ಕರ್ನಾಟಕದ ಬಾಲವಿಕಾಸ ಅಕಾಡೆಮಿಯಿಂದ 2023-24ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ್ರಾಷ್ಟ್ರ ಮಟ್ಟದಲ್ಲಿ ವಿಶೇಷವಾದ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ “ಬಾಲಗೌರವ ಪ್ರಶಸ್ತಿ” ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮಕ್ಕಳು ಕ್ರೀಡೆ, ಸಂಗೀತ, ನೃತ್ಯ ಬಹುಮುಖ ಪ್ರತಿಭೆ, ನಟನೆ, ಚಿತ್ರಕಲೆ ಹಾಗೂ ವಿಜ್ಞಾನ ಮತ್ತು ಸಂಶೋಧನೆ ಸೇರಿದಂತೆ 07 ಕ್ಷೇತ್ರದಲ್ಲಿ ಅಸಾಧರಣೆಯ ಸಾಧನೆಯನ್ನು ಮಾಡಿದೆ ಪ್ರಶಸ್ತಿಯನ್ನು ಪಡೆದ ಪುರಸ್ಕೃತ ಮಗುವಾಗಿರಬೇಕು.
ಇಂತಹ ಮಕ್ಕಳು ಅಕಾಡೆಮಿಯ ಬಾಲಗೌರವ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತವಾದ ನಕಲು ದಾಖಾಲೆಗಳೊಂದಿಗೆ ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಆಗಸ್ಟ್ 26 ರೊಳಗಾಗಿ ಅಕಾಡೆಮಿಯ ಕೇಂದ್ರದ ಕಚೇರಿಯಲ್ಲಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸಬೇಕು.
ನಂತರ ಬಂದಂತಹ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಈಗಾಗಲೇ ಬಾಲಗೌರವದ ಪ್ರಶಸ್ತಿಯನ್ನು ಪಡೆದವರ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಇದನ್ನೂ ಸಹ ಓದಿ: ಭಾರತೀಯ ನೌಕಾಪಡೆಯಲ್ಲಿ 741 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ನಾಳೆ ಕೊನೆಯ ದಿನಾಂಕ
ಪ್ರಶಸ್ತಿಗಾಗಿ ಅರ್ಜಿ ನಮೂನೆ ಮತ್ತು ಮಾನದಂಡಗಳನ್ನು ಕಚೇರಿಯ ವೆಬ್ಸೈಟ್ ಲಿಂಕ್ http://balavikasaacademy.karnataka.gov.in/ ಗೆ ಭೇಟಿಯನ್ನು ನೀಡಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಧಾರವಾಡದ ಲಕ್ಕಮ್ಮನಹಳ್ಳಿಯ KHB ಕಾಲೋನಿಯ ಚಂದ್ರಕಾ ಲೇಔಟ್ನ ಹಿಂಭಾಗದ ಕರ್ನಾಟಕ ಬಾಲವಿಕಾಸನ ಅಕಾಡೆಮಿಯ ಯೋಜನಾಧಿಕಾರಿಗಳ ಕಚೇರಿ ಅಥವಾ ದೂರವಾಣಿ.
0836-2461666 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಿಜಯ್ಕುಮಾರ್ ಅವರು ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಇತರೆ ವಿಷಯಗಳು:
ರೈತರಿಗೆ ಸಿಹಿ ಸುದ್ದಿ: ಬೆಳೆ ವಿಮೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
ಕೇವಲ ₹600 ಕ್ಕೆ ಸಿಗಲಿದೆ LPG ಸಿಲಿಂಡರ್..!! ಇಂದೇ ಬುಕ್ ಮಾಡಿ