ಬೆಂಗಳೂರು: ಬೀನ್ಸ್ ದರ ಕೇಳಿದ್ರೆ ಗ್ರಾಹಕರು ಬೆಚ್ಚಿ ಬೀಳುವುದು ಗ್ಯಾರಂಟಿ. 1 Kg ಬೀನ್ಸ್ ನ ಬೆಲೆ 200 ರಿಂದ 320 ರೂ. ವರೆಗೆ ಮಾರಾಟವಾಗಿದೆ.
ಬೆಂಗಳೂರಿನ ಕೆಂಗೇರಿ, ಹೆಬ್ಬಾಳ ಮೊದಲಾದ ಬಡಾವಣೆಯಲ್ಲಿ Kgಗೆ 200 ರೂ. ಇದ್ದರೆ, ಜಯನಗರ ಹಾಗೂ ಮೊದಲಾದ ಬಡಾವಣೆಗಳಲ್ಲಿ Kgಗೆ 320 ರೂ. ಇದೆ. ಬೀನ್ಸ್ ಬೆಲೆಯು ಹೆಚ್ಚೆಂದರೆ 80 ರಿಂದ 100 ರೂ. ವರೆಗೆ ಇರುತ್ತಿತ್ತು. ಈಗ 300ರ ಗಡಿಯನ್ನು ದಾಟಿರುವುದು ಗ್ರಾಹಕರಿಗೆ ನುಂಗಲಾರದಂತ ತುತ್ತಾಗಿದೆ.
ಅಧಿಕ ತಾಪಮಾನ, ಬರಗಾಲ, ನೀರಿನ ಸಮಸ್ಯೆ ಇನ್ನು ಮುಂತಾದ ಕಾರಣಗಳಿಂದ ತರಕಾರಿಯ ಬೆಳೆಯು ಒಣಗಿವೆ. ಕೆಲವು ಕಡೆಯಲ್ಲಿ ಮಳೆಯಾಗಿದ್ದು, ಹೂವು ಉದುರಿದ್ದರಿಂದ ಬೀನ್ಸ್ ಉತ್ಪಾದನೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೆ, ಮದುವೆ, ಜಾತ್ರೆ, ಗೃಹಪ್ರವೇಶ, ಹಬ್ಬ, ಇತ್ಯಾದಿ ಶುಭ ಸಮಾರಂಭಗಳ ಕಾರಣದಿಂದ ಬೀನ್ಸ್ ಗೆ ಬೇಡಿಕೆಯು ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆಯೆ ಬೀನ್ಸ್ ಪೂರೈಕೆಯಾಗದ ಕಾರಣ 300 ರೂ. ಗಡಿಯನ್ನು ದಾಟಿದೆ.
ಟೊಮೆಟೊದ ದರವು ಸಹ 45 ರಿಂದ 50 ರೂ. ತಲುಪಿದೆ. ನಾಟಿ ಕೊತಂಬರಿಸೊಪ್ಪು 1 ಕಟ್ಟಿಗೆ 50 ರಿಂದ 60 ರೂಪಾಯಿವರೆಗೂ ಇದೆ. ಇದೆರೀತಿ ತರಕಾರಿ, ಸೊಪ್ಪಿನ ದರ ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ಇತರೆ ವಿಷಯಗಳು:
ರಾಜ್ಯದಲ್ಲಿ ಭಾರೀ ಮಳೆ ಮರು ಆರಂಭ! ಹವಾಮಾನ ಇಲಾಖೆ ಅಲರ್ಟ್
5,8,9ನೇ ಕ್ಲಾಸ್ ಅಂತಿಮ ಫಲಿತಾಂಶದ ತೀರ್ಪಿಗೂ ಮುನ್ನ, ಮುಂದಿನ ತರಗತಿಗೆ ಪ್ರವೇಶ