ಹಲೋ ಸ್ನೇಹಿತರೇ, ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಕೆಲ ಸಮಯದವರೆಗೆ ಪೇಮೆಂಟ್ ಸಿಸ್ಟಮ್ ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ India ನಿನ್ನೆಯೇ ನೋಟೀಸ್ ಜಾರಿ ಮಾಡಿದೆ. ಇನ್ನು ಯಾವೆಲ್ಲಾ ಬ್ಯಾಂಕ್‌ಗಳು ನೋಟಿಸ್ ಜಾರಿ ಮಾಡಲಿದೆ ಎಂಬ ಬಗ್ಗೆ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರ ಪ್ರಕಾರ ಕೆಲವು ಬ್ಯಾಂಕ್‌ಗಳ UPI, IPMS & ಇತರ ಪಾವತಿ ವ್ಯವಸ್ಥೆಗಳು ಕೆಲವು ಸಮಯದವರೆಗೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ. ಅನೇಕ ಬ್ಯಾಂಕ್‌ಗಳಿಗೆ ಸೇವೆಗಳನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಸಿಸ್ಟಮ್‌ನ ಮೇಲೆ ‘ರಾನ್ಸಮ್‌ವೇರ್’ ದಾಳಿಯ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ಮೂಲಗಳ ಪ್ರಕಾರ,ಈ ದಾಳಿಯಿಂದ 300 ಸಣ್ಣ ಬ್ಯಾಂಕ್‌ಗಳ ವಹಿವಾಟು ಮೇಲೆ ಪರಿಣಾಮ ಬೀರಿದೆ.
Contents
ನಿನ್ನೆ ಸಂಜೆ ನೋಟಿಸ್ ಜಾರಿ :
ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ದುಷ್ಪರಿಣಾಮವನ್ನು ತಪ್ಪಿಸಲು, NPCI ಕೆಲವು ಸಮಯದವರೆಗೆ C-Edge Technologies ಅನ್ನು ಬಳಸುವುದನ್ನು ನಿಲ್ಲಿಸಿದೆ. ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಈ ಅವಧಿಯಲ್ಲಿ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ NPCI ಜುಲೈ 31, 2024 ರಂದು ಸಂಜೆ 6:39 ಕ್ಕೆ ಸಾಮಾಜಿಕ ಮಾಧ್ಯಮ ಸೂಚನೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಸಹಕಾರ & ಗ್ರಾಮೀಣ ಬ್ಯಾಂಕುಗಳಿಗೆ ಸೇವೆ :
C-Edge Technologies Limited ಒಂದು ತಂತ್ರಜ್ಞಾನ ಕಂಪನಿಯಾಗಿದೆ. ಇದು ಸಹಕಾರ & ಗ್ರಾಮೀಣ ಬ್ಯಾಂಕುಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಸೀ-ಎಡ್ಜ್ ಟೆಕ್ನಾಲಜೀಸ್‌ನ ಕೆಲವು ಸಿಸ್ಟಮ್‌ಗಳ ಮೇಲೆ ransomware ದಾಳಿ ನಡೆದಿರುವುದು ಗಮನಕ್ಕೆ ಬಂದಿದೆ ಎಂದು NPCI ಹೇಳಿದೆ. ಈ ಮೂಲಕ ಬಹುತೇಕ ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಿಗೆ ಸೇವೆ ಒದಗಿಸಲಾಗುತ್ತದೆ.
ಗುಜರಾತ್‌ನ 17 ಬ್ಯಾಂಕ್‌ಗಳು ಬಾಧಿತ :
ವರದಿಯೊಂದರ ಪ್ರಕಾರ,ಗುಜರಾತ್‌ನ 17 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಇದರಿಂದ ಪ್ರಭಾವಿತವಾಗಿವೆ ಎನ್ನಲಾಗಿದೆ. ಅಮ್ರೇಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿಬಿ) ಕೂಡ ಈ ಪಟ್ಟಿಯಲ್ಲಿ ಸೇರಿದೆ, ‘ಸಿ-ಎಡ್ಜ್’ ಸಾಫ್ಟ್‌ವೇರ್‌ನಲ್ಲಿನ ಸಮಸ್ಯೆಯಿಂದಾಗಿ ಬ್ಯಾಂಕ್‌ನ ಆನ್‌ಲೈನ್ ವಹಿವಾಟು ಮೇಲೆ ಪರಿಣಾಮ ಬೀರಿದೆ.
ಸಿ-ಎಡ್ಜ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಮತ್ತು ಅಗತ್ಯ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ. ಬಾಧಿತ ಬ್ಯಾಂಕ್‌ಗಳ ಸಂಪರ್ಕವನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುವುದು.ಸೀ-ಎಡ್ಜ್ ಟೆಕ್ನಾಲಜೀಸ್‌ನ ವೆಬ್‌ಸೈಟ್ ಪ್ರಕಾರ, ಇದು TCS ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜಂಟಿ ಉದ್ಯಮವಾಗಿದೆ.
Ransomware ದಾಳಿ ಎಂದರೇನು? :
Ransomware ದಾಳಿಯು ಒಂದು ರೀತಿಯ ಸೈಬರ್ ದಾಳಿಯಾಗಿದೆ.ಇದರಲ್ಲಿ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ ಅಥವಾ ನೆಟ್‌ವರ್ಕ್ ಗೆ ಅಕ್ಸೆಸ್ ಪಡೆದು ಪ್ರಮುಖ ಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡುತ್ತಾರೆ. ಎನ್‌ಕ್ರಿಪ್ಟ್ ಮಾಡುವುದು ಎಂದರೆ ಆ ಫೈಲ್‌ಗಳು ನಿಷ್ಪ್ರಯೋಜಕವಾಗುತ್ತವೆ, ಮತ್ತೆ ನೀವು ಅವುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ನಂತರ ಹ್ಯಾಕರ್‌ಗಳು ನಿಮ್ಮಿಂದ ಹಣವನ್ನು ಕೇಳುತ್ತಾರೆ, ಅದನ್ನು ರಾನ್ಸಮ್ ಎಂದು ಕರೆಯಲಾಗುತ್ತದೆ. ನೀವು ಹಣ ಪಾವತಿಸಿದರೆ ಮಾತ್ರ ನಿಮ್ಮ ಫೈಲ್‌ಗಳನ್ನು ಡೀಕ್ರಿಪ್ಟ್ ಮಾಡುವುದಾಗಿ ಹೇಳುತ್ತಾರೆ.
ಇತರೆ ವಿಷಯಗಳು
ಮನೆ ಇಲ್ಲದವರಿಗೆ ಕೇಂದ್ರದಿಂದ ಉಚಿತ ಮನೆ ಸೌಲಭ್ಯ! ಈ ರೀತಿ ಅಪ್ಲೇ ಮಾಡಿ
ಇಂದಿನಿಂದ ದೇಶಾದ್ಯಂತ ಹೊಸ ರೂಲ್ಸ್! ನಿಮ್ಮ ಜೇಬಿಗೆ ನೇರ ಹೊರೆ