ಹಲೋ ಸ್ನೇಹಿತರೇ, ರೈತರಲ್ಲಿ ಆರ್ಥಿಕ ಭದ್ರತೆ ಒದಗಿಸುವ ಮೂಲಕ ಆಹಾರೋತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬರೋಬ್ಬರಿ 25,000 ಕೋಟಿ ರೂ. ಸಾಲ ವಿತರಣೆಯ ಗುರಿಯನ್ನು ಹೊಂದಿದೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.
ನಿನ್ನೆ (ಜುಲೈ 16) ವಿಧಾನ ಪರಿಷತ್ತಿನಲ್ಲಿ ಶಾಸಕ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಳೆದ ಸಾಲಿನಲ್ಲಿ ಎಷ್ಟು ರೈತರಿಗೆ ಎಷ್ಟೆಷ್ಟು ಸಾಲ ವಿತರಣೆ ಮಾಡಲಾಗಿದೆ, ಈ ಸಾಲಿನಲ್ಲಿ ವಿತರಣೆ ಆಗುವ ಸಾಲದ ಮೊತ್ತವೆಷ್ಟು? ಬಡ್ಡಿ ಇಲ್ಲದೇ ನೀಡಲಾಗುವ 5 ಲಕ್ಷ ರೂ. ಅಲ್ಪಾವಧಿ ಸಾಲವನ್ನು ಯಾವೆಲ್ಲಾ ರೈತರು ಪಡೆಯಲು ಅರ್ಹರು?.
Contents
15.10 ಲಕ್ಷ ರೈತರಿಗೆ 25,000 ಕೋಟಿ ಸಾಲ
- ಪ್ರಾಥಮಿಕ ಪತ್ತಿನ ಸಹಕಾರ ಸಂಘ, DCC ಬ್ಯಾಂಕುಗಳ ಮೂಲಕ 2023-24ನೇ ಸಾಲಿನಲ್ಲಿ ಒಟ್ಟು 29,26,910 ರೈತರಿಗೆ 22,982.10 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿದೆ.
- 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 25,000 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ & ಪಶುಸಂಗೋಪನೆಗೆ ದುಡಿಯುವ ಬಂಡವಾಳ ಸಾಲ ವಿತರಿಸಲು ಗುರಿ ಹೊಂದಲಾಗಿದೆ.
- ಇದೇ ಸಾಲಿಗೆ 0.90 ಲಕ್ಷ ರೈತರಿಗೆ 2,000 ಕೋಟಿ ರೂ. ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಸಾಲ ವಿತರಿಸುವ ಗುರಿ ನಿಗದಿಪಡಿಸಿದ್ದು, 2566.02 ಕೋಟಿ ರೂ. ಕೃಷಿ ಸಾಲ ವಿತರಿಸಲಾಗುವುದು.
- ಈಗಾಗಲೇ 2024ರ ಜುಲೈ 6ರ ವರೆಗೆ 7,80,363 ರೈತರಿಗೆ 6799.17 ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದೆ. 3 ವರ್ಷಗಳಲ್ಲಿ ಸಾಲ ವಿತರಿಸಲಾಗಿದೆ.
- DCC ಬ್ಯಾಂಕುಗಳಲ್ಲಿರುವ ಬಂಡವಾಳ & ನಬಾರ್ಡ್ ಪುನರ್ಧನ ಆಧರಿಸಿ ರಾಜ್ಯದ ಪ್ರತಿ ಜಿಲ್ಲೆಗೆ ಸರಾಸರಿ 1.13 ಲಕ್ಷ ರೈತರಿಗೆ 806 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ.
ಪ್ರತಿ ರೈತರಿಗೂ ಶೂನ್ಯಬಡ್ಡಿ ಸಾಲ
ಕಳೆದ ವರ್ಷದ ವರೆಗೂ 3 ಲಕ್ಷ ರೂ. ಇದ್ದ ಶೂನ್ಯ ಬಡ್ಡಿದರ ಸಾಲದ ಮೊತ್ತವನ್ನು ಸಿಎಂ ಅವರು 5 ಲಕ್ಷ ರೂ.ಗೆ ಏರಿಕೆ ಮಾಡಿದ್ದಾರೆ. ಆದರೆ, ಈ ಅನುಕೂಲಸ್ತ ರೈತರಿಗೆ ಮಾತ್ರ ಸಿಗುತ್ತಿದೆ. ಈ ಸಾಲವು ಚಡ್ಡಿ ಹಾಕಿಕೊಂಡು ಹೊಲದಲ್ಲಿ ದುಡಿಯುವ ರೈತರಿಗೂ ಸಿಗುವಂತಾಗಬೇಕು ಎಂದು ಶಾಸಕ ದಿನೇಶ ಗೂಳಿಗೌಡ ಅವರು ತಿಳಿಸಿದರು.
ಅಲ್ಪಾವಧಿ ಬೆಳೆ ಸಾಲವಾಗಿ ವಿತರಿಸುವ 5 ಲಕ್ಷ ರೂ.ಗೆ ಶೂನ್ಯ ಬಡ್ಡಿ ದರ ಸಾಲವನ್ನು ಎಲ್ಲರಿಗೂ ನೀಡಲಾಗುವುದಿಲ್ಲಾ. ಆಯಾ ರೈತರ ಜಮೀನು, ಬೆಳೆ, ಇಳುವರಿಗಳ ಮೇಲೆ ಅವಲಂಬಿಸಿರುತ್ತದೆ.
ಶೂನ್ಯ ಬಡ್ಡಿ ಸಾಲ?
ರಾಜ್ಯದ ರೈತರಿಗೆ ಸರ್ಕಾರವು ಶೇಕಡಾ 3ರ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ & ದೀರ್ಘಾವಧಿ ಕೃಷಿ & ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು 2004ರಲ್ಲಿ ಜಾರಿಗೊಳಿಸಲಾಗಿದೆ.
2012-13ರಲ್ಲಿ 1 ಲಕ್ಷ ರೂ. ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು. 2013-14ನೇ ಸಾಲಿಗೆ 2 ಲಕ್ಷ ರೂ. ಹಾಗೂ 2014-15ನೇ ಸಾಲಿನಿಂದ 3 ಲಕ್ಷ ರೂ.ಗೆ ಶೂನ್ಯ ಬಡ್ಡಿ ಸಾಲ ಮಿತಿ ಹೆಚ್ಚಿಸಲಾಯಿತು. 2023ರಲ್ಲಿ ಹಾಲಿ ಕಾಂಗ್ರೆಸ್ ಸರ್ಕಾರ 3 ರಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ.
ಯಾವೆಲ್ಲ ಬ್ಯಾಂಕುಗಳು ಸಾಲ ನೀಡುತ್ತವೆ?
- ಬಿತ್ತನೆ ಬೀಜ.
- ಗೊಬ್ಬರ. ಔಷಧಿ, ಕೃಷಿ ಉಪಕರಣ ಖರೀದಿ
- ಕೃಷಿ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ ಇನ್ಮುಂದೆ 5 ಲಕ್ಷ ರೂ. ಸಾಲ ಸಿಗಲಿದೆ.
ಏನೆಲ್ಲಾ ದಾಖಲೆಗಳು ಬೇಕು?
- ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು.
- ಪಹಣಿ.
- ಆಧಾರ್ ಕಾರ್ಡ್ ಇರಬೇಕು.
- ರೈತರು ಯಾವ ಬ್ಯಾಂಕಿನಿಂದ ಸಾಲ ಪಡೆಯಲಿಚ್ಚಿಸುತ್ತಾರೋ ಅಲ್ಲಿಂದ ಅರ್ಜಿ ಪಡೆದುಕೊಳ್ಳಬೇಕು.
- ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು.
- SC/ST ಸಮುದಾಯದವರಾಗಿದ್ದರೆ ಜಾತಿ & ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಇತರೆ ವಿಷಯಗಳು
ಸರ್ಕಾರದಿಂದ ವ್ಯವಹಾರಕ್ಕಾಗಿ ಸಿಗುತ್ತೆ 10 ಲಕ್ಷದಿಂದ 1 ಕೋಟಿವರೆಗೆ ಸಹಾಯಧನ..!
10 ಲಕ್ಷ ವಿದ್ಯಾರ್ಥಿಗಳಿಗೆ ಬಂಪರ್.! ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹೊಸ ವ್ಯವಸ್ಥೆ ಜಾರಿ