rtgh

ಚಹಾ ಪ್ರೇಮಿಗಳಿಗೆ ಕಹಿ ಸುದ್ದಿ: ಟೀ ಪುಡಿ ಬ್ಯಾನ್ ಗೆ ಸರ್ಕಾರ ತೀರ್ಮಾನ!

Artificial Colors Used In Tea Power
Share

ಚಹಾ ಪುಡಿಯಲ್ಲಿಯೂ ಕೂಡ ಕೃತಕ ಬಣ್ಣ, ಕೆಮಿಕಲ್ ಬಳಸಲಾಗುತ್ತಿದ್ದು, ಇಂತಹ ಟೀ ಪುಡಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರವು ನಿರ್ಧಾರಿಸಿದೆ ಎಂದು ಮಾಹಿತಿ ತಿಳಿದುಬಂದಿದೆ.

Artificial Colors Used In Tea Power

ಗೋಬಿ ಮಂಚೂರಿ, ಪಾನಿಪುರಿ, ಕಾಟನ್ ಕ್ಯಾಂಡಿ, ಕಬಾಬ್ ಗಳಲ್ಲಿ ಕೃತಕವಾದ ಬಣ್ಣ, ಕೆಮಿಕಲ್ ಬಳಕೆಯ ಹಿನ್ನೆಲೆಯಲ್ಲಿ ಇಂತಹ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ನಿಷೇಧವನ್ನು ಹೇರಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಚಹಾ ಪುಡಿಯಲ್ಲಿಯೂ ಸಹ ಬಣ್ಣ, ಮರದ ಪುಡಿಗಳು, ರಾಸಾಯಾನಿಕವನ್ನು ಬಳಸುತ್ತಿರುವ ಆಘಾತಕಾರಿಯಾದ ಪ್ರಕರಣವು ಬೆಳಕಿಗೆ ಬಂದಿದೆ.

ಇದರ ಬಗ್ಗೆ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದ್ದು, ಬೆಂಗಳೂರಿನ ಹಲವೆಡೆಗಳಲ್ಲಿ ಟೀ ಪುಡಿಯಲ್ಲಿ ಕೃತಕ ಬಣ್ಣ, ಕೆಮಿಕಲ್ ಅಷ್ಟೇ ಅಲ್ಲದೆ ಮರದ ಪುಡಿಗಳನ್ನು ಬೆರೆಸಲಾಗುತ್ತಿದೆ. ರುಚಿ ಹೆಚ್ಚಿಸಲು ರಾಸಾಯನಿಕಗಳ ಬಳಕೆ ಮಾಡಲಾಗುತ್ತಿದೆ. ಇಂಥಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಸಹ ಓದಿ: ಸಣ್ಣ, ಅತಿ ಸಣ್ಣ ರೈತರಿಗೆ ಅನಪೇಕ್ಷಿತ ಪರಿಹಾರ ಹಣ ಮಂಜೂರು!

ಟೀ ಪುಡಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆಯ ಹಿನ್ನೆಲೆಯಲ್ಲಿ ಅಂತಹ ಟೀ ಪುಡಿಗಳನ್ನು ನಿಷೇಧಿಸಲು ಸರ್ಕಾರವು ಮುಂದಾಗಿದೆ. ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯಿಂದ ಈ ನಿಟ್ಟಿನ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಬ್ಯಾನ್ ಆದೇಶವನ್ನು ಹೊರಡಿಸುವ ಸಾಧ್ಯತೆಯು ಇದೆ.

ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ 49 ಟೀ ಪುಡಿ ಸ್ಯಾಂಪಲ್ ಗಳಲ್ಲಿ 45 ಟೀ ಪುಡಿ ಅಸುರಕ್ಷಿತವಾಗಿರುವುದು ಕಂಡುಬಂದಿದೆ. ಟೀ ಪೌಡರ್ ತಯಾರಿಕೆಗೆ ಬಳಸುವಮತಹ ಪದಾರ್ಥಗಳಲ್ಲಿ ಚಹಾ ಬಣ್ಣವು ಹೆಚ್ಚಿಸಲು ಕೆಮಿಕಲ್ ಬಳಕೆಯನ್ನು ಮಾಡಲಾಗುತ್ತಿದೆ.

ರಸ್ತೆ ಬದಿಯ ಕೆಲವು ಅಂಗಡಿಗಳಲ್ಲಿ ತೂಕವನ್ನು ಹೆಚ್ಚಿಸಲು ಟೀ ಪುಡಿಯಲ್ಲಿ ಮರದ ಪುಡಿಗಳನ್ನು ಸಹ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಇದು ಸಹ ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಟೀ ಪುಡಿಗೆ ಬಳಸುವಂತಹ ಕೆಮಿಕಲ್, ಕ್ಯಾನ್ಸರ್ ಕಾರಕ ಅಂಶಗಳ ಬಳಕೆಯನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯರಿಗೆ ಸಿಹಿ ಸುದ್ದಿ: ಈ ಯೋಜನೆಗೆ ಅರ್ಜಿ ಆಹ್ವಾನ!

ನಗದು ರಹಿತ ಪ್ರಯಾಣ ಸೌಲಭ್ಯಕ್ಕೆ ಸಜ್ಜಾದ KSRTC..!


Share

Leave a Reply

Your email address will not be published. Required fields are marked *