ಹಲೋ ಸ್ನೇಹಿತರೆ, ಬಿಪಿಎಲ್ ಕಾರ್ಡ್ ಅನ್ನು ಅರ್ಹತೆ ಇಲ್ಲದಿದ್ದರೂ ಹೊಂದಿರುವವರಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದ್ದು, ಶೀಘ್ರವೇ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು. ಈ ಮೂಲಕ ಸುಳ್ಳು ಮಾಹಿತಿಯನ್ನು ನೀಡಿ ಬಿಪಿಎಲ್ ಕಾರ್ಡ್ ಬಳಸಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಂಡ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಸ್ಥಗಿತವಾಗಲಿದೆ ಎಂದು ಮಾಹಿತಿ ನೀಡಲಾಗಿದೆ. ಯಾವ ಯಾವ ಮಹಿಳೆಯರ ಹಣ ಸಿಗೋದಿಲ್ಲ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹಾಗೇ ಹೊಸ ಆದೇಶ ಹೊರಬಿದ್ದಿದ್ದು, ಕೆಲ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ. ಈ ಕಾರಣ ರಾಜ್ಯಾದ್ಯಂತ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದು, 80% ರಷ್ಟು ಕುಟುಂಬಗಳು ಬಿಪಿಎಲ್ ಅಡಿಯಲ್ಲಿವೆ. ಬಿಪಿಎಲ್ ಕುಟುಂಬಗಳು 1.27 ಕೋಟಿ ಇವೆ.
ಇದನ್ನು ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ವೇತನದ ಅರ್ಧದಷ್ಟು ʻಪಿಂಚಣಿʼ ಸಿಗಲಿದೆ
ಹೊಸ ಕಾರ್ಡ್‌ಗಳಿಗೆ ಇನ್ನೂ 2.95 ಲಕ್ಷ ಅರ್ಜಿ ಬಾಕಿಯಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ ಸಹ ಬಿಪಿಎಲ್ ಕಾರ್ಡ್ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು? ತಮಿಳುನಾಡಿನಲ್ಲಿ ಒಟ್ಟು ಬಿಪಿಎಲ್ ಪ್ರಮಾಣ ಶೇ. 40ರಷ್ಟಿದೆ. ಇದರ ಕುರಿತು ಪರಿಶೀಲನೆ ನಡೆಸಿ, ಅನರ್ಹರನ್ನು ಕೈಬಿಡುವ ಕಾರ್ಯ ನಡೆಯಬೇಕು. ಇದೇ ರೀತಿ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವ ಮಹಿಳೆಯರಿಗೂ ಇನ್ಮುಂದೆ ಗೃಹ ಲಕ್ಷ್ಮಿ ಹಣವನ್ನು ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಪ್ರಮುಖವಾಗಿ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದ್ದು, ಬಿಪಿಎಲ್ ಕಾರ್ಡ್ ರದ್ದಾದ್ದರೆ ಗೃಹಲಕ್ಷ್ಮಿ ಹಣ ಕೂಡ ರದ್ದಾಗಲಿದೆ ಎನ್ನಲಾಗಿದೆ.
ಇತರೆ ವಿಷಯಗಳು:
1ನೇ ತರಗತಿಗೆ ಪ್ರವೇಶಕ್ಕೆ ಗರಿಷ್ಠ ವಯೋಮಿತಿ ಏರಿಕೆ!
ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್ ತಿಂಗಳ ಹಣ! ಹೆಬ್ಬಾಳ್ಕರ್ ಸ್ಪಷ್ಟನೆ