಾರಿ ನಾವು ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿರುತ್ತೇವೆ, ಆಗ ಒಂದು ಖಾತೆಯನ್ನು ಸದಾ ವ್ಯವಹಾರಿಕ ಬಳಕೆಗೆ ಉಪಯೋಗಿಸಿಕೊಂಡರೆ ಇನ್ನೊಂದು ಖಾತೆಯನ್ನು ದೀರ್ಘಕಾಲದ ವರೆಗೆ ಬಳಕೆ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿಗೆ ನಿಮ್ಮ ಬ್ಯಾಂಕ್ ಖಾತೆ ಬಳಕೆ ಮಾಡದೆ ಇದ್ದರೆ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಇನ್ನು ಎಲ್ಲ ಬ್ಯಾಂಕುಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಅನ್ನು ಬ್ಯಾಂಕ ಖಾತೆಯಲ್ಲಿ ಹೊಂದಿರಬೇಕು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಕನಿಷ್ಠ ಬ್ಯಾಲೆನ್ಸ್ ಇಡುವುದರಿಂದ ಆರ್ಥಿಕ ಸಮಸ್ಯೆ ಉಂಟಾಗಬಹುದು. ಒಂದು ವೇಳೆ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡದೆ ಇದ್ದರೆ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ.
ಬ್ಯಾಂಕ್ ನಿಮ್ಮ ಖಾತೆಯನ್ನು ನಿರ್ವಹಿಸಲು ಕನಿಷ್ಠ ಬ್ಯಾಲೆನ್ಸ್ ನಿಯಮ, ಸಂದೇಶ ಮತ್ತು ಸೇವಾ ಶುಲ್ಕ ಡೆಬಿಟ್ ಕಾರ್ಡ್ ಶುಲ್ಕ ಕ್ರೆಡಿಟ್ ಕಾರ್ಡ್ ಶುಲ್ಕ ಮೊದಲಾದವುಗಳನ್ನು ವಿಧಿಸುತ್ತದೆ.
ಹೀಗೆ ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದಾಗ ಈ ಎಲ್ಲಾ ಶುಲ್ಕಗಳನ್ನು ಪಾವತಿ ಮಾಡಬೇಕು. ಹಾಗಾಗಿ ನಿಮ್ಮ ಅನುಕೂಲವನ್ನು ನೋಡಿ, ಸಾಧ್ಯವಾದರೆ ಒಂದೇ ಖಾತೆಯನ್ನು ಹೊಂದುವುದು ಒಳ್ಳೆಯದು.
ಇತರೆ ವಿಷಯಗಳು:
ಸರ್ಕಾರದಿಂದ ಉಚಿತ ಸೈಕಲ್ ಭಾಗ್ಯ! ಈ ಕಾರ್ಡ್ ಇದ್ದವರು ಬೇಗ ಅಪ್ಲೇ ಮಾಡಿ
ದಿಢೀರನೆ SSLC ಫಲಿತಾಂಶದ ದಿನಾಂಕ ಬಿಡುಗಡೆ!!
ಕೇವಲ 4% ಬಡ್ಡಿ ದರದಲ್ಲಿ 3 ಲಕ್ಷ ಸಾಲ! KCC ಯೋಜನೆಯಲ್ಲಿ ಇಂದೇ ಹೆಸರು ನೋಂದಾಯಿಸಿ