ಹಲೋ ಸ್ನೇಹಿತರೇ, ರೈತರು ಸಾಲದ ಮೇಲಿನ ಬಡ್ಡಿ ಮನ್ನಾದ ಪ್ರಯೋಜನ ಪಡೆದುಕೊಳ್ಳಲು 31 ಮಾರ್ಚ್ ಒಳಗಾಗಿ ತಪ್ಪದೇ ಈ ಕೆಲಸವನ್ನು ಮಾಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ರೈತರು ಸಹಕಾರ ಬ್ಯಾಂಕುಗಳಿಂದ ಪಡೆದಿರುವ ಸಾಲವು 2023ರ ಡಿಸೆಂಬರ್ 31 ಸುಸ್ತಿಯಾಗಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ & ಕೃಷಿ ಆಧಾರಿತ ಸಾಲದ ಮೇಲಿನ ಬಡ್ಡಿ ಮನ್ನಾದ ಪ್ರಯೋಜನವನ್ನು ಪಡೆದುಕೊಳ್ಳು 31 ಮಾರ್ಚ್ ಒಳಗಾಗಿ ತಪ್ಪದೇ ಈ ಕೆಲಸವನ್ನು ಮಾಡಿದ್ರೆ ಮಾತ್ರ ನಿಮಗೆ ಈ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ.
Contents
ಬಾಕಿ ಇರುವ ಬಡ್ಡಿ ಮನ್ನಾಕ್ಕೆ ಮಾರ್ಚ್ 31 ಕೊನೆ ಅವಕಾಶ
ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಗ್ಸ್ ಸಹಕಾರ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು & ಪ್ರಾಥಮಿಕ ಸಹಕಾರಿ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ: 31-12- 2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ & ಕೃಷಿ ಸಂಬಂಧಿತ ಸಾಲಗಳ ಕಂತಿನ ಅಸಲನ್ನು ದಿನಾಂಕ: 31-03-2024 ಒಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ ಅಥವಾ ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿ ಮಾಡದೇ ಇದ್ದಲ್ಲಿ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು & ಮನ್ನಾ ಮಾಡಿದ ಬಡ್ಡಿಯ ಮೊಬಲಗುವನ್ನು ಸಹಕಾರ ಸಂಘಗಳಿಗೆ ಸರ್ಕಾರ ಭರ್ತಿ ಮಾಡಲು ಕೆಲವು ಷರತ್ತಿಗೆ ಒಳಪಟ್ಟು ಮಂಜೂರಾತಿ ನೀಡಿ ಸಹಕಾರ ಇಲಾಖೆಯಿಂದ ಆದೇಶವನ್ನು ಹೊರಡಿಸಲಾಗಿದೆ.
ನಿಗದಿಪಡಿಸಿದ ಕೊನೆಯ ದಿನಾಂಕ ಮುಂದೂಡಿಕೆ
ಸಹಕಾರ ಸಂಘಗಳು ಸಲ್ಲಿಸಿದ ಮಾಹಿತಿಯನ್ನು ದಿನಾಂಕ:29-02-2024 ರ ವರೆಗೂ 29,456 ರೈತರು ರೂ.281.88 ಕೋಟಿಗಳ ಸುಸ್ತಿ ಸಾಲವನ್ನು ಮರುಪಾವತಿಸಿದ್ದು ಇದರ ಮೇಲೆ ಸರ್ಕಾರದ ಬಡ್ಡಿ ರೂ.214.55 ಕೋಟಿ ಆಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಸಿಒ 291 ಸಿಎಲ್‌ಎಸ್ 2023, ದಿನಾಂಕ: 20-01-2024 ರ ಆದೇಶದಡಿ ಬಡ್ಡಿ ಮನ್ನಾ ಮಾಡುವ ಯೋಜನೆಯಲ್ಲಿ ಬಡ್ಡಿ ಮನ್ನಾ ಪ್ರಯೋಜನವನ್ನು ಪಡೆಯಲು ರಾಜ್ಯದ ರೈತರು ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಲ್ಯಾಂಪ್ಸ್ ಸಹಕಾರ ಸಂಘಗಳು,
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು & ಪ್ರಾಥಮಿಕ ಸಹಕಾರಿ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ: 31-12-2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಂಬಂಧಿತ ಸಾಲಗಳ ಕಂತಿನ ಅಸಲನ್ನು ಪಾವತಿಸಲು ನಿಗದಿಪಡಿಸಿದ ದಿನಾಂಕ:29-02-2024ನ್ನು ದಿನಾಂಕ: 31-03-2024 ರವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಸಹಕಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಲಿಂಕ್: Click here
ಇತರೆ ವಿಷಯಗಳು
ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಬಂತಾ ಚೆಕ್ ಮಾಡಿ? ಇಲ್ಲಿದೆ ಡೈರೆಕ್ಟ್ ಲಿಂಕ್
ಈಗ ಮತದಾರರ ಕಾರ್ಡ್ ಮಾಡುವುದು ಇನ್ನಷ್ಟು ಸುಲಭ! ಒಂದೇ ಕ್ಲಿಕ್ ನಲ್ಲಿ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಿ