rtgh
Headlines

5,8,9ನೇ ಕ್ಲಾಸ್‌ ಅಂತಿಮ ಫಲಿತಾಂಶದ ತೀರ್ಪಿಗೂ ಮುನ್ನ, ಮುಂದಿನ ತರಗತಿಗೆ ಪ್ರವೇಶ

5th 8th 9th class news
Share

ಹಲೋ ಸ್ನೇಹಿತರೇ, 5, 8, 9ನೇ ತರಗತಿ ಮೌಲ್ಯಾಂಕನದ ರಿಸಲ್ಟ್‌ ಮುನ್ನವೇ ಮುಂದಿನ ಕ್ಲಾಸ್‌ಗೆ ಪ್ರವೇಶ ಕ್ರಮಗಳನ್ನು ಮುಂದುವರೆಸಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಈ ಕುರಿತ ಮಾಹಿತಿಗಳು ಇಲ್ಲಿವೆ ನೋಡಿ.

5th 8th 9th class news

2023-24ನೇ ಸಾಲಿನ 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಮುಗಿದ ನಂತರ ಅದರ ಫಲಿತಾಂಶವನ್ನು ಕೆಎಸ್‌ಇಎಬಿ ಅಧ್ಯಕ್ಷರ ಜ್ಞಾಪನ ಆದೇಶದ ಮೇರೆಗೆ ಈ ಹಿಂದೆ ಏಪ್ರಿಲ್ 08 ರಂದೇ ಬಿಡುಗಡೆ ಮಾಡಲು ಆದೇಶ ನೀಡಲಾಗಿತ್ತು. ಆದರೆ ತದನಂತರದಲ್ಲಿ ಫಲಿತಾಂಶವನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್‌ ತಡೆಯಾಜ್ಞೆಯನ್ನು ನೀಡಿದ್ದು, ಸದ್ಯ ಇದರ ಅಂತಿಮ ತೀರ್ಪು ಇನ್ನು ಬಾಕಿ ಇದೆ. ಇದರ ನಡುವೆಯೇ ಈ ತರಗತಿಗಳ ಪರೀಕ್ಷೆ ಬರೆದವರನ್ನು ಮುಂದಿನ ಶಿಕ್ಷಣಕ್ಕೆ ಪ್ರವೇಶ ನೀಡಲು ಅವಕಾಶ ಕಲ್ಪಿಸಲಾಗಿದೆ.

2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ದಿನಾಂಕ 29-05-2024 ರಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ 5, 8, 9ನೇ ತರಗತಿಯ ವಿದ್ಯಾರ್ಥಿಗಳ ರಿಸಲ್ಟ್‌ ಪ್ರಕಟಿಸದೇ ಇರುವುದರಿಂದ ಅವರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ / ತರಗತಿಗೆ ಶಾಲಾ ಪ್ರವೇಶ /ದಾಖಲಾತಿ ಮಾಡಲು, ಪ್ರವೇಶ ಶುಲ್ಕ, ಪಾವತಿಸಲು ಹಾಗೂ ಬೇರೆ ಸ್ಥಳಗಳಿಗೆ ವರ್ಗಾವಣೆ ಹೊಂದಿರುವ ಪ್ರಯುಕ್ತ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ, ಪ್ರಗತಿ ಪತ್ರ ಮತ್ತು ವ್ಯಾಸಂಗ ಪ್ರಮಾಣ ಪತ್ರವನ್ನು ವಿತರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮ ವಹಿಸುವಂತೆ ಕೋರಿರುತ್ತಾರೆ. ಅದರಂತೆ ಮಕ್ಕಳ ಶೈಕ್ಷಣಿಕ ಭವಿಷ್ಯ ಸುಗಮಗೊಳಿಸಲು ಈ ಕೆಳಗಿನ ಮಾನದಂಡವನ್ನು ಆಧರಿಸಿ, ಮುಂದಿನ ತರಗತಿಗೆ ಪ್ರವೇಶ ಪ್ರಕ್ರಿಯೆ ಮುಂದುವರೆಸಲು ಶಾಲಾ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ.

5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಬರೆದು, ಅಂತಿಮ ಫಲಿತಾಂಶ ಪ್ರಕಟವಾಗದ ವಿದ್ಯಾರ್ಥಿಗಳನ್ನು ಅವರ FA-1, FA-2, FA-3, FA-4 ಮತ್ತು SA-1 ಗಳ ಮೌಲ್ಯಾಂಕನದ ಆಧಾರದ ಮೇಲೆ ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರೆಸಲು ಅವಕಾಶ ಕಲ್ಪಿಸಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಂಡಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಧ್ಯವಾರ್ಷಿಕ ಪರೀಕ್ಷೆಯ ಅಂಕಗಳನ್ನು ಆಧರಿಸಿ ಪ್ರವೇಶ ನೀಡುವ ನಿರ್ಧಾರವನ್ನು ಶಿಕ್ಷಣ ಇಲಾಖೆ ತರಾತುರಿಯಾಗಿ ಸುಪ್ರೀಂ ಕೋರ್ಟ್‌ ತೀರ್ಪಿಗೂ ಮುನ್ನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮೌಲ್ಯಾಂಕನ ಮೌಲ್ಯ ಕಳೆದುಕೊಂಡಂತಾಗಿದೆ. ಈ ಸುತ್ತೋಲೆ ಹಿನ್ನೆಲೆಯಲ್ಲಿ ಅವರ್ ಸ್ಕೂಲ್ಸ್ (ರಿ) ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್ ರವರು ಪ್ರತಿಕ್ರಿಯಿಸಿ ಈ ಕೆಳಗಿನಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಶಾಲಾ ಶಿಕ್ಷಣ ಇಲಾಖೆಯ ಇಂದಿನ ಸುತ್ತೋಲೆಯ ಅವ್ಯಕ್ತ ಸಾರಾಂಶದ – 5ನೇ, 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ಬೋರ್ಡ್ / ಮೌಲ್ಯಾಂಕನ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯು ( ಪ್ರಶ್ನೆ ಪತ್ರಿಕೆ ಮುದ್ರಣ, ಪರೀಕ್ಷೆ, ಸರಬರಾಜು, ಮೌಲ್ಯ ಮಾಪನ, ಫಲಿತಾಂಶ ಪ್ರಕಟಣೆ) ಅಮಾನ್ಯವಾಗಿರುತ್ತದೆ. ತೆರಿಗೆದಾರರ ಹಣದ ಜೊತೆಗೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪರಿಶ್ರಮ ಎಲ್ಲವೂ ವ್ಯರ್ಥವಾಗಿದೆ’.

‘ಇದರಿಂದ ಶಾಲಾ ಶಿಕ್ಷಣ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ತೀವ್ರ ಮುಖಭಂಗವಾಗಿದೆ’.

‘ಇನ್ನಾದರೂ ಅಧಿಕಾರಿಗಳು ತಮ್ಮ ಹಠಮಾರಿ ಧೋರಣೆ ಬಿಟ್ಟು ಶಿಕ್ಷಣ ಕ್ಷೇತ್ರದ ಎಲ್ಲಾ ಪಾಲುದಾರರ ಜೊತೆಗೆ ಚರ್ಚಿಸಿ, ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು’.

5, 8 ಹಾಗೂ 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ವಿರುದ್ಧದ ನಮ್ಮ ಸಂಘಟನೆಯ ಕಾನೂನು ಹೋರಾಟಕ್ಕೆ ಸಂದ ಜಯದ ಅಧಿಕೃತ ಸಾಕ್ಷಿ ಇಂದಿನ ಮಾನ್ಯ ಆಯುಕ್ತರ ಸುತ್ತೋಲೆ’ “.
ಪ್ರಭಾಕರ್ ಅರಸ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಅವರ್ ಸ್ಕೂಲ್ಸ್ (ರಿ).

ಇತರೆ ವಿಷಯಗಳು

ʻHSRPʼ ನಂಬರ್‌ ಪ್ಲೇಟ್‌ ಅಳವಡಿಕೆಗೆ ಜೂನ್‌ 12 ರವರೆಗೆ ಮಾತ್ರ ಅವಕಾಶ!

ಗಂಡ ಹೆಂಡತಿ ಇಬ್ಬರಿಗೂ ಪ್ರತಿ ವರ್ಷ ₹60,000 ಪಿಂಚಣಿ.! ಈ ಯೋಜನೆ ಅಪ್ಲೇ ಮಾಡಿದ್ರೆ ಮಾತ್ರ


Share

Leave a Reply

Your email address will not be published. Required fields are marked *