ಹಲೋ ಸ್ನೇಹಿತರೆ, ಶಾಲಾ ಮಕ್ಕಳ ಬ್ಯಾಗ್ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಮೊದಲು ಶೇ.50 ರಷ್ಟು ಪಠ್ಯ ಹಾಗೂ ನಂತರದಲ್ಲಿ ಶೇ. 50 ರಷ್ಟು ಪಠ್ಯದ ನಿಯಮ ಅನುಸರಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಶಾಲಾ ಬ್ಯಾಗ್ ಹೊರೆ ತಗ್ಗಿಸುವ ಸಲುವಾಗಿ 2024-25 ನೇ ಸಾಲಿನಲ್ಲಿ ಪಠ್ಯಪುಸ್ತಕಗಳನ್ನು ಭಾಗ-1 ಮತ್ತು ಭಾಗ-2 ಗಳಾಗಿ ಪ್ರತ್ಯೇಕವಾಗಿ ಮುದ್ರಿಸಲಾಗಿದೆ. ಭಾಗ-1 ರಲ್ಲಿ ಶೇ.50 ಹಾಗೂ ಭಾಗ-2 ರ ಪಠ್ಯದಲ್ಲಿ ಶೇ.50 ಒಟ್ಟು ಸೇರಿ ಶೇ.100 ರಷ್ಟು ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ನೀಡಲಾಗಿದ್ದು, ಅದರಂತೆ ಕ್ರಮವಹಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ:29-05-2024 ರಿಂದ ಹೊಸ ಶೈಕ್ಷಣಿಕ ವರ್ಷವು ಪ್ರಾರಂಭವಾಗಿದೆ. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಚೇತರಿಕೆ’ ಉಪಕ್ರಮವನ್ನು ಮತ್ತು 2023-24 ನೇ ಸಾಲಿನಲ್ಲಿ ‘ಕಲಿಕಾ ಬಲವರ್ಧನೆ’ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಚಟುವಟಿಕೆ ಕೋಶಗಳನ್ನು ಸಿದ್ಧಪಡಿಸಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸುವ ಮೂಲಕ ಕಲಿಕಾ ಅಂತರವನ್ನು ಬೆಸೆಯಲು ನಿರಂತರವಾಗಿ ಉಪಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದೆ.
ಇದನ್ನು ಓದಿ: ಸರ್ಕಾರಿ ನೌಕರರಿಗೆ ಬಂಪರ್ ಸರ್ಪ್ರೈಸ್: ಒಂದೇ ಬಾರಿಗೆ ಭಾರೀ ಮೊತ್ತ..?
ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತಯಾರು ಮಾಡಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತುಬಂಧ’ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ನಡೆಸಲಾಗುತ್ತದೆ. 1 ರಿಂದ 10ನೇ ತರಗತಿಗಳಿಗೆ ಸೇತುಬಂಧ ಸಾಹಿತ್ಯವನ್ನು ಸಿದ್ಧಪಡಿಸಿ DSERT website ನಲ್ಲಿ ಅಳವಡಿಸಲಾಗಿದೆ. ಕಾರ್ಯಕ್ರಮ ನೆಡೆಸುವ ಕುರಿತು ಸೇತುಬಂಧ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ.
ಇತರೆ ವಿಷಯಗಳು:
ಕೇಂದ್ರದ ಹೊಸ ಸ್ಕೀಂ ಜಾರಿ! ಉಚಿತ 15,000 ರೂ. ಜೊತೆಗೆ 1 ಲಕ್ಷ ಸಾಲ
ಹೆಣ್ಣು ಮಕ್ಕಳ ಮದುವೆಗೆ ಸರ್ಕಾರದ ಖಾತರಿ.. ಈ ಯೋಜನೆಯಿಂದ ಹಣ ಗ್ಯಾರಂಟಿ