ಹಲೋ ಸ್ನೇಹಿತರೇ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳ ಕಾಲೇಜು ವಿದ್ಯಾಭ್ಯಾಸವನ್ನು ಬೆಂಬಲಿಸಲು ಸರೋಜಿನಿ ದಾಮೋದರನ್ ಫೌಂಡೇಷನ್ ‘ವಿದ್ಯಾಧನ್’ ವಿದ್ಯಾರ್ಥಿವೇತನವನ್ನು ನೀಡಲಾಗುವುದು, ಆಸಕ್ತ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಏನೆಲ್ಲ ಅರ್ಹತೆಗಳಿರಬೇಕು ಎಂಬು ಬಗ್ಗೆ ನಮ್ಮ ಲೇಖನವನ್ನು ಓದಿ ತಿಳಿಯಿರಿ.
ಈ ವಿದ್ಯಾರ್ಥಿವೇತನಕ್ಕೆ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಪರೀಕ್ಷೆ & ಸಂದರ್ಶನದ ಮೂಲಕ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಪದವಿ ಮುಗಿಸುವ ವರೆಗು ವಿದ್ಯಾರ್ಥಿವೇತನವನ್ನು ನೀಡಲಾಗುವುದು.
Contents
ವಿದ್ಯಾಧನ್ ಸ್ಕಾಲರ್ಶಿಪ್ 2024(Vidyadhan Scholarship)
ಈ ವಿದ್ಯಾರ್ಥಿವೇತನದ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನ ಪಡೆಯಲು ಎಲ್ಲಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು. ವಿದ್ಯಾಧನ್ ವಿದ್ಯಾರ್ಥಿ ವಿದ್ಯಾರ್ಥಿವೇತನವನ್ನು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ಪ್ರತಿ ವರ್ಷ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳು
- ಮಾನ್ಯತೆ ಪಡೆದ ಶಾಲೆಗಳಿಂದ SSLC/ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು.
- 10ನೇ ತರಗತಿ ಅಥವಾ SSLC ಪರೀಕ್ಷೆಯಲ್ಲಿ ಶೇಕಡ 90 ರಷ್ಟು ಅಂಕ.
- ಎಲ್ಲಾ ಮೂಲಗಳಿಂದ ಕುಟುಂಬದ ಆದಾಯ 2 ಲಕ್ಷ ಮೀರಿರಬಾರದು. ವಿಕಲಚೇತನ ವಿದ್ಯಾರ್ಥಿಗಳು75% ರಷ್ಟು ಅಂಕಪಡೆದಿರಬೇಕು.
ಮಾಹಿತಿ: ಆಯ್ಕೆಯಾದ ನಂತರ, ಇಂಟರ್ ವಿದ್ಯಾರ್ಥಿಗಳು ರೂ 10,000 ಸ್ವೀಕರಿಸಲು ಅರ್ಹರಾಗಿರುತ್ತಾರೆ ಮತ್ತು ನಂತರ ಅವರ ಶೈಕ್ಷಣಿಕ ಸಾಧನೆ ಉತ್ತಮವಾಗಿದ್ದರೆ, ಅವರು ತಮ್ಮ ಪದವಿ ಕೋರ್ಸ್‌ಗಳಿಗೆ ವರ್ಷಕ್ಕೆ ರೂ 15,000-60,000 ವರೆಗೆ ಸ್ವೀಕರಿಸುತ್ತಾರೆ .
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಆಧಾರ್ ಕಾರ್ಡ್ನಲ್ಲಿರುವ ಮೊಬೈಲ್ ನಂಬರ್
- ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.
- 10ನೇ ತರಗತಿ ಮಾರ್ಕ್ಸ್ಕಾರ್ಡ್.
- ಆದಾಯ ಪ್ರಮಾಣ ಪತ್ರ.
- ವಿಕಲಚೇತನ ದೃಡಿಕರಣ ಪತ್ರ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
www.vidyadhan.org
ಆಯ್ಕೆ ಮಾಡುವ ಪ್ರಕ್ರಿಯೆ ಹೇಗಿರುತ್ತದೆ?
- ವಿದ್ಯಾರ್ಥಿ ಅಂಕ ಪಡೆದಿರುವ ಆಧಾರದ ಮೇಲೆ ಪಟ್ಟಿ ಬಿಡುಗಡೆ ಮಾಡಲಾಗುವುದು.
- ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸಂದರ್ಶನಕ್ಕೇ ಕರೆಯಲಾಗುವುದು.
- ನಂತರ ಪರೀಕ್ಷೆ ಕೂಡ ಬರೆಯಬೇಕಾಗುತ್ತದೆ.
- ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗುವುದು.
ಇತರೆ ವಿಷಯಗಳು
ಹೆಣ್ಣು ಮಕ್ಕಳಿಗೆ ₹50,000 ನೀಡಲು ಕೇಂದ್ರ ಸಜ್ಜು! ಈ ದಿನದಂದು ಖಾತೆಗೆ ಬರಲಿದೆ ಹಣ
ರೈತರಿಗೆ ಸಾಲ ಮನ್ನಾ ಸುಳಿವು ನೀಡಿದ ಸರ್ಕಾರ!! ಈ ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಮಾತ್ರ ಮನ್ನಾ
FAQ
1.ವಿದ್ಯಾಧನ್ ವಿದ್ಯಾರ್ಥಿವೇತನವನ್ನು ಯಾವ ಫೌಂಡೇಶನ್ ನೀಡುತ್ತದೆ?
ಸರೋಜಿನಿ ದಾಮೋದರನ್ ಫೌಂಡೇಶನ್.
2.ವಿದ್ಯಾಧನ್ ವಿದ್ಯಾರ್ಥಿವೇತನ ಎಷ್ಟು ಸಿಗುತ್ತದೆ?
10000 ದಿಂದ 60 ಸಾವಿರ.