ಹಲೋ ಸ್ನೇಹಿತರೇ, ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ಮನೆ ಪಡೆಯಲು ಈ ಯೋಜನೆಯಡಿ ನೆರವು ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಅಪ್ಲೇ ಮಾಡಲು ಯಾರೆಲ್ಲಾ ಅರ್ಹರು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಮನೆ ಇಲ್ಲದ ಅರ್ಹ ಅರ್ಜಿದಾರರಿಗೆ ನಿಗಮದ ಯೋಜನೆಯಡಿ ಮನೆ ನೀಡುವ ಸೌಲಭ್ಯವಿದ್ದು ಈಗಾಗಲೇ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳು ಪಾವತಿ ಮಾಡಬೇಕಾದ ಹಣವನ್ನು ಸರ್ಕಾರ ಭರಿಸಲು ನಿರ್ಣಯ ಕೈಗೊಳ್ಳಲಾಗಿದೆ.
Contents
ಮುಖ್ಯಮಂತ್ರಿಗಳ ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ನೆರವು
ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಆಯ್ಕೆಯಾದ 12,153 ಕುಟುಂಬಗಳು ಕಟ್ಟಬೇಕಿದ್ದ ತಲಾ ₹1 ಲಕ್ಷ ಸರ್ಕಾರವೇ ಭರಿಸಲಿದೆ. ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳ ಒಟ್ಟು ₹121.53 ಕೋಟಿ ಬಿಡುಗಡೆ ಮಾಡಲು ಸಮ್ಮತಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆಯಡಿ ಆಯ್ಕೆಯಾದ 12,153 ಕುಟುಂಬಗಳು ಪಾವತಿ ಮಾಡಬೇಕಾಗಿದ ತಲಾ ರೂ 1 ಲಕ್ಷ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿ ಎಂ ಫಲಾನುಭವಿಗಳ ವಂತಿಕೆಯ ಒಟ್ಟು ₹121.53 ಕೋಟಿ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದು ಜಮೀರ್ ಅಹಮದ್ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದಾಗಿ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗದ ಫಲಾನುಭವಿಗಳು 7.50 ಲಕ್ಷ ಅದೇ ರೀತಿ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳು 6.70 ಲಕ್ಷ ಹಣವನ್ನು ಪಾವತಿ ಮಾಡುವಂತಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ನಮ್ಮ ರಾಜ್ಯದ ಅಂದರೆ ಕರ್ನಾಟಕದ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಬಡತನ ರೇಖೆಗಿಂತ ಕೆಳ ವರ್ಗ/ಬಿ.ಪಿ.ಎಲ್ ಕಾರ್ಡ್‌ದಾರರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು ರೂ 87,000 ಕ್ಕಿಂತ ಕಡಿಮೆ ಇರಬೇಕು.
- ಅರ್ಜಿದಾರರು ಬೆಂಗಳೂರಿನಲ್ಲಿ ಕನಿಷ್ಟ 5/ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು.
- ಅರ್ಜಿದಾರನಿಗೆ ಸ್ವಂತ ಮನೆ ಇರಬಾರದು.
- ಅರ್ಜಿದಾರನು ಬೇರೆ ಯಾವುದೇ ವಸತಿ ಯೋಜನೆಯಡಿ ಪ್ರಯೋಜನ ಪಡೆದಿರಬಾರದು.
ಅಗತ್ಯ ದಾಖಲಾತಿಗಳು:
- ಅರ್ಜಿದಾರರ ವಾಸಸ್ಥಳದ ಪ್ರಮಾಣ ಪತ್ರ( 5 ವರ್ಷಗಳಿಂದ ಬೆಂಗಳೂರಿನ ನಿವಾಸಿಯಾಗಿರುವ ಬಗ್ಗೆ)
- ಆಧಾರ್ ಕಾರ್ಡ್ ಪ್ರತಿ.(Aadhar card)
- ಆದಾಯ ಪ್ರಮಾಣ ಪತ್ರ. (Income certificate)
ಅರ್ಜಿ ಸಲ್ಲಿಸಲು ಲಿಂಕ್:
ಹೊಸ ಅರ್ಜಿ ಸಲ್ಲಿಸಲು ಲಿಂಕ್: Apply Now
vasati yojane website-ವೆಬ್ ಸೈಟ್: Click here
ಇಮೇಲ್: [email protected]
ಇತರೆ ವಿಷಯಗಳು
ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಪಾಸ್ ಆದ್ರೆ ಸಾಕು
ರೈಲು ಸಂಚಾರ ಬಂದ್: ಬಸ್ ಟಿಕೆಟ್ ದರ ದುಪ್ಪಟ್ಟು ಏರಿಕೆ!