ಹಲೋ ಸ್ನೇಹಿತರೇ, 2nd PUC ಪರೀಕ್ಷೆಯ ನಡೆದಿದ್ದು. ಮಾರ್ಚ್ 1 ರಿಂದ 18 ರ ವರೆಗೆ ನಡೆದ ಪರೀಕ್ಷೆಗಳ ಮಾದರಿ ಉತ್ತರ ಪತ್ರಿಕೆಯನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿಯು ಬಿಡುಗಡೆ ಮಾಡಿದೆ. ಮಾರ್ಚ್ 21ನೇ ದಿನಾಂಕದೊಳಗಾಗಿ ವಿದ್ಯಾರ್ಥಿಗಳು ಯಾವುದೇ ಆಕ್ಷೇಪಣೆ ಇದ್ದಲ್ಲಿ ಆನ್ಲೈನ್ ಮೂಲಕ ದೂರು ನೀಡಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಓದಿ.
Contents
ಯಾವ ಪ್ರಶ್ನೆಗಳಿಗೆ ದೂರು ಸಲ್ಲಿಸಬಹುದು:-
ವಿದ್ಯಾರ್ಥಿಗಳು & ಪಾಲಕರು ಬಿಡುಗಡೆ ಆಗಿರುವ ಕೀ ಉತ್ತರವನ್ನು ಪರಿಶೀಲಿಸಿ ಯಾವುದೇ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯ ಕ್ರಮದ ಹೊರತಾಗಿ ಪ್ರಶ್ನೆ ಇದ್ದರೆ, ಅಪೂರ್ಣ ಪ್ರಶ್ನೆ ಇದ್ದರೆ., ಪ್ರಶ್ನೆ ತಪ್ಪಿದ್ದರೆ, ಇಂಗ್ಲಿಷ್ & ಕನ್ನಡ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವ ಪ್ರಶ್ನೆಗಳು ಕಂಡುಬಂದಿದ್ದರೆ, ಹಾಗೂ ಬಹು ಆಯ್ಕೆ ಪ್ರಶ್ನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಪ್ರಶ್ನೆ ಒಂದೇ ರೀತಿ ಉತ್ತರ ಬರುವಂತೆ ಇದ್ದರೆ ಹಾಗೂ ತೀರಾ ಗೊಂದಲ ಉಂಟಾದ ಪ್ರಶ್ನೆಗಳು ಇದ್ದರೆ ಆಕ್ಷೇಪಣೆ ಮಾಡಬಹುದಾಗಿದೆ.
ಆಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿ:-
ವಿದ್ಯಾರ್ಥಿಗಳು & ಪಾಲಕರು ಆಕ್ಷೇಪಣೆ ಸಲ್ಲಿಸಲು ಮಾರ್ಚ್ 19 ರಿಂದ ಮಾರ್ಚ್ 21 ನೇ ತಾರೀಖಿನ ಸಂಜೆ 5 ಗಂಟೆಯ ವರೆಗೆ ಸಮಯ ನಿಗದಿಪಡಿಸಲಾಗಿದೆ.
ಈಗಾಗಲೇ ಕೀ ಉತ್ತರಗಳು ಬಿಡುಗಡೆ ಆಗಿರುವ ವಿಷಯಗಳು ಹೀಗಿವೆ :-
ಕೀ ಉತ್ತರಗಳುನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ತೆರಳಿ ನಿಮಗೆ ವಿಷಯಗಳ ಪಟ್ಟಿ ಸಿಗುತ್ತದೆ. ನಿಮಗೆ ಯಾವ ವಿಷಯದ ಕೀ ಉತ್ತರ ಬೇಕೆಂದಿದೆಯೋ ಆ ವಿಷಯದ ಮೇಲೆ ಕ್ಲಿಕ್ ಮಾಡಿ ನಂತರ pdf download ಮಾಡಿ ಕೀ ಉತ್ತರ ಪತ್ರಿಕೆಯನ್ನು ನೋಡಿ
ಆಕ್ಷೇಪಣೆ ಸಲ್ಲಿಸುವುದು ಹೇಗೆ ?
ವಿಧ್ಯಾರ್ಥಿಗಳಿಗೆ / ಪಾಲಕರು ಕೀ ಉತ್ತರವನ್ನು ನೋಡಿ ಯಾವುದೇ ಆಕ್ಷೇಪಣೆ ಸಲ್ಲಿಸಬೇಕೆಂದಿದ್ದರೆ https://kseab.karnataka.gov.in/ ವೆಬ್ಸೈಟ್ ಗೆ ಭೇಟಿ ಮಾಡಿ ಮುಖಪುಟದಲ್ಲಿ ಕಾಣುವ ಇತ್ತೀಚಿನ ಸುದ್ದಿಗಳು ಬಟನ್ ಕ್ಲಿಕ್ ಮಾಡಿ ನಂತರ ” ಮಾರ್ಚ್ 2024ರ ದ್ವಿತೀಯ ಪಿ ಯು ಸಿ ಪರೀಕ್ಷೆ-1ರ 26 ವಿಷಯಗಳ ಮಾದರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸುವ ಬಗ್ಗೆ” ಎಂಬುದರ ಆಯ್ಕೆ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ ನಂತರ PUC ರಿಜಿಸ್ಟರ್ ನಂಬರ್ ನಮೂದಿಸಬೇಕು. ನಂತರ ನೀವು ಸೂಚನೆಗಳನ್ನು ಪಾಲಿಸಿ ಆಕ್ಷೇಪಣೆ ಪತ್ರವನ್ನು ಸಲ್ಲಿಸಿ.
ಇತರೆ ವಿಷಯಗಳು
ಇಕೋರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ!! ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ!