ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಭಾರತ ಸರ್ಕಾರದ ದೊಡ್ಡ ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ಯೋಜನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಸಬ್ಸಿಡಿ ಬೆಲೆಯಲ್ಲಿ ಸಿಲೆಂಡರ್ ಜೊತೆಗೆ ಹೋಗೆ ಮುಕ್ತ ಅಡುಗೆ ಮನೆ ಮತ್ತು ಮಹಿಳೆಯರ ಆರೋಗ್ಯದಲ್ಲಿ ಸುಧಾರಣೆ ತರುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
Contents
ಕಳೆದ ಅಕ್ಟೋಬರ್ ತಿಂಗಳಲ್ಲಿ ಸಬ್ಸಿಡಿ ದರ ಏರಿಕೆ ಮಾಡಿದ ಕೇಂದ್ರ
ಉಜ್ವಲ ಯೋಜನೆಯಲ್ಲಿ 200 ರೂ. ನೀಡುತ್ತಿದ್ದು ಸಬ್ಸಿಡಿ ಹಣವನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ 100 ರೂ. ಜಾಸ್ತಿ ಮಾಡಿ ಯೋಜನೆಯ ಫಲಾನುಭವಿಗಳಿಗೆ 308 ರೂ. ಸಬ್ಸಿಡಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಇದೀಗ ಈ ಬೆಲೆಯನ್ನು 1 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.
ಸಚಿವ ಪಿಯೂಷ್ ಗೋಯೆಲ್ ಅವರು ಪತ್ರಿಕಾ ಘೋಷಣೆಯ ಹೇಳಿಕೆ
ಉಜ್ವಲ ಯೋಜನೆಯ ಬಗ್ಗೆ ಮಾತನಾಡಿದ ಸಚಿವರು ಈ ಯೋಜನೆಯನ್ನು ಮುಂದಿನ ಮಾರ್ಚ್ ವರೆಗೂ ವಿಸ್ತರಣೆ ಮಾಡಲಾಗಿದೆ. 14.2 KG LPG ಸಿಲಿಂಡರ್‌ಗೆ ನೀಡುತ್ತಿದ್ದ 300 ರೂ. ಬೆಲೆಯನ್ನು ಮಾರ್ಚ್ 2025 ರ ವರೆಗೂ ವಿಸ್ತರಣೆ ಮಾಡಲಾಗಿದೆ.
ಉಜ್ವಲ ಯೋಜನೆಯ ಲಾಭಗಳು ಏನು?
- ಉಜ್ವಲ ಯೋಜನೆಯು ಸಬ್ಸಿಡಿ ಬೆಲೆಯಲ್ಲಿ LPG ಸಂಪರ್ಕಗಳನ್ನು ಒದಗಿಸುವ ಮೂಲಕ ಬಡ ಕುಟುಂಬಗಳಿಗೆ ಅಡುಗೆ ಮಾಡಲು ಸಹಾಯಕವಾಗಿದೆ ಹಾಗೂ ಈ ಮನೆಯ ಒಳಗಿನ ವಾಯುಮಾಲಿನ್ಯವನ್ನು ಕಡಿಮೆ ಮಾಡಿಕೊಳ್ಳಬಹುದು ಇದರಿಂದ ಕೆಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅಂದರೆ ಮಹಿಳೆಯರಿಗೆ ಸುಡುವ ಗಾಯದ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
- ಈ ಯೋಜನೆಯಿಂದ ಮಹಿಳೆಯರಿಗೆ ಅಡುಗೆ ಮಾಡಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಬಹುದಾಗಿದೆ ಜೊತೆಗೆ ಇದರಿಂದ ಅವರು ಶಿಕ್ಷಣ & ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಾಯವಾಗುತ್ತದೆ.
- ಸಾಂಪ್ರದಾಯಿಕ ಅಡುಗೆ ಇಂಧನ ಕಡಿಮೆ ಹೊಗೆ & ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಆಗುವುದನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
- ಬಡ ಕುಟುಂಬಗಳಿಗೆ ಆರ್ಥಿಕ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಯೋಜನೆಯು ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸುವ ಮೂಲಕ ಅಡುಗೆ ಇಂಧನದ ಮೇಲಿನ ಕುಟುಂಬಗಳ ವೆಚ್ಚವನ್ನು ಕಡಿಮೆ ಮಾಡಲಾಗುತ್ತದೆ.
- ಉಜ್ವಲ ಯೋಜನೆಯು ಬಡ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಸಹಾಯ. ಸಬ್ಸಿಡಿ ಹಣವನ್ನು ಬೇರೆ ಕಡೆ ವಿನಿಯೋಗ ಮಾಡಲು ಸಹಾಯಕವಾಗಿದೆ.
- ಕುಟುಂಬಕ್ಕೆ ಸಹಾಯ ಆಗುವ ಜೊತೆಗೆ ದೇಶದ ಪ್ರಗತಿಗೆ ಹೆಚ್ಚಿನ ಸಹಾಯವಾಗಲಿದೆ ಏಕೆಂದರೆ ಪ್ರತಿ ಕುಟುಂಬದ ಪ್ರಗತಿಯು ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ.
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನೀವು ಅಧಿಕೃತ ವೆಬ್ಸೈಟ್ / ನಿಮ್ಮ ಹತ್ತಿರದ ಗ್ಯಾಸ್ ಏಜೆಂಟ್ ಸಂಪರ್ಕ ಮಾಡಿ.
ಇತರೆ ವಿಷಯಗಳು
13 ಲಕ್ಷ ರೈತರಿಗೆ 1,400 ಕೋಟಿ ಬೆಳೆ ವಿಮೆ ಪರಿಹಾರ ವರ್ಗಾವಣೆ.! ಈ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ
ಹಿರಿಯ ನಾಗರಿಕರಿಗೆ ಬಂಪರ್ ಸುದ್ದಿ.! ಉಚಿತ ಬಸ್ ಪಾಸ್ ಅರ್ಜಿ ಆಹ್ವಾನ