rtgh

ಕೃಷಿಕರೇ ಗಮನಿಸಿ! ಈ ಬೆಳೆಗಾರರು ಸಹಾಯಧನಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ

Subsidy For Spice Growers
Share

ಹಲೋ ಸ್ನೇಹಿತರೆ, ಸರ್ಕಾರವು ಸಂಬಾರು ಬೆಳೆಗಾರರಿಗೆ ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವತಿಯಿಂದ ಸಂಬಾರು ಬೆಳೆಗಾರರಿಂದ 2024 – 25 ನೇ ಸಾಲಿನ ಈ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಹೇಗೆ ಸಲ್ಲಿಸುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Subsidy For Spice Growers

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ನಿಗಮ ಮತ್ತು ಮಂಡಳಿಗಳಿಗೆ ಸಹಾಯಧನ ಉಪಯೋಜನೆಯಡಿ ತೋಟಗಾರಿಕೆ ಇಲಾಖೆಯ ಅನುಮೋದಿತ ಸರಬರಾಜುದಾರರು, ಹಾಗೂ ಕಂಪನಿಗಳಿಂದ ರೈತರು ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಹಾಗೂ ಸಂಬಾರು ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕ, ಸೌರ ಶಾಖ ಘಟಕಗಳ ಸ್ಥಾಪನೆಗೆ ಇಲಾಖೆಯ ಮಾರ್ಗಸೂಚಿಗಳ ಅನ್ವಯ ರಾಜ್ಯದ ಆಸಕ್ತ ಸಂಬಾರು ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಮಂಡಳಿಯ ಅಧಿಕೃತ ಜಾಲತಾಣದ ಮೂಲಕ ಅರ್ಜಿಗಳನ್ನು ಪಡೆಯಬಹುದು. ಆಸಕ್ತಿ ಇರುವ ಸಂಬಾರು ಬೆಳೆಗಾರರು ಸಹಾಯಧನಕ್ಕಾಗಿ ಮಂಡಳಿಗೆ ಜುಲೈ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮೊದಲು ಬಂದವರಿಗೆ ನಿಯಮಗಳ ಅನುಸಾರ ಮೊದಲ ಆದ್ಯತೆ ನೀಡುವ ಮೂಲಕ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿಗಳ ಮಿತಿಯಲ್ಲಿ ಸಹಾಯಧನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ನೇಕಾರ ಭವನ, ವಿದ್ಯಾನಗರ, ಹುಬ್ಬಳ್ಳಿ ಕಾರ್ಯಾಲಯಕ್ಕೆ ಅಥವಾ ದೂರವಾಣಿ ಸಂಖ್ಯೆ 0836-2375030 ಕ್ಕೆ ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರು ಮಾಹಿತಿಯನ್ನು ನೀಡಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ 17ನೇ ಕಂತಿನ ಹಣ ಬಿಡುಗಡೆ

ಜೂನ್ 18 ರಂದು ಪ್ರಧಾನಿ ನರೇಂದ್ರ ಮೋದಿ 9.3 ಕೋಟಿ ರೈತರಿಗೆ 17ನೇ ಕಂತಿನ ಪ್ರಧಾನ ಮಂತ್ರಿ ಕಿಸಾನ್ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ಈ ಬಾರಿ ರೂ.20,000 ಕೋಟಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.

ಇತರೆ ವಿಷಯಗಳು:

ಡಿಪ್ಲೊಮಾ ಫಲಿತಾಂಶ ಈಗಾಗಾಲೇ ಬಿಡುಗಡೆ! ಮಾರ್ಕ್‌ ಶೀಟ್‌ ಇಲ್ಲಿಂದ ಡೌನ್‌ಲೋಡ್‌ ಮಾಡಿ

New criminal laws: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನು ಜಾರಿ!


Share

Leave a Reply

Your email address will not be published. Required fields are marked *