ಬೆಂಗಳೂರು : ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಅಂಗವಿಕಲ ಕೋಟಾದಲ್ಲಿ ಮೀಸಲಾತಿಯನ್ನು ಬಯಸಿರುವ ಅಭ್ಯರ್ಥಿಗಳಿಗೆ ಜೂನ್ 10 ರಿಂದ 12ರ ವರೆಗೆ ವೈದ್ಯಕೀಯ ತಪಾಸಣೆಯು ನಡೆಯಲಿದೆ.
ಮಲ್ಲೇಶ್ವರದ KEA ಕಚೇರಿಯಲ್ಲಿ ತಜ್ಞ ವೈದ್ಯರು ಅಭ್ಯರ್ಥಿಗಳನ್ನು ತಪಾಸಣೆ ಮಾಡುವರು. 783 ಅಭ್ಯರ್ಥಿಗಳು ಅಂಗವಿಕಲದ ಕೋಟಾದಲ್ಲಿ ಮೀಸಲಾತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. 3 ದಿನ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿಯನ್ನು ನೀಡಿದ್ದಾರೆ.
ತಪಾಸಣೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗಿದೆ. ಅವರ ಹೆಸರಿನ ಮುಂದೆ ಸೂಚಿಸಿದ ದಿನದಂದು ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕು.
ಈ ದಾಖಲೆಗಳನ್ನು ತರಬೇಕು: CET ಅರ್ಜಿಯ ಪ್ರತಿ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ಪ್ರವೇಶ ಪತ್ರ, ವೈದ್ಯಕೀಯ ಪ್ರಮಾಣಪತ್ರ, ಶ್ರವಣದೋಷದ ಸಮಸ್ಯೆ ಇರುವ ವಿದ್ಯಾರ್ಥಿಗಳು ಶ್ರವಣ ಸಂಸ್ಥೆಯಿಂದ ಪಡೆದಂತಹ ಪ್ರಮಾಣ ಪತ್ರಗಳನ್ನು ಮತ್ತು ಅಖಿಲ ಭಾರತ ವಾಕ್ ಅನ್ನು ತರಬೇಕು. ವೈದ್ಯಕೀಯ ಸಮಿತಿ ನಿರ್ಧಾರವೇ ಅಂತಿಮ ಎಂದು ಅವರು ತಿಳಿಸಿದ್ದಾರೆ.
ಇತರೆ ವಿಷಯಗಳು:
ಅನ್ನಭಾಗ್ಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ವಾ? ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ
ಮಗಳ ಭವಿಷ್ಯಕ್ಕಾಗಿ ಸರ್ಕಾರದ ಯೋಜನೆ! ಮದುವೆ ವಯಸ್ಸಿಗೆ 63 ಲಕ್ಷ