ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮಹಿಳೆಯರಿಗೆ 2,000 ರೂ. ಸಹಾಯಧನ ನೀಡಲಿದೆ. ಈ ಯೋಜನೆಯಡಿ ಮೊದಲ 6 ಕಂತಿನ ಹಣ ಮಹಿಳೆಯರ ಖಾತೆಗೆ ಜಮೆಯಾಗಿದೆ. 7 ನೇ ಕಂತಿನ ಹಣದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಮಾರ್ಚ್ 2 ನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಲ್ಲಾ ಕಂತಿನ ಹಣ ಜಮೆಯಾಗಲಿದಿಯಾ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈಗಾಗಲೇ 5 & 6ನೇ ಕಂತಿನ ಹಣ ಇನ್ನೂ ಬಂದಿಲ್ಲದವರಿಗೆ ಶೀಘ್ರದಲ್ಲೇ ಖಾತೆಗೆ ಜಮೆ ಮಾಡಲಾಗುವುದು. ಒಂದು ಕಂತಿನ ಹಣವೂ ಬಾರದೆ ಇದ್ದರೆ ಸರ್ಕಾರವು ಎಲ್ಲಾ ಹಣವನ್ನು ಒಮ್ಮೆಲೆ ಖಾತೆಗೆ ಜಮಾ ಮಾಡುತ್ತದೆ.
Contents
7ನೇ ಕಂತಿನ ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ?
7ನೇ ಕಂತಿನ ಹಣ ಮಾರ್ಚ್ 15, 2024 ರಂದು ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಮಾರ್ಚ್ ತಿಂಗಳ ಕೊನೆಯ ದಿನಾಂಕದೊಳಗೆ ಎಲ್ಲಾ ಮಹಿಳೆಯರಿಗೂ 7ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ.
ಒಮ್ಮೆಲೆ ಜಮಾ ಆಗಲಿದೆ 6 ಕಂತಿನ ಹಣ:-
ತಾಂತ್ರಿಕ ಸಮಸ್ಯೆಯಿಂದ ಮತ್ತು ಸರಿಯಾಗಿ ಮಾಹಿತಿ ನೀಡದೆ ಇರುವ ಕಾರಣದಿಂದ ಜಮೆಯಾಗದೇ ಉಳಿದಿದ್ದ ಹಣವನ್ನು ಒಮ್ಮೆಲೆ ವರ್ಗಾವಣೆ ಆಗಲಿದೆ. ಈಗಾಗಲೇ ಜನವರಿ ಕೊನೆಯ ವಾರದಲ್ಲಿ ಕೆಲವು ಮಹಿಳೆಯರಿಗೆ ಹಣ ಜಮಾವಾಗಿದ್ದು, ಜಮಾ ಆಗದೆ ಇರುವ ಮಹಿಳೆಯರಿಗೆ ಮಾರ್ಚ್ ತಿಂಗಳ ಒಳಗೆ 10,000 ರೂ. ಒಮ್ಮೆಲೆ ಜಮೆಯಾಗಲಿದೆ. ಮಾರ್ಚ್ ತಿಂಗಳ ಕೊನೆವರೆಗೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣವೂ ವರ್ಗಾವಣೆಯಾಗದೆ ಇದ್ದಲ್ಲಿ ನಿಮ್ಮ ಹತ್ತಿರ ಗ್ರಾಮ್ ಒನ್ ಕೇಂದ್ರ/ ಇಲಾಖೆಯ ಅಧಿಕೃತ ವೆಬ್ಸೈಟ್ ನ್ನು ಭೇಟಿ ಮಾಡಿ.
ಯಾವ ಯಾವ ಕಾರಣಗಳಿಂದ ಮಹಿಳೆಯರಿಗೆ ಹಣ ವರ್ಗಾವಣೆಯಾಗಿಲ್ಲಾ?
- ಆಧಾರ್ ಲಿಂಕ್: ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಅಂತವರ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ.
- ಯಜಮಾನಿ ಆಗಿರದಿದ್ದರೆ: ರೇಷನ್ ಕಾರ್ಡ್‌ನಲ್ಲಿ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದೆ ಇದ್ದರೆ ಅಂತವರ ಖಾತೆಗೂ ಹಣ ಜಮೆಯಾಗಿಲ್ಲ.
- ಎನ್ ಪಿ ಸಿ ಸಿ : ಆಧಾರ್ ಲಿಂಕ್ ಆಗಿದ್ದು ನೀವೇ ಮನೆಯ ಯಜಮಾನಿ ಆಗಿದ್ದರೂ ಸಹ ಎನ್ ಪಿ ಸಿ ಸಿ ಮ್ಯಾಪಿಂಗ್ ಮಾಡಿಸದಿದ್ದಲ್ಲಿ ಹಣ ಜಮೆಯಾಗುವುದಿಲ್ಲ.
- ಇ ಕೆವೈ ಸಿ : ನಿಮ್ಮ ಬ್ಯಾಂಕ್ ಖಾತೆಗೆ E-KYC ಅಪ್ಡೇಟ್ ಆಗದಿದ್ದರೆ ಹಣ ಜಮೆಯಾಗುವುದಿಲ್ಲ.
- ತಪ್ಪಾದ ಮಾಹಿತಿ : ನೀವು ಅರ್ಜಿ ಸಲ್ಲಿಸುವಾಗ ನೀಡುವ ಎಲ್ಲಾ ದಾಖಲೆಯಲ್ಲಿ ಮಹಿಳೆಯ ಹೆಸರು/ ವಿಳಾಸ ಒಂದೇ ರೀತಿಯಿಲ್ಲ/ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ.
- ಸರ್ಕಾರಿ ನೌಕರರು : ನೀವು /ನಿಮ್ಮ ಮನೆಯ ಸದಸ್ಯರು ಸರ್ಕಾರಿ ನೌಕರರು ಆಗಿದ್ದಲ್ಲಿ ಆದರೂ ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಅರ್ಹವಾಗಿರುವುದಿಲ್ಲ.
- ಆದಾಯ ತೆರಿಗೆ : ಅರ್ಜಿದಾರರು ಆದಾಯ ತೆರಿಗೆ ಪಾವತಿ ಮಾಡುತ್ತಾ ಇದ್ದಲ್ಲಿ ನಿಮಗೆ ಹಣ ಸಿಗುವುದಿಲ್ಲ.
- ತಾಂತ್ರಿಕ ದೋಷ : DBT ಹಣ ವರ್ಗಾವಣೆ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಕೆಲವೊಮ್ಮೆ ಸರ್ವರ್ ಸಮಸ್ಯೆ & ತಾಂತ್ರಿಕ ದೋಷ ಇದ್ದಲ್ಲಿ ಮಹಿಳೆಯರ ಖಾತೆಗೆ ಹಣ ಬಾರದೆ ಇರಬಹುದಾಗಿದೆ.
ಇತರೆ ವಿಷಯಗಳು
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಲ್ಲಿ ನೇಮಕಾತಿ.! ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! ಆಸಕ್ತರು ಅಪ್ಲೇ ಮಾಡಿ
ಸರ್ಕಾರದಿಂದ ಶಾಕಿಂಗ್ ಸುದ್ದಿ; ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದವರು ತಪ್ಪದೇ ನೋಡಿ