rtgh
Headlines

ಕೃಷಿ ಸಾಲ ಪಡೆದ ರೈತರಿಗೆ ಭರ್ಜರಿ ಗುಡ್ ನ್ಯೂಸ್!

Agriculture Loan Intrest Waiver
Share

ಹಲೋ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸಾಲ ನೀಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾದಂತೆ ಸಾಲಕೊಳ್ಳುವವರ ಸಂಖ್ಯೆ ಕೂಡ ಅಧಿಕವಾಗುತ್ತಲೆ ಇದೆ. ಸಾಲವನ್ನು ಅನೇಕ ಕಾರಣಗಳಿಗೆ ಪಡೆಯಲಾಗಿದ್ದರೂ ಕೂಡ ಕೃಷಿ ಉದ್ದೇಶಕ್ಕಾಗಿ ಪಡೆಯುವ ಸಾಲಗಳಿಗೆ ಅಧಿಕ ಮಾನ್ಯತೆ ಇದೆ. ಈ ಬಾರಿ ಸಹ ಅನೇಕ ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದ ರೈತರು ಬೆಳೆ ಬೆಳೆದು ಸಾಲ ತೀರಿಸಬೇಕು ಎಂದುಕೊಂಡರೂ. ಅಕಾಲಿಕ ಮಳೆ ಪರಿಸರ ಕಾರಣಕ್ಕೆ ಬೆಳೆ ನಾಶವಾದ ಕಾರಣ ಹಣ ಮರಳಿ ನೀಡಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಅಂತವರಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ಶುಭ ಸುದ್ದಿ ನೀಡಿದ್ದಾರೆ. ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Agriculture Loan Intrest Waiver

ಸಹಕಾರಿ ಸಂಸ್ಥೆಗಳು ಸಾಲ ನೀಡುವ ಸಂಖ್ಯೆ ಅಧಿಕವಿದೆ‌. ಇಲ್ಲಿ ಸಾಲ ಪಡೆದ ರೈತರಿಗೆ ಇದೀಗ ಸ್ವಲ್ಪ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಮಧ್ಯಮ ಅವಧಿ ಹಾಗೂ ದೀರ್ಘಾವಧಿಯ ಸಾಲವನ್ನು 2023ರ ಡಿಸೆಂಬರ್ 31ರ ಒಳಗಾಗಿ ಮಾಡಿದ್ದ ಸಾಲಕ್ಕೆ ಅಸಲು ಮರುಪಾವತಿ ಮಾಡಿದ್ದವರಿಗೆ ಬಡ್ಡಿದರ ಮನ್ನಾ ಮಾಡಲು ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ ಸಹಕಾರಿ ಸಂಸ್ಥೆಗಳಿಗೂ ಸಹ ರೈತರ ಸಾಲ ಮರುಪಾವತಿ ಆಗಲಿದ್ದು ದೊಡ್ಡ ಮಟ್ಟದಲ್ಲಿ ಸಹಕಾರ ಸಿಕ್ಕಂತಾಗುತ್ತದೆ. ಇದಲ್ಲದೇ ಮುಂದಿನ ವರ್ಷದ ಸಾಲ ನೀಡಲು ಕೂಡ ಮತ್ತೆ ಉತ್ತೇಜನ ದೊರೆಯುವಂತಾಗುತ್ತದೆ.

ರೈತರ ಬೆಳೆಗೆ ಬರ ಘೋಷಣೆ:

ಮಳೆಯ ಅಭಾವದ ಕಾರಣ ಬೆಳೆ ನಾಶವಾಗುತ್ತಿದೆ. ಈ ಕಾರಣಕ್ಕಾಗಿ 223 ರಾಜ್ಯದ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವುದಾಗಿ ಹೇಳಿದ್ದರು. ಈ ಮೂಲಕ ಅದನ್ನು ಕಾರ್ಯ ರೂಪಕ್ಕೆ ತರಲು ಸರ್ಕಾರ ಮುಂದಾಗಿದೆ. ಕೃಷಿ ಉದ್ದೇಶಕ್ಕಾಗಿ ಮಧ್ಯಮ ಮತ್ತು ದೀರ್ಘಾವಧಿಯ ಸಾಲ ಮಾಡಿದವರು ಫಸಲು ಸರಿಯಾಗಿ ಸಿಗದೆ ಸಾಲ ಕಟ್ಟಲು ಆಗದೇ ಸಂಕಷ್ಟಗೊಂಡಿದ್ದಾರೆ. ಹಾಗಾಗಿ ಸಹಕಾರಿ ಸಂಸ್ಥೆಗೆ ಸಾಲ ಮರುಪಾವತಿ ಆಗುತ್ತಿಲ್ಲ. ಇದರ ಜೊತೆಗೆ ಸಹಕಾರಿ ಸಂಸ್ಥೆಗಳು ರೈತರು ಪಡೆದ ಸಾಲದ ಹಣ ಹಿಂದುರುಗಿಸದ ಕಾರಣ ನಬಾರ್ಡ್ಗೆ ಹಣ ಸಲ್ಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬರ ಪರಿಹಾರ ಘೋಷಣೆ ಮಾಡಲಾಗಿದೆ.

ಇದನ್ನು ಓದಿ: NPS ನ ಈ ನಿಯಮವು ಏಪ್ರಿಲ್ 1 ರಿಂದ ಚೇಂಜ್!! ಈ ಕೆಲಸವನ್ನು ಮಿಸ್‌ ಮಾಡ್ದೆ ಮಾಡಿ

ಇದುವರೆಗಿನ ಲೆಕ್ಕಾಚಾರ

ಸಹಕಾರಿ ಸಂಸ್ಥೆಗಳ ಮೂಲಕ 56,000 ರೈತರು ಸಾಲ ಪಡೆದಿದ್ದು ತಿಳಿದು ಬಂದಿದೆ. 58 ಲಕ್ಷ ದಷ್ಟು ಮಧ್ಯಮ ಮತ್ತು ದೀರ್ಘಾವಧಿಯ ಕೃಷಿ ಸಾಲ ಪಡೆದಿರುವುದಾಗಿ ತಿಳಿದು ಬಂದಿದೆ. ಇದರ ಮೇಲೆ ಬಡ್ಡಿದರ 44 ಲಕ್ಷ ರೂಪಾಯಿ ಯಷ್ಟಾಗಿದೆ ಎಂದು ತಿಳಿದಿದೆ. ರೈತರು ರಾಜ್ಯದ ಸಹಕಾರಿ ಸಂಘ, ಕೃಷಿ ಪತ್ತಿನ ಸಹಕಾರಿ ಸಂಘ, ಜಿಲ್ಲಾ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲವನ್ನು ಪಡೆದಿದ್ದರೆ ಆ ಸಾಲದ ಅಸಲನ್ನು ಮಾರ್ಚ್ ಅಂತ್ಯದ ಒಳಗೆ ನೀಡಿದರೆ ಬಡ್ಡಿದರ ಮನ್ನಾ ಮಾಡಲು ಸರ್ಕಾರ ಆದೇಶ ನೀಡಿದೆ.

ಸರಕಾರವೇ ನೀಡುತ್ತೆ ಬಡ್ಡಿ ಮೊತ್ತ:

ರೈತರು ಕಟ್ಟಬೇಕಾಗಿರುವ ಬಡ್ಡಿ ಮೊತ್ತವನ್ನು ಸರಕಾರವೇ ನೀಡಲು ತೀರ್ಮಾನಿಸಿದ್ದು ಅದಕ್ಕೆ ಕೆಲವು ಷರತ್ತನ್ನು ವಿಧಿಸಲಾಗಿದೆ. ರೈತರು ರಾಜ್ಯದ ಸಹಕಾರಿ ಸಂಘ, ಕೃಷಿ ಪತ್ತಿನ ಸಹಕಾರಿ ಸಂಘ, ಜಿಲ್ಲಾ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆ ಅಲ್ಲಿ ಮಾಡಿದ್ದ ಸಾಲಕ್ಕೆ ಮಾತ್ರವೇ ಬಡ್ಡಿಮನ್ನಾ ಆಗಲಿದೆ. ಅದರ ಜೊತೆಗೆ ಕೃಷಿಯೇತರ ಉದ್ದೇಶಕ್ಕೆ ಮಾಡಿದ್ದ ಸಾಲಕ್ಕೆ ಈ ಬಡ್ಡಿ ಮನ್ನ ಇರಲಾರದು. ನಬಾರ್ಡ್ ಗುರುತಿಸಿದ ನೀರಾವರಿ, ಪಶುಸಂಗೋಪನೆ, ಕೃಷಿ ಯಾಂತ್ರಿಕರಣ, ತೋಟಗಾರಿಕೆ, ಮೀನುಗಾರಿಕೆ ಇತರ ಅಂಶಕ್ಕೆ ಮಾಡಿದ್ದ ಸಾಲಗಳಿದ್ದರೆ ಮಾತ್ರವೇ ಬಡ್ಡಿ ಮನ್ನಾ ಯೋಜನೆ ಸಿಗಲಿದೆ. ಈ ಮೂಲಕ ಸಂಬಂಧ ಪಟ್ಟ ಸಹಕಾರಿ ಸಂಸ್ಥೆ ಬಡ್ಡಿಯ ಮೊತ್ತವನ್ನು ಸರಕಾರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಇತರೆ ವಿಷಯಗಳು:

500 ರೂ.ಗೆ ಗ್ಯಾಸ್, 75 ರೂ.ಗೆ ಪೆಟ್ರೋಲ್: ಚುನಾವಣೆಗೂ ಮುನ್ನ ಹೊರ ಬಿತ್ತು ದೊಡ್ಡ ಘೋಷಣೆ

7% ಸಬ್ಸಿಡಿ, ಕ್ಯಾಶ್‌ಬ್ಯಾಕ್ ಜೊತೆ ಬಡ್ಡಿ ರಹಿತ ₹50,000 ಸಾಲ.! ಇದು ಮೋದಿ ಸರ್ಕಾರದ ದೊಡ್ಡ ಯೋಜನೆ


Share

Leave a Reply

Your email address will not be published. Required fields are marked *