rtgh

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ.! ಇಷ್ಟು ಜಿಲ್ಲೆಗಳ ಕಟ್ಟೆಚ್ಚರಕ್ಕೆ ಸೂಚನೆ

dengue fever
Share

ಹಲೋ ಸ್ನೇಹಿತರೇ, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿ ಕಾಡುತ್ತಿದೆ. ಒಂದು ಮನೆಯಲ್ಲಿ ಒಬ್ಬರಿಗೆ ಜ್ವರ ಕಾಣಿಸಿಕೊಂಡರೆ ಇಡೀ ಮನೆಯವರನ್ನೆಲ್ಲ ಹಬ್ಬಿಕೊಳ್ಳುತ್ತದೆ. ಅದೇ ರೀತಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಡೆಂಗೆ ಜ್ವರದ ಹಾವಳಿ ಜೋರಾಗಿಯೇ ಇದೆ. ಯಾವೆಲ್ಲಾ ಜಿಲ್ಲೆಗಳಿಗೆ ಕಟ್ಟೆಚ್ಚರ ವಹಿಸಲು ಸರ್ಕಾರ ಸೂಚಿಸಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

dengue fever

ಮೋಡ ಕವಿದ ವಾತಾವರಣ ಸಾಂಕ್ರಾಮಿಕ ರೋಗಗಳ ಹಾವಳಿ ಏರಿಕೆಗೆ ಕಾರಣವಾಗಿದೆ.

ರಾಜ್ಯಾದ್ಯಂತ ಡೆಂಗೆ ಡಂಗುರು ಬಾರಿಸುತ್ತಿದೆ. ಜಿಲ್ಲೆಯಲ್ಲೂ ಶತಕದತ್ತಿರ ಡೆಂಗೆ ಪ್ರಕರಣಗಳು ದಾಖಲಾಗುತ್ತಿದೆ. ಬದಲಾದ ಹವಾಮಾನದ ಜೊತೆ ರೋಗಗಳು ಜನರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೂ 92 ಡೆಂಗೆ ಪ್ರಕರಣಗಳು ದಾಖಲಾಗಿದೆ, ಜೂನ್‌ ತಿಂಗಳಿಂದ ಡೆಂಗೆ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿದೆ.

ಚಿಕ್ಕಬಳ್ಳಾಪುರ ಫಸ್ಟ್‌:

ಈ ವರ್ಷ ಜನವರಿಯಿಂದ ಇದುವರೆಗೂ ಜಿಲ್ಲಾದ್ಯಂತ 92 ಡೆಂಗೆ ಪ್ರಕರಣಗಳು ದಾಖಲಾದೆ. ಒಟ್ಟು 1990 ಶಂಕಿತ ಪ್ರಕರಣಗಳಿದ್ದು, ಇದುವರೆಗೂ ಒಟ್ಟು 820 ಮಂದಿಯನ್ನು ಪರೀಕ್ಷೆಗೊಳಪಡಿಸಿದೆ 92 ಮಂದಿಯಲ್ಲಿ ಡೆಂಗೆ ಕಾಣಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿಅತಿ ಹೆಚ್ಚು 26 ಡೆಂಗೆ ಪ್ರಕರಣಗಳು ದಾಖಲಾಗಿ ಮೊದಲ ಸ್ಥಾನ ಪಡೆದಿದೆ, ಗುಡಿಬಂಡೆ ತಾಲೂಕಿನಲ್ಲಿ 3 ಪ್ರಕರಣ ಮಾತ್ರ ದಾಖಲಾಗಿದೆ.

ಡೆಂಗೆ ಹೇಗೆ ಬರುತ್ತೆ?:

ಈಡೀಸ್‌ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಸೊಳ್ಳೆ ಉತ್ಪಾದನೆಯಾಗುವುದನ್ನು ಮೂಲದಿಂದಲೇ ತಡೆಯಬೇಕು. ನೀರಿನ ಸಂಗ್ರಹ ಸ್ಥಳದಲ್ಲೇ ಈ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ನೀರಿನ ಮೂಲವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ನೀರಲ್ಲೇ ಸೊಳ್ಳೆಗಳು ಸಂತಾನೋತ್ಪತ್ತಿ ಆಗದಂತೆ ಎಚ್ಚರಿಕೆಯನ್ನು ವಹಿಸಬೇಕು.


ಡೆಂಗೆ ಜ್ವರದ ಲಕ್ಷಣಗಳೇನು?

ಈ ರೋಗಕ್ಕೆ ತುತ್ತಾದವರಲ್ಲಿಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸುತ್ತದೆ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರ ನೋವು ಉಂಟಾಗಲಿದೆ, ಮಾಂಸ ಖಂಡಗಳಲ್ಲಿ & ಕೀಲುಗಳ ವಿಪರೀತ ನೋವು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು & ವಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತ ಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.

ಇರಲಿ ಜಾಗ್ರತೆ:

ಮನೆಯ ಒಳಗೆ ಹಾಗೂ ಸುತ್ತಮುತ್ತ ನೀರು ನಿಲ್ಲಬಹುದಾದ ವಾಷ್‌ ಬೇಸಿನ್‌, ತೊಟ್ಟಿ, ಡ್ರಮ್…, ಹೂ ಕುಂಡಗಳು, ಹಳ್ಳ, ನೀರು ನಿಲ್ಲುವ ಸ್ಥಳಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಕಾಲಕಾಲಕ್ಕೆ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ತೆರೆದ ಚರಂಡಿಗಳಲ್ಲೇ ನೀರು ನಿಲ್ಲುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳು ಜೋರಾಗಿ ನಡೆಯಬೇಕಿದೆ.

ಮನೆ ಮನೆಗೂ ಭೇಟಿ:

ಮಳೆಗಾಲದಲ್ಲಿ ಮನೆಯ ಸುತ್ತಮುತ್ತಲು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಗೆ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೂ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ. ಯಾವುದಾದರೂ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡರೆ ಸುತ್ತಮುತ್ತಲ ಜನರಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ.

ಇರಲಿ ಜಾಗ್ರತೆ:

ಮನೆಯ ಒಳಗೆ ಹಾಗೂ ಸುತ್ತಮುತ್ತ ನೀರು ನಿಲ್ಲಬಹುದಾದ ವಾಷ್‌ ಬೇಸಿನ್‌, ತೊಟ್ಟಿ, ಡ್ರಮ್, ಹೂ ಕುಂಡಗಳು, ಹಳ್ಳ, ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ತೆರೆದ ಚರಂಡಿಯಲ್ಲೇ ನೀರು ನಿಲ್ಲುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳು ನಡೆಸಬೇಕಿದೆ.

ಮನೆ ಮನೆಗೂ ಭೇಟಿ:

ಮಳೆಗಾಲದಲ್ಲಿ ಮನೆಯ ಸುತ್ತಮುತ್ತಲು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಗೆ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೂ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ. ಯಾವುದಾದರೂ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡರೆ ಸುತ್ತಮುತ್ತಲ ಜನರಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ.

ಸ್ವಯಂ ವೈದ್ಯ ಬೇಡವೇ ಬೇಡ:

ಡೆಂಗೆ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವೈದ್ಯ ಪದ್ಧತಿಯನ್ನು ಪಾಲಿಸದೆ, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಗೆ ಜ್ವರದ ಲಕ್ಷಣಗಳಿದ್ದಲ್ಲಿ ಬ್ರೂಫಿನ್‌ / ಇತರ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ. ಹೀಗಾಗಿ ತೀವ್ರ ಜ್ವರ ಕಾಣಿಸಿಕೊಂಡ ತಕ್ಷಣ ರಕ್ತ ಪರೀಕ್ಷೆ ಮಾಡಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ ತೀವ್ರ ತರ ಸಮಸ್ಯೆಗಳು ಎದುರಾಗುತ್ತದೆ. ಭಯಕ್ಕಿಂತ ಎಚ್ಚರಿಕೆ ವಹಿಸುವುದು ಅಗತ್ಯ.


ಜಿಲ್ಲೆಯಲ್ಲಿ ಡೆಂಗೆ ಪ್ರಕರಣ

  • ಚಿಕ್ಕಬಳ್ಳಾಪುರ 26
  • ಶಿಡ್ಲಘಟ್ಟ 23
  • ಚಿಂತಾಮಣಿ 14
  • ಬಾಗೇಪಲ್ಲಿ 15
  • ಗುಡಿಬಂಡೆ 03
  • ಗೌರಿಬಿದನೂರು 12
  • ಒಟ್ಟು 92

-ಡಾ.ಮಹೇಶ್‌ ಕುಮಾರ್‌, ಜಿಲ್ಲಾಆರೋಗ್ಯಾಧಿಕಾರಿ

ಡೆಂಗೆ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವೈದ್ಯ ಪದ್ಧತಿಯನ್ನು ಅನುಸರಿಸದೆ, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಡೆಂಗೆ ಜ್ವರದ ಲಕ್ಷಣಗಳಿದ್ದಲ್ಲಿ ನೋವು ನಿವಾರಕಗಳನ್ನು ತೆಗೆದುಕೊಳ್ಳಬಾರದು. ಮೊದಲು ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಕೊಳ್ಳಿ. ಎಲ್ಲರೂ ಸೊಳ್ಳೆಗಳ ನಿಯಂತ್ರಣಕ್ಕೆ ನಿಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರ ಬಗ್ಗೆ ಅರಿವು ಮೂಡಿಸಲು ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಂಡಿದೆ.

ಇತರೆ ವಿಷಯಗಳು

ಉಚಿತ ವಿದ್ಯುತ್ ನೋಂದಣಿ ದಿನಾಂಕ ವಿಸ್ತರಣೆ! ಕೊಳವೆ ಬಾವಿ ಹೊಂದಿರುವ ರೈತರಿಗೆ ಗುಡ್‌ ನ್ಯೂಸ್

ಭಾರೀ ಮಳೆ ಪ್ರಯುಕ್ತ ಇಂದು ರಾಜ್ಯದ ಈ ಶಾಲೆಗಳಿಗೆ ರಜೆ ಘೋಷಣೆ!


Share

Leave a Reply

Your email address will not be published. Required fields are marked *