ಹಲೋ ಸ್ನೇಹಿತರೇ, ಈ ಹಿಂದೆ ಮೌಲ್ಯಾಂಕನ ಪರೀಕ್ಷೆ ನಡೆಸದಂತೆ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಪರಿಶೀಲನೆ ಮಾಡಿ ಈಗ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದೆ. ರಾಜ್ಯ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಹೊಸ ವೇಳಪಟ್ಟಿ ಪ್ರಕಟ, ವೇಳಪಟ್ಟಿಯನ್ನು ಈ ಲೇಖನದಲ್ಲಿ ತಿಳಿಯಿರಿ.
Contents
ಈಗಾಗಲೇ ಏಷ್ಟು ಪರೀಕ್ಷೆ ನಡೆದಿತ್ತು?
ಶಿಕ್ಷಣ ಇಲಾಖೆಯ ವೇಳಾಪಟ್ಟಿಯ ಪ್ರಕಾರ ಮಾರ್ಚ್ 12 ಮತ್ತು ಮಾರ್ಚ್ 13ನೇ ತಾರೀಖಿನ ದಿನದಂದು ಪ್ರಥಮ & ದ್ವಿತೀಯ ಭಾಷೆ ಪರೀಕ್ಷೆ ನಡೆದಿತ್ತು. ನಂತರ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ನೇತೃತ್ವದ ನ್ಯಾಯಪೀಠ ಪರೀಕ್ಷೆಗೆ ತಡೆ ಆಜ್ಞೆಯನ್ನು ಹೊರಡಿಸಿದ್ದರು. ತಡೆ ನೀಡಿದ ಕಾರಣದಿಂದ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವುದಾಗಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈ ಹಿಂದೆ ಆದೇಶ ಹೊರಹಾಕಿತ್ತು. ಈಗ ವಾದ ವಿವಾದಗಳನ್ನು ಪರಿಶೀಲಿಸಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ.
ಶಿಕ್ಷಣ ಇಲಾಖೆಯ ನೂತನ ವೇಳಾಪಟ್ಟಿ :-
ಮಾರ್ಚ್ 25 ರಿಂದ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ. ಶಿಕ್ಷಣ ಇಲಾಖೆಯ ನೂತನ ವೇಳಾಪಟ್ಟಿ
5 ನೇ ತರಗತಿಯ ಮಕ್ಕಳ ನೂತನ ವೇಳಾಪಟ್ಟಿ:
ಮಾರ್ಚ್ 25 ಸೋಮವಾರ ಪರಿಸರ ಅಧ್ಯಯನ ವಿಷಯ ಮತ್ತು ಮಾರ್ಚ್ 26 ಮಂಗಳವಾರ ಗಣಿತ ಪರೀಕ್ಷೆ ನಡೆಯಲಿದೆ.
8 ನೇ ತರಗತಿಯ ಮಕ್ಕಳ ನೂತನ ವೇಳಾಪಟ್ಟಿ
- ಮಾರ್ಚ್ 25 ಸೋಮವಾರ ತೃತೀಯ ಭಾಷೆ.
- ಮಾರ್ಚ್ 26 ಮಂಗಳವಾರ ಗಣಿತ.
- ಮಾರ್ಚ್ 27 ಬುಧವಾರ ವಿಜ್ಞಾನ.
- ಮಾರ್ಚ್ 28 ಗುರುವಾರ ಸಮಾಜ ವಿಜ್ಞಾನ ಪರೀಕ್ಷೆ ನಡೆಯತ್ತದೆ.
9 ನೇ ತರಗತಿಯ ಮಕ್ಕಳ ನೂತನ ವೇಳಾಪಟ್ಟಿ
- ಮಾರ್ಚ್ 25 ಸೋಮವಾರ ತೃತೀಯ ಭಾಷೆ.
- ಮಾರ್ಚ್ 26 ಮಂಗಳವಾರ ಗಣಿತ.
- ಮಾರ್ಚ್ 27 ಬುಧವಾರ ವಿಜ್ಞಾನ.
- ಮಾರ್ಚ್ 28 ಗುರುವಾರ ಸಮಾಜ ವಿಜ್ಞಾನ ಪರೀಕ್ಷೆ ನಡೆಯತ್ತದೆ.
SSLC ಪರೀಕ್ಷೆ ಇರುವ ಶಾಲೆಗಳಲ್ಲಿ ಪರೀಕ್ಷೆ ಸಮಯ ಏನು?
ಕೆಲವು ಪ್ರಾಥಮಿಕ ಶಾಲೆಗಳಲ್ಲಿ SSLC ಪರೀಕ್ಷೆ ನಡೆಯಲಿದ್ದು. ಅಂತಹ ಶಾಲೆಗಳಲ್ಲಿ ಪರೀಕ್ಷೆಯನ್ನೂ ಮಧ್ಯಾನ್ಹ ನಡೆಸಲಾಗುತ್ತದೆ. ಶಾಲೆಗಳ ನೋಟಿಸ್ ಬೋರ್ಡ್ ನಲ್ಲಿ / ನಿಮ್ಮ ಶಾಲಾ ಶಿಕ್ಷಕರು ಪರೀಕ್ಷೆ ಸಮಯ ತಿಳಿಸುತ್ತಾರೆ. ಆದರೆ SSLC ಪರೀಕ್ಷೆ ನಡೆಯದ ಶಾಲೆಗಳಲ್ಲಿ ಹಳೆಯ ವೇಳಾಪಟ್ಟಿಯಲ್ಲಿ ಇರುವಂತೆ ಬೆಳಗ್ಗೆ ಪರೀಕ್ಷೆಗಳು ನಡೆಯುತ್ತವೆ.
ಇತರೆ ವಿಷಯಗಳು
ಸಚಿವೆಯಿಂದ ಬೆಳ್ಳಂಬೆಳಿಗ್ಗೆ ಹೊಸ ಅಪ್ಡೇಟ್!! ಅನೇಕ ಮಹಿಳೆಯರಿಗೆ ಖಾತೆಗೆ ಬರಲ್ಲ 7ನೇ ಕಂತಿನ ಹಣ
ಚುನಾವಣೆಗೂ ಮುನ್ನವೇ ಜನರಿಗೆ ಭರ್ಜರಿ ಸುದ್ದಿ.! ಗ್ಯಾಸ್ ಸಿಲಿಂಡರ್ ಪೆಟ್ರೋಲ್ ಬೆಲೆ ಇಷ್ಟು ಇಳಿಕೆನಾ.?