rtgh
Headlines

ನಾಳೆ ಕೇಂದ್ರ ಬಜೆಟ್ ಮಂಡನೆ: ತಂತ್ರಜ್ಞಾನ ಲೋಕಕ್ಕೆ ಮಹತ್ವದ ಕೊಡುಗೆ

Union Budget will be presented tomorrow
Share

ಹಲೋ ಸ್ನೇಹಿತರೇ, ಟೆಕ್‌ ವಲಯಕ್ಕೆ ಸಿಹಿ ಸುದ್ದಿ ಕೊಡಲು ನರೇಂದ್ರ ಮೋದಿ ಸರ್ಕಾರ ಸಿದ್ಧವಾಗಿದೆ. 2024ರ ಕೇಂದ್ರ ಬಜೆಟ್‌ನಲ್ಲಿ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಇಳಿಕೆಯಾಗುವ ಬಗ್ಗೆ ಸುಳಿವು ಸಿಕ್ಕಿದೆ. ಹೌದು, ಮೊಬೈಲ್‌, ಲ್ಯಾಪ್‌ಟಾಪ್‌, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳ ಮೇಲೆ ಸುಂಕಗಳನ್ನು ಇಳಿಸುವ ಮುನ್ಸೂಚನೆ ಸಿಕ್ಕಿದೆ.

Union Budget will be presented tomorrow

ಕಳೆದ ಬಜೆಟ್‌ನಲ್ಲಿ ಈ ಎಲ್ಲಾ ಗ್ಯಾಜೆಟ್ ಸಾಧನಗಳ ಸುಂಕದ ದರ ಇಳಿಕೆಯಾಗಿತ್ತು. ಮುಂಬರುವ ಬಜೆಟ್‌ನಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದು, ತಂತ್ರಜ್ಞಾನ ವಲಯಕ್ಕೆ ಏನೆಲ್ಲಾ ಕೊಡುಗೆಗಳು ಸಿಗಬಹುದು? ಎಂಬುದನ್ನು ತಿಳಿಯೋಣ ಬನ್ನಿ.

ದೇಶದ ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುವ 2024ರ ಈ ಬಾರಿಯ ಕೇಂದ್ರ ಬಜೆಟ್ ತಂತ್ರಜ್ಞಾನ ಕ್ಷೇತ್ರಕ್ಕೆ ಹಲವು ಗುಡ್‌ ನ್ಯೂಸ್‌ ನೀಡಲು ಸಿದ್ಧವಾಗಿದೆ. ಮೊಬೈಲ್ ಮಾರುಕಟ್ಟೆಯ ಪುನಶ್ಚೇತನಕ್ಕೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಈ ಬಾರಿಯ ಬಜೆಟ್ ಸಿದ್ಧಪಡಿಸಿರುವಂತೆ ಕಾಣಿಸುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ, ಪ್ರವಾಸೋದ್ಯಮ ವಲಯ, ಕೃಷಿ ವಲಯ, ಉದ್ಯೋಗ, ಬ್ಯಾಂಕಿಂಗ್ ವಲಯ ಸೇರಿದಂತೆ ತಂತ್ರಜ್ಞಾನ ವಲಯಕ್ಕೂ ಮಹತ್ತರ ಕೊಡುಗೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ.

ಮೊಬೈಲ್‌, ಲ್ಯಾಪ್‌ಟಾಪ್‌ಗಳ ಬೆಲೆ ಇಳಿಕೆ ಸಾಧ್ಯತೆ!

2024ರ ಕೇಂದ್ರ ಬಜೆಟ್‌ನಲ್ಲಿ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಇಳಿಕೆಯಾಗುವ ಬಗ್ಗೆ ಸಿಹಿಸುದ್ದಿ ಲಭಿಸಿದೆ. ಮೊಬೈಲ್‌, ಲ್ಯಾಪ್‌ಟಾಪ್‌, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳ ಮೇಲೆ ಸುಂಕಗಳನ್ನು ಇಳಿಸುವ ಸಾಧ್ಯತೆಯಿದೆ. ಈ ಎಲ್ಲಾ ಗ್ಯಾಜೆಟ್ ಸಾಧನಗಳ ಸುಂಕದ ದರ ಇಳಿಕೆಯಾದರೆ, ಇದರ ಲಾಭವನ್ನು ಟೆಕ್ ಕಂಪೆನಿಗಳು ನೇರವಾಗಿ ಜನರಿಗೆ ತಲುಪಿಸಲಿದೆ.

ಇದನ್ನೂ ಸಹ ಓದಿ : ಡೆಂಗ್ಯೂ ಮುಂಜಾಗ್ರತೆ ರೀಲ್ಸ್ ಮಾಡಿದ್ರೆ ಸಿಗತ್ತೆ ಲಕ್ಷ ರೂಪಾಯಿ ಬಹುಮಾನ! BBMP ಆಫರ್

ಈ ಗ್ರಾಹಕರಿಗೆ ಸ್ವಲ್ಪ ಬೇಸರ?

ಈ ಬಾರಿಯ ಬಜೆಟ್‌ ಕೆಲವು ಟೆಕ್‌ ಪ್ರಿಯರಿಗೆ ಕಹಿ ಸುದ್ದಿ ನೀಡುವ ಸಾಧ್ಯತೆಯಿದೆ. ಕಡಿಮೆ ಬೆಲೆಯ ಗ್ಯಾಜೆಟ್ ಉತ್ಪನ್ನಗಳಾದ ಹೆಡ್‌ಫೋನ್, ಇಯರ್‌ಫೋನ್ ಮತ್ತು ಸ್ಮಾರ್ಟ್‌ವಾಚ್‌ಗಳ ಸುಂಕಗಳನ್ನು ಏರಿಸುವ ಸಾಧ್ಯತೆ ದಟ್ಟವಾಗಿದೆ. ವೇರಿಯಬಲ್ ಮತ್ತು ಆಡಿಯೋ ಉತ್ಪನ್ನಗಳನ್ನು ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಇದರಿಂದ ಸ್ವಲ್ಪ ಬೇಸರವಾಗಬಹುದು.

ಐಟಿ ತಜ್ಞರ ನಿರೀಕ್ಷೆಗಳೇನು?

ಕೇಂದ್ರ ಬಜೆಟ್‌ನಿಂದ ಐಟಿ ತಜ್ಞರು ಏನನ್ನು ಬಯಸುತ್ತಾರೆ ಎಂಬುದು ಇಲ್ಲಿದೆ. ಕೇಂದ್ರ ಬಜೆಟ್ 2024 ನಲ್ಲಿ ಭಾರತದ ಐಟಿ ವಲಯದ ವಿಕಾಸ ಮತ್ತು ವಿಸ್ತರಣೆಗೆ ಪ್ರಮುಖ ಅವಕಾಶವಿದೆ. ಫಿನ್‌ಟೆಕ್, ರಿಟೇಲ್ ಮತ್ತು ಇ-ಕಾಮರ್ಸ್, ಹೆಲ್ತ್ ಮತ್ತು ಫಾರ್ಮಾ, ರಿಯಲ್ ಎಸ್ಟೇಟ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಲಾಜಿಸ್ಟಿಕ್ಸ್, ಟೆಲಿಕಾಂ ಇತ್ಯಾದಿಗಳಂತಹ ವೈವಿಧ್ಯಮಯ ಉದ್ಯಮಗಳಲ್ಲಿ ಅಗಾಧವಾದ ನಾವೀನ್ಯತೆಗಳನ್ನು ಚಾಲನೆ ಮಾಡುವುದರಿಂದ ಡಿಜಿಟಲೀಕರಣ ಮತ್ತು ತಾಂತ್ರಿಕ ಪ್ರಗತಿಯತ್ತ ಗಮನ ಹರಿಸಬೇಕು.

ಅಂತರಾಷ್ಟ್ರೀಯ ಗ್ರಾಹಕರು, ಪಾಲುದಾರಿಕೆ ಅಗತ್ಯ

ಆರ್&ಡಿಯನ್ನು ಉತ್ತೇಜಿಸುವುದು ಮತ್ತು ನುರಿತ ಉದ್ಯೋಗಿಗಳನ್ನು ಪೋಷಿಸುವುದು ಬದ್ಧವಾಗಿರಬೇಕು. ಕಾರಣ ಸಾಫ್ಟ್‌ವೇರ್ ಅಭಿವೃದ್ಧಿ, ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಪರಿಹಾರಗಳಂತಹ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತೀಯ ಐಟಿ ಉದ್ಯಮಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಾರೆ. ವಿದೇಶಿ ವಿನಿಮಯ ಗಳಿಕೆಯ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಅಂತರಾಷ್ಟ್ರೀಯ ಗ್ರಾಹಕರು ಮತ್ತು ಪಾಲುದಾರಿಕೆಗಳು ಅಗತ್ಯವಾಗಿದೆ.

ವಿದೇಶಿ ಹೂಡಿಕೆ ಆಕರ್ಷಿಸುವ ಅವಕಾಶ

ಅಗ್ರಿಟೆಕ್, ಎಲೆಕ್ಟ್ರಿಕ್ ವಾಹನಗಳು, ಫಿನ್‌ಟೆಕ್, ನವೀಕರಿಸಬಹುದಾದ ಇಂಧನ ಮುಂತಾದ ಕ್ಷೇತ್ರಗಳನ್ನು ಬೆಂಬಲಿಸುವ ಉಪಕ್ರಮಗಳಲ್ಲಿ ಅಪಾರ ನಿರೀಕ್ಷೆ ಇದೆ. ಈ ಡೊಮೇನ್‌ಗಳಲ್ಲಿ ಹೊಸತನವನ್ನು ಮಾಡಲು ಸಹಕಾರಿ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಏಕೆಂದರೆ ಇದು ವಿದೇಶಿ ಹೂಡಿಕೆಗಳು ಮತ್ತು ಪಾಲುದಾರಿಕೆಗಳನ್ನು ಆಕರ್ಷಿಸುವ ಅವಕಾಶವನ್ನು ಹೊಂದಿದೆ. ಭಾರತೀಯ ಐಟಿ ಕಂಪನಿಗಳ ಅಂತರಾಷ್ಟ್ರೀಯ ವಿಸ್ತರಣೆಗೆ ಅನುಕೂಲವಾಗುತ್ತದೆ.

ತಂತ್ರಜ್ಞಾನ ಸಚಿವಾಲಯಕ್ಕೆ 16,361 ಕೋಟಿ ರೂ.!

2023-24ನೇ ಸಾಲಿನ ಬಜೆಟ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ 16,361 ಕೋಟಿ ರೂ. ಮೀಸಲಿಡಲಾಗಿತ್ತು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗಾಗಿ ಹೊಸ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವಾರು ದೊಡ್ಡ ಯೋಜನೆಗಳ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ 2000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಹೆಚ್ಚಳ ಮಾಡಲಾಗಿತ್ತು. ಈ ಬಾರಿಯೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹೆಚ್ಚು ಪ್ರಾಮುಖ್ಯತೆ ದೊರೆಯುವ ನಿರೀಕ್ಷೆಯಿದೆ.

ತಂತ್ರಜ್ಞಾನ ಇಲಾಖೆಗೆ ಸಿಕ್ಕ ಅನುದಾನ ಎಷ್ಟು?

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ನೀಡಲಾಗಿದ್ದ ಅನುದಾನದ ಹಣವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ 7931.05 ಕೋಟಿ ರೂಪಾಯಿ ಲಭಿಸಿತ್ತು. ಜೈವಿಕ ತಂತ್ರಜ್ಞಾನ ಇಲಾಖೆಗೆ 2683.86 ಕೋಟಿ ರೂಪಾಯಿ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ವಿಭಾಗಕ್ಕೆ 5746.51 ಕೋಟಿ ರೂ.ಗಳನ್ನು ನಿಗಧಿಪಡಿಸಲಾಗಿತ್ತು. ಈ ಬಾರಿ ಅನುದಾನ ಹಂಚಿಕೆ ಹೆಚ್ಚಾಗುವ ಸಾಧ್ಯತೆಯಿದೆ.

ಇತರೆ ವಿಷಯಗಳು:

ಯುವನಿಧಿ ಫಲಾನುಭವಿಗಳಿಗೆ ಮಹತ್ವದ ಸೂಚನೆ!‌ ತಪ್ಪದೇ ಈ ಕೆಲಸ ಮಾಡಿ

ಇಂದಿನಿಂದ ರಾಜ್ಯದ ಅಂಗನವಾಡಿಗಳಲ್ಲಿ ‘ಎಲ್‌ಕೆಜಿ-ಯುಕೆಜಿʼ ತರಗತಿ ಆರಂಭ!

ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ..! ಸರ್ಕಾರದ ಹೊಸ ಯೋಜನೆ


Share

Leave a Reply

Your email address will not be published. Required fields are marked *