ಹಲೋ ಸ್ನೇಹಿತರೇ, ಮಹಿಳೆಯರು ಆರ್ಥಿಕವಾಗಿ ಪ್ರಬಲರಾಗಲಿ ಎಂಬ ಉದ್ದೇಶದಿಂದ ಸರ್ಕಾರ ಮಹಿಳೆಯರಿಗಾಗಿ 3 ಲಕ್ಷ ಹಣವನ್ನು ನೀಡುತ್ತದೆ, ಈ ಹಣವನ್ನು ಪಡೆಯುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ನಿಮಗೆ ಉದ್ಯೋಗಿನಿ ಯೋಜನೆ ಮೂಲಕ ಮಹಿಳೆಯರಿಗೆ ಗರಿಷ್ಠ 3 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಇದರಲ್ಲಿ ವಿಶೇಷ ವರ್ಗದ ಮಹಿಳೆಯರಿಗೆ 50% ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಹಾಗಾದರೆ ನಿಮಗೆ ಸರಿಸುಮಾರು ₹1,50,000ವರೆಗೆ ಸಾಲ ಮನ್ನಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಸುಮಾರು 90,000ವರೆಗೆ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ.
Contents
ಉದ್ಯೋಗಿನಿ ಸಾಲ ಯೋಜನೆ!
ಹೌದು ಸ್ನೇಹಿತರೆ, ಈ ಯೋಜನೆ ಅಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಮಾಡಲು ಗರಿಷ್ಠ ₹3,00,000 ವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಸಾಲವನ್ನು (Loan) ನೀಡಲಾಗುವುದು ಎಂಬುದು ಈ ಯೋಜನೆಯ ವಿಶೇಷತೆ ಆಗಿರುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದ ಮಹಿಳೆಯರಿಗೆ ಶೇಕಡ 50% ನಷ್ಟು ಸಾಲದ ಮೇಲಿನ ಸಬ್ಸಿಡಿಯನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಕಡ 30% ನಷ್ಟು ಸಾಲದ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತದೆ. ಸಬ್ಸಿಡಿ ಅಥವಾ ಅಷ್ಟು ಹಣವನ್ನು ಮನ ಮಾಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಳ್ಳಲು, ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಒದಗಿಸಿಕೊಳ್ಳಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಶಾಲಾ ವರ್ಗಾವಣೆ ಪ್ರಮಾಣ ಪತ್ರ
- ಯೋಜನೆಯ ವರದಿ
- ಅಂಗವಿಕಲರು ಅಥವಾ ವಿಧವೆಯರ ಗುರುತಿನ ಪ್ರಮಾಣ ಪತ್ರ
ನೀವು ಮೇಲಿನ ದಾಖಲೆಗಳನ್ನು ತೆಗೆದುಕೊಂಡು ಕರ್ನಾಟಕ ರಾಜ್ಯ ಮಹಿಳಾಭಿವೃದ್ಧಿ ನಿಗಮದಿಂದ ಪ್ರತಿ ವರ್ಷ ಉದ್ಯೋಗಿನಿ ಯೋಜನೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ತಿಳಿದು ಬಂದಿರುತ್ತದೆ ಈ ತಿಂಗಳಿನಲ್ಲಿ ಆನ್ಲೈನ್ ಮೂಲಕ ಅಥವಾ ಕರ್ನಾಟಕ ಸೇವಾ ಸಿಂಧು ಪೋರ್ಟಲ್ ಮೂಲಕ ಹಾಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
- ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಪುರುಷರಿಗೆ ಅವಕಾಶ ಇರುವುದಿಲ್ಲ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.
- ಈ ಯೋಜನೆಯಲ್ಲಿ ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಯಾವುದೇ ರೀತಿಯ ಕುಟುಂಬದ ವಾರ್ಷಿಕ ಆದಾಯ ಮಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.
- ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು ಎಂದು ತಿಳಿಸಲಾಗಿದೆ.
- ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು ಎಂದು ತಿಳಿಸಲಾಗಿರುತ್ತದೆ.
ಈ ಮೇಲಿನ ಅರ್ಹತೆಗಳು ನಿಮ್ಮಲ್ಲಿದ್ದರೆ ಹಾಗೂ ಮೇಲೆ ಕೊಟ್ಟಿರುವ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನಾವು ತಿಳಿಸಿರುವ ಹಾಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅರ್ಜಿ ಆಹ್ವಾನಿಸಲು ಶುರುವಾಗುತ್ತದೆ. ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು
ಪಿಯುಸಿ ಪಾಸಾದವರಿಗೆ ಈ ಬ್ಯಾಂಕ್ ನಲ್ಲಿ 123 SDA ಹುದ್ದೆಗಳ ನೇಮಕಾತಿ!
ನೌಕರರ ಮೂಲ ವೇತನದಲ್ಲಿ 27.5% ಹೆಚ್ಚಳ!