ಹಲೋ ಸ್ನೇಹಿತರೇ, ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.46 ತುಟ್ಟಿಭತ್ಯೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಶೇಕಡಾ 4ರಷ್ಟು ಹೆಚ್ಚಳವಾದರೆ ಉದ್ಯೋಗಿಗಳ DA ಶೇಕಡಾ 50% ಕ್ಕೆ ಏರಿಕೆಯಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕೇಂದ್ರ ಸರ್ಕಾರಿ ನೌಕರರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಸಿಗುತ್ತದೆ. ಹೋಳಿ ಹಬ್ಬದಂದು ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಕೇಂದ್ರ ಸರ್ಕಾರಿ ನೌಕರರ & ಪಿಂಚಣಿದಾರರ ಡಿಎ & ಡಿಆರ್ 2ನ್ನೂ ಸರ್ಕಾರ ಶೀಘ್ರದಲ್ಲೇ ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಜನವರಿಯಿಂದ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಸಚಿವಾಲಯದ ಒಂದು ಭಾಗವಾದ ಲೇಬರ್ ಬ್ಯೂರೋ ಪ್ರಕಟಿಸಿದ ಕೈಗಾರಿಕಾ ಕಾರ್ಮಿಕ ಗ್ರಾಹಕ ಬೆಲೆ ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಜುಲೈನಿಂದ ಡಿಸೆಂಬರ್ 2023 ರವರೆಗಿನ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ, DA ನಾಲ್ಕು ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಜನವರಿಯಲ್ಲಿ ಏರಿಕೆಯಾಗಬೇಕಾದ ತುಟ್ಟಿಭತ್ಯೆ ಅಧಿಸೂಚನೆಯು ಮಾರ್ಚ್‌ನಲ್ಲಿ ಹೊರ ಬೀಳಲಿದೆ.
ಪ್ರಸ್ತುತ ಸಿಗುತ್ತಿರುವ ತುಟ್ಟಿಭತ್ಯೆ ಎಷ್ಟು?
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.46 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಇದರಲ್ಲಿ 4 ಪ್ರತಿಶತದಷ್ಟು ಏರಿಕೆಯಾದರೆ ಉದ್ಯೋಗಿಗಳ ತುಟ್ಟಿಭತ್ಯೆ 50 ಪ್ರತಿಶತಕ್ಕೆ ಆಗಲಿದೆ. ಇದರಿಂದ ನೌಕರರ ಮಾಸಿಕ ವೇತನ ಭಾರೀ ಹೆಚ್ಚಳವಾಗಲಿದೆ.
ಮನೆ ಬಾಡಿಗೆ ಭತ್ಯೆ (HRA), ಮಕ್ಕಳ ಶಿಕ್ಷಣದ ಶುಲ್ಕ, ಮಕ್ಕಳ ಆರೈಕೆಗಾಗಿ ಸಿಗುವ ವಿಶೇಷ ಭತ್ಯೆ & ಪ್ರಯಾಣ ಭತ್ಯೆ (TA) ಸಹ ಹೆಚ್ಚಳಕ್ಕೆ ಕಾಣಲಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ. ಒಮ್ಮೆ ತುಟ್ಟಿಭತ್ಯೆ ಶೇಕಡಾ 50% ತಲುಪಿದರೆ ನಂತರ ಮಾಸಿಕ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ.
ಡಿಎ ಹೆಚ್ಚಳ ಘೋಷಣೆ ಯಾವಾಗ?
ಮಾ.20ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಏರಿಕೆ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು. ತುಟ್ಟಿಭತ್ಯೆ ಹೆಚ್ಚಳ ಘೋಷಣೆಯಾದರೆ ಜನವರಿ & ಫೆಬ್ರವರಿ ತಿಂಗಳ ಬಾಕಿ DA ಯನ್ನು ಕೂಡಾ ವೇತನದೊಂದಿಗೆ ನೀಡಲಾಗುತ್ತದೆ.
ತುಟ್ಟಿಭತ್ಯೆ ಶೇ.50ಕ್ಕೆ ಏರಿಸಿದರೆ, 7ನೇ ವೇತನ ಆಯೋಗದ ಶಿಫಾರಸಿನಂತೆ DAಯನ್ನು ಶೂನ್ಯಗೊಳಿಸಿ, ತುಟ್ಟಿಭತ್ಯೆ ಮೊತ್ತವನ್ನು ವೇತನಕ್ಕೆ ಸೇರಿಸಲಾಗುವುದು. ಹೀಗಾದಾಗ ನೌಕರರ ಮೂಲ ವೇತನದಲ್ಲಿ ಭಾರೀ ಹೆಚ್ಚಳ ಕಾಣಬಹುದಾಗಿದೆ. ಈ ಕಾರಣದಿಂದಾಗಿ ಇತರ ಪಾವತಿಯು ಸಹ ಹೆಚ್ಚಾಗಲಿದೆ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶದಿಂದಾಗಿ ಮಾತ್ರ ಬರೆಯಲಾಗಿದೆ. ಈ ಸುದ್ದಿ ಮೂಲಕ ಡಿಎ & ವೇತನ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ. ಇತ್ತೀಚಿನ & ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಭೇಟಿ ನೀಡಿ.
ಇತರೆ ವಿಷಯಗಳು
ಪೊಲೀಸ್ ಸಬ್ ಇನ್ಸ್‌ಪೆಕ್ಟರ್; 4187 ಹುದ್ದೆಗಳಿಗೆ ಬೃಹತ್ ನೇಮಕಾತಿ.! ಕೊನೆ ದಿನಾಂಕದೊಳಗೆ ಅರ್ಜಿ ಹಾಕಿ
ಪಹಣಿ/RTC ಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಿದ ಕಂದಾಯ ಇಲಾಖೆ! ಮೊಬೈಲ್‌ನಲ್ಲೇ ಈ ರೀತಿ ಲಿಂಕ್ ಮಾಡಿ