ಹಲೋ ಸ್ನೇಹಿತರೇ, ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ, ಹಾನಿಕಾರಕ ರಾಸಾಯನಿಕ ವಿಷಗಳು. ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ, ಗೋಬಿ ಹಾಗೂ ಕಬಾಬ್ ಗೆ ಕೃತಕ ಬಣ್ಣ ಬಳಕೆ ನಿರ್ಬಂಧ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಪಾನಿಪುರಿ ಕೂಡ ಬ್ಯಾನ್ ಆಗುವ ಸಂಭವಗಳು ಎದುರಾಗಿವೆ.
ಹೌದು, ಬಾಂಬೆ ಮಿಠಾಯಿ, ಗೋಬಿ, ಕಬಾಬ್ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳನ್ಪು ಬ್ಯಾನ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೂಪುರೇಷೆ ನಿರ್ಮಿಸುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಪಾನಿಪುರಿ ಪ್ರಿಯರಿಗೆ ಶಾಕ್ ನೀಡಲು ಮುಂದಾಗಿದ್ದು, ಇದರ ತಯಾರಿಕೆಯ ಕೆಲುವ ಪದಾರ್ಥಗಳನ್ನು ಬ್ಯಾನ್ ಮಾಡಲು ಸದ್ದಿಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ನಡೆಸಿದೆ. ಇದರ ಫಲವಾಗಿ ಈಗ ಬಾಂಬೆ ಮಿಠಾಯಿ, ಗೋಬಿ ಹಾಗೂ ಕಬಾಬ್‌ನಲ್ಲಿ ಸಿಕ್ಕಿರುವಂತೆ, ಪಾನಿಪೂರಿಯಲ್ಲೂ ಕೂಡ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ.
ಇದನ್ನೂ ಸಹ ಓದಿ : ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ರೆ ಬೇಗ ಈ ಕೆಲಸ ಮಾಡಿ..!
ಏನೇನು ಬ್ಯಾನ್ ಆಗಬಹುದು?
ಪಾನಿಪೂರಿಗೆ ಬಳಸೋ ಐದು ಮಾದರಿಯ ಸಾಸ್‌ಗಳು ಹಾಗೂ ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಹೀಗಾಗಿ ಕ್ಯಾನ್ಸರ್ ಕಾರಕ ಇರೋ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇತ್ತೀಚೆಗೆ ಬೆಂಗಳೂರಿನ 49 ಪ್ರದೇಶಗಳಿಂದ ಈ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿದೆ. 49 ಕಡೆ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ. ಶೀಘ್ರದಲ್ಲೆ ಪಾನಿಪೂರಿಗೆ ಬಳಸೋ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ನಿರ್ಧಾರ ಮಾಡಲಾಗಿದೆ.
ಅಂದಹಾಗೆ ಕೆಲವು ದಿನಗಳ ಹಿಂದೆ ಕಬಾಬ್ ತಯಾರಿಕೆಯಲ್ಲಿ ಬಳಸುವ ಕಲರ್‌ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಬಾಬ್‌ಗೆ ಕಲರ್ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿತ್ತು. ಅಲ್ಲದೆ ಯಾರಾದರು ಕಣ್ಣುತಪ್ಪಿಸಿ ಬಳಕೆ ಮಾಡುವುದು ಕಂಡುಬಂದಲ್ಲಿ 7 ವರ್ಷ ಶಿಕ್ಷೆ ಹಾಗೂ 10 ಲಕ್ಷ ದಂಡದ ಎಚ್ಚರಿಕೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಇತರೆ ವಿಷಯಗಳು:
ಇನ್ನು ಜಿಯೋ ಇಂಟರ್ನೆಟ್ ಬಲು ದುಬಾರಿ..!
ವಿದ್ಯುತ್ ಪಾವತಿಗೆ ಹೊಸ ನಿಯಮ.! ಇನ್ಮುಂದೆ ಪ್ರತಿ ತಿಂಗಳು ಮೊಬೈಲ್‌ಗೆ SMS
ದುಬಾರಿ ದುನಿಯಾ: ಜಿಯೋ ಬೆನ್ನಲ್ಲೇ ರೀಚಾರ್ಜ್ ದರ ಹೆಚ್ಚಿಸಿದ ಏರ್‌ಟೆಲ್!