rtgh

ರಾಜ್ಯದ್ಯಾಂತ ಕಲರ್‌ಫುಲ್‌ ಕಬಾಬ್ ಮಾರಾಟ ಬ್ಯಾನ್‌! ಆರೋಗ್ಯ ಇಲಾಖೆ ಆದೇಶ

colorful chicken kebab ban
Share

ಹಲೋ ಸ್ನೇಹಿತರೇ, ನಮ್ಮ ರಾಜ್ಯದಲ್ಲಿ ಕೆಲವು ದಿನಗಳಿಂದ ಸ್ಟ್ರೀಟ್ ಫುಡ್ ಗಳಲ್ಲಿ ಬಳಸುವ ಕಲರ್‌ಗಳ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಗೋಬಿಗಳಲ್ಲಿ ಬಳಸುವ ಕೆಂಪು ಕಲರ್‌ಗೆ ನಿಷೇಧ ಹೇರಲಾಯಿತು. ಈ ಫುಡ್ ಕಲರ್ ಗಳನ್ನು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬಳಸಲಾಗುತ್ತದೆ. ಫುಡ್ ಕಲರ್ ಗಳನ್ನು ತಿನ್ನುವುದರಿಂದ, ಅವುಗಳು ಜನರ ಆರೋಗ್ಯದ ಮೇಲೆ ಹಾನಿ ಮಾಡುವ ಪದಾರ್ಥಗಳಿಂದ ಮಾಡಲ್ಪಟ್ಟಿದೆ. ಈ ಕಾರಣಕ್ಕೆ ಸರ್ಕಾರ ಗೋಬಿಯಲ್ಲಿ ಕಲರ್ ಬಳಕೆ ಮಾಡುವುದಕ್ಕೆ ನಿಷೇಧ ಜಾರಿಗೆ ತಂದಿದೆ.

colorful chicken kebab ban

ಇದೀಗ ಇಂಥದ್ದೇ ಸುದ್ದಿ ಕಬಾಬ್ ಗಳ ವಿಚಾರಕ್ಕೆ ಕೂಡ ಬಂದಿದೆ. ವೆಜ್ ಮತ್ತು ನಾನ್ ವೆಜ್ ಎರಡು ರೀತಿಯ ಕಬಾಬ್ ಗಳನ್ನು ಮಾಡಲಾಗುತ್ತದೆ. ನಾನ್ ವೆಜ್‌ನಲ್ಲಿ ಚಿಕನ್, ಫಿಶ್ ಹಾಗೂ ಇನ್ನಿತರ ಕಬಾಬ್‌ಗಳು, ವೆಜ್‌ನಲ್ಲಿ ಪನೀರ್, ಮಶ್ರೂಮ್, ಆಲೂಗಡ್ಡೆ ಇದೆಲ್ಲದರಿಂದ ಕಬಾಬ್ ಮಾಡಲಾಗುತ್ತದೆ. ಹಲವು ಹೋಟೆಲ್ ಗಳಲ್ಲಿ ಕಬಾಬ್ ಗಳ ತಯಾರಿಕೆಗೆ ಕೆಂಪು ಮತ್ತು ಹಸಿರು ಬಣ್ಣಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ವೆಜ್ ಕಬಾಬ್‌ಗೆ ಹಸಿರು ಬಣ್ಣ, ನಾನ್ ವೆಜ್ ಕಬಾಬ್‌ಗೆ ಕೆಂಪು ಬಣ್ಣ ಬಳಸಲಾಗುತ್ತದೆ.

ಇದಕ್ಕಾಗಿ ಬಳಸುವ ಫುಡ್ ಕಲರ್‌ಗಳಲ್ಲಿ ಆರೋಗ್ಯಕ್ಕೆ ಹಾನಿ ತರುವವಂಥ ಅಂಶಗಳು ಇರುತ್ತದೆ ಎಂದು ಜನರಿಂದ ಮತ್ತು ಮಾಧ್ಯಮಗಳಿಂದ ವರದಿ ಜಾಸ್ತಿ ಆಗುತ್ತಿರುವ ಕಾರಣ, ಸರ್ಕಾರ ಇವುಗಳನ್ನು ಪರಿಶೀಲಿಸಿದೆ.

ರಾಜ್ಯದಲ್ಲಿ ಒಟ್ಟು 34 ಬೇರೆ ಬಗೆಯ ಕಬಾಬ್ ಗಳಿದ್ದು, ಅವುಗಳ ಸ್ಯಾಂಪಲ್ ಪಡೆದು ಪ್ರತಿಯೊಂದನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡಲಾಗಿದೆ, ಅದರಲ್ಲಿ 8 ರೀತಿಯ ಕಬಾಬ್ ಗಳಲ್ಲಿ ಬಳಸಿರುವ ಬಣ್ಣ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದುಬಂದಿದೆ. ಹಸಿರು, ಕೆಂಪು ಮತ್ತು ಆರೇಂಜ್ ಬಣ್ಣಗಳನ್ನು ಬಳಸಲಾಗುತ್ತಿದೆ.

ಇದನ್ನೂ ಸಹ ಓದಿ : ಇಂದಿನಿಂದ ಪಡಿತರ ವಿತರಣೆಯಲ್ಲಿ ಹೊಸ ವ್ಯವಸ್ಥೆ ಜಾರಿ!

ಇನ್ಮುಂದೆ ಈ ರೀತಿ ಆರೋಗ್ಯಕ್ಕೆ ಹಾನಿ ಅಗುವಂಥ ಬಣ್ಣಗಳನ್ನು ಬಳಸಬಾರದು ಎಂದು ಕೋರ್ಟ್ ಆದೇಶ ನೀಡಿದೆ. ನಿಯಮ ಉಲ್ಲಂಘನೆ ಆದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ-2006 ರ ನಿಯಮ 59ರ ಅಡಿಯಲ್ಲಿ ಆ ಹೋಟೆಲ್ ವಿರುದ್ಧ ದೂರು ದಾಖಲಿಸಿಕೊಂಡು, ಅವರಿಗೆ 7 ವರ್ಷಗಳ ಅವಧಿಯಿಂದ ಜೀವಾವಧಿ ಶಿಕ್ಷೆಯವರೆಗೂ ದಂಡನೆ ಸಿಗಬಹುದು. ಹಾಗೆಯೇ 10 ಲಕ್ಷ ರೂಪಾಯಿ ದಂಡ ಕೂಡ ಬೀಳುತ್ತದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದೆ.

ಇನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ.

ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ನಿಷೇಧದ ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಅನ್ವಯ 7 ವರ್ಷಗಳಿಂದ ಜೀವಾವಧಿ ವರೆಗೆ ಜೈಲುಶಿಕ್ಷೆ ಹಾಗು 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ

ರಾಜ್ಯದ ಎಲ್ಲಾ ಕಬಾಬ್ ತಯಾರಿಸುವ ಮತ್ತು ಮಾರಾಟ ಮಾಡುವ ಆಹಾರ ಉದ್ದಿಮೆದಾರರು ಈ ಆದೇಶವನ್ನು ತತಕ್ಷಣದಿಂದಲೇ ಪಾಲಿಸಲು ಸೂಚಿಸಲಾಗಿದೆ. ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರ ಅಭ್ಯಾಸಗಳಲ್ಲಿದೆ. ಉತ್ತಮ ಆರೋಗ್ಯಕ್ಕಾಗಿ ಇಂತಹ ಅಪಾಯಕಾರಿ ವಸ್ತುಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರೋಣ. ನಮ್ಮ ಆರೋಗ್ಯದ ರಕ್ಷಣೆ ಮಾಡೋಣ..” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇತರೆ ವಿಷಯಗಳು:

ಸರ್ಕಾರಿ ನೌಕರರ ಆಫೀಸ್‌ ಟೈಮ್ ನಿಯಮ ಬದಲು!

7ನೇ ವೇತನ ಸಮಿತಿಯ ಹೊಸ ಶಿಫಾರಸು ಕುರಿತು ಮಹತ್ವದ ಮಾಹಿತಿ!

ಕಿಸಾನ್‌ 17ನೇ ಕಂತಿನ ಹಣ ಇನ್ನು ನಿಮ್ಮ ಖಾತೆಗೆ ಬಂದಿಲ್ವಾ? ಹಾಗಿದ್ರೆ ಈ 3 ಕೆಲಸಗಳನ್ನು ತಕ್ಷಣ ಮಾಡಿ


Share

Leave a Reply

Your email address will not be published. Required fields are marked *