rtgh
Headlines

ವಿದ್ಯಾಧನ್ ಸ್ಕಾಲರ್‌ಶಿಫ್‌ಗೆ ಅರ್ಜಿ ಆಹ್ವಾನ! SSLC ಪಾಸಾದವರು ಕೂಡಲೇ ಈ ರೀತಿ ಅಪ್ಲೇ ಮಾಡಿ

vidyadhan scholarship apply online
Share

ಹಲೋ ಸ್ನೇಹಿತರೇ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರೋಜಿನಿ ದಾಮೋದರನ್ ಫೌಂಡೇಶನ್ (ಎಸ್‌ಡಿಎಫ್‌) ಹಾಗೂ ಶಿಬುಲಾಲ್‌ ಫ್ಯಾಮಿಲಿ ಫಿಲಾಂತ್ರೋಪಿಕ್ ಇನಿಶಿಯೇಟಿವ್‌ ಕಡೆಯಿಂದ 2024-25 ಸಾಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ’ ಯೋಜನೆಯಡಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದು ಹನ್ನೊಂದನೇ ತರಗತಿ ಹಾಗೂ ಪದವಿ ಓದುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲ್ಪಡುವ ವಿದ್ಯಾರ್ಥಿ ವೇತನವಾಗಿದ್ದು, ವಿದ್ಯಾರ್ಥಿವೇತನ ಯೋಜನೆಯಡಿ 10,000 ರೂ ನಿಂದ 75,000 ರೂಪಾಯಿ ವರೆಗೂ ಆರ್ಥಿಕ ನೆರವು ಸಿಗಲಿದೆ.

vidyadhan scholarship apply online

ಈ ವಿದ್ಯಾಧನ ವಿದ್ಯಾರ್ಥಿವೇತನ ಪಡೆಯಲು ಉತ್ತರ ಪ್ರದೇಶದ, ಕೇರಳ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಒಡಿಶಾ, ನವದೆಹಲಿ, ಲಢಾಕ್, ಬಿಹಾರ, ಜಾರ್ಖಂಡ್, ಪಂಜಾಬ್, ಹಿಮಾಚಲ ಪ್ರದೇಶ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ. ಪದವಿ ಕೋರ್ಸ್ ವಿದ್ಯಾರ್ಥಿವೇತನದ ಮೊತ್ತವು ರಾಜ್ಯ ಕೋರ್ಸ್ ಹಾಗೂ ಅವಧಿ ಇತ್ಯಾದಿಗಳನ್ನು ಅವಲಂಬಿಸಿ ವರ್ಷಕ್ಕೆ 10,000 ರೂಪಾಯಿಯಿಂದ 75,000 ರೂಪಾಯಿ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಮುಖ್ಯವಾಗಿ 2024ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಅಥವಾ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ವೇತನ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ವಿಶೇಷಚೇತನ ವಿದ್ಯಾರ್ಥಿಗಳು ಶೇ.75ರಷ್ಟು ಅಂಕ ಪಡೆದರೂ ಅಂಥವರಿಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಸಹ ಓದಿ : ಪಿಯುಸಿ ವಿದ್ಯಾರ್ಥಿಗಳಿಗೆ 35000 ರೂ. ಸ್ಕಾಲರ್‌ಶಿಪ್!‌ ಈ ದಾಖಲೆ ಇಟ್ಟುಕೊಂಡು ಅಪ್ಲೈ ಮಾಡಿ

ಬೇಕಾಗುವ ಅರ್ಹತೆಗಳು:

 • ಕರ್ನಾಟಕದಲ್ಲಿ ನೆಲೆಸಿರಬೇಕು
 • ಕರ್ನಾಟಕದಿಂದ 10 ನೇ ತರಗತಿ ಅಥವಾ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ
 • 10 ನೇ ತರಗತಿ ಅಥವಾ SSLC ಪರೀಕ್ಷೆಯಲ್ಲಿ 90% ಅಥವಾ 9 CGPA ಪಡೆದಿದ್ದಾರೆ ( ಗಮನಿಸಿ: ವಿಕಲಾಂಗ ವಿದ್ಯಾರ್ಥಿಗಳಿಗೆ ಕಟ್-ಆಫ್ ಮಾರ್ಕ್ 75% ಅಥವಾ 7.5 CGPA ಆಗಿದೆ.)
 • ಎಲ್ಲಾ ಮೂಲಗಳಿಂದ ₹2,00,000 ಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರುತ್ತಾರೆ

ದಾಖಲೆಗಳು:

 • ಇತ್ತೀಚಿನ ಛಾಯಾಚಿತ್ರ
 • 10ನೇ ತರಗತಿಯ ಅಂಕಪಟ್ಟಿಯ ಸ್ಕ್ಯಾನ್ ಮಾಡಿದ ಪ್ರತಿ
 • ಸಮರ್ಥ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ; ಪಡಿತರ ಚೀಟಿ ಸ್ವೀಕರಿಸುವುದಿಲ್ಲ

ನೀವು ಹೇಗೆ ಅರ್ಜಿ ಸಲ್ಲಿಸಬಹುದು?

 • ‘ಈಗ ಅನ್ವಯಿಸು’ ಬಟನ್  ಕ್ಲಿಕ್ ಮಾಡಿ.
 • ‘ರಿಜಿಸ್ಟರ್’ ಬಟನ್ ಕ್ಲಿಕ್ ಮಾಡಿ   ಮತ್ತು ಅಗತ್ಯವಿರುವ ನೋಂದಣಿ ವಿವರಗಳನ್ನು ನಮೂದಿಸಿ.
 • ಪುಟದ ಕೆಳಭಾಗದಲ್ಲಿರುವ ‘ಈಗ ಅನ್ವಯಿಸು’ ಅನ್ನು ನ್ಯಾವಿಗೇಟ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
 • ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ‘ರಿಜಿಸ್ಟರ್’ ಕ್ಲಿಕ್ ಮಾಡಿ.
 • ವಿದ್ಯಾಧನ್ ಕಳುಹಿಸಿದ ಇಮೇಲ್ ಮೂಲಕ ನೋಂದಣಿಯನ್ನು ದೃಢೀಕರಿಸಿ.
 • ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ.
 • ಸಂಪೂರ್ಣ ಅಪ್ಲಿಕೇಶನ್ ಸೂಚನೆಗಳಿಗಾಗಿ ವಿದ್ಯಾಧನ್ ಖಾತೆಯಿಂದ ‘ಸಹಾಯ’ ಲಿಂಕ್ ಅನ್ನು ಕ್ಲಿಕ್ ಮಾಡಿ.
 • ಹೊಸ ಅಪ್ಲಿಕೇಶನ್ ರಚಿಸಲು ‘ಅಪ್ಲಿಕೇಶನ್’ ಬಟನ್  ಮೇಲೆ ಕ್ಲಿಕ್ ಮಾಡಿ.
 • ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ.

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಅವಧಿ: 30ನೇ ಜೂನ್ 2024
ಸ್ಕ್ರೀನಿಂಗ್ ಪರೀಕ್ಷೆ: 28ನೇ ಜುಲೈ 2024
ಸಂದರ್ಶನದ ದಿನಾಂಕ:  4ನೇ ಆಗಸ್ಟ್‌ನಿಂದ 31ನೇ ಆಗಸ್ಟ್ 2024

ಇತರೆ ವಿಷಯಗಳು:

ಭತ್ತ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆಯಲ್ಲಿ ಭರ್ಜರಿ ಏರಿಕೆ!

KSRTC ಯಿಂದ ಬಿಗ್‌ ಶಾಕ್!‌ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಬರೆ

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಔಷಧಿಗಳ ಬೆಲೆ ದಿಢೀರ್‌ ಏರಿಕೆ!


Share

Leave a Reply

Your email address will not be published. Required fields are marked *