ಹಲೋ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆಯತ್ತ ಸಾಗಿದೆ. ಒಂದೇ ಬಾರಿಗೆ 10,000 ಇಳಿಕೆಯಾಗಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಭಾರತದಲ್ಲಿ, ಅನೇಕ ಜನರು ಚಿನ್ನವನ್ನು ಆಭರಣವಾಗಿ ಮಾತ್ರವಲ್ಲದೆ ಹೂಡಿಕೆಯಾಗಿಯೂ ಪರಿಗಣಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆಯ ಜನರು ಪ್ರತಿದಿನ ಚಿನ್ನದ ಬೆಲೆಯಲ್ಲಿ ಆಸಕ್ತಿ ತೋರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ ಕಾಣುತ್ತಿದೆ.
ಬಜೆಟ್ ಮಂಡನೆ ಬಳಿಕ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹10,000 ಇಳಿಕೆಯಾಗಿದ್ದು, ಖರೀದಿದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇಂದು ಮಂಗಳವಾರ, ಜುಲೈ 30, 2024, ಚಿನ್ನ & ಬೆಳ್ಳಿಯ ಬೆಲೆಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಮಂಗಳವಾರ ಮಾರುಕಟ್ಟೆ ಪ್ರಾರಂಭವಾದ ತಕ್ಷಣ ಚಿನ್ನದ ಬೆಲೆ ₹10ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಬೆಳ್ಳಿ ಬೆಲೆ ₹100 ಏರಿಕೆ ದಾಖಲಿಸಿದೆ.
ಇಂಡಿಯಾ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹69,170 ಆಗಿದೆ. ಸೋಮವಾರ ಚಿನ್ನದ ಬೆಲೆ ₹69,140 ಇತ್ತು. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಬೆಳ್ಳಿ ಬೆಲೆ ₹100ರಷ್ಟು ಏರಿಕೆಯಾಗಿದೆ.
ಸರ್ಕಾರ ಇತ್ತೀಚೆಗೆ ಚಿನ್ನ & ಬೆಳ್ಳಿ ಸೇರಿದಂತೆ ಹಲವಾರು ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿದೆ. ಆಮದು ಮಾಡಿಕೊಂಡ ಚಿನ್ನದ ಮೇಲೆ ಭಾರತದ ಅವಲಂಬನೆಯು ಜಾಗತಿಕ ಪ್ರವೃತ್ತಿಗಳನ್ನು ನಿಕಟವಾಗಿ ಪ್ರತಿಬಿಂಬಿಸುವ ದೇಶೀಯ ಬೆಲೆಗಳನ್ನು ಗಮನಾರ್ಹವಾಗಿ ಪ್ರಭಾವಿಸುತ್ತದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ 22ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ₹63,560 ಇದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ₹69,320 ಇತ್ತು. ಆರ್ಥಿಕ ರಾಜಧಾನಿ ಮುಂಬೈನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ₹63,410ರಷ್ಟಿದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ₹69,170ರಷ್ಟಿತ್ತು. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹64,140 ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ₹69,970 ಇತ್ತು. ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ₹63,410 ಇದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ₹69,170 ಇತ್ತು.
ಭಾನುವಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವ.ಣೆಯಾಗಿಲ್ಲ. ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ ಸ್ಥಿರವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ ಮತ್ತು ಪುಣೆಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ ₹84,400 ತಲುಪಿದೆ. ಚೆನ್ನೈ, ಹೈದರಾಬಾದ್, ಕೇರಳ, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ ₹88,900 ರಂತೆ ಅತ್ಯಧಿಕವಾಗಿ ಮುಂದುವರೆಯಿತು.
ಇತರೆ ವಿಷಯಗಳು
ಮಳೆಯಿಂದಾದ ನಷ್ಟಕ್ಕೆ 775 ಕೋಟಿ ಅನುದಾನ.! ತಕ್ಷಣ ಪರಿಹಾರಕ್ಕೆ ಈ ಕಚೇರಿಗೆ ಬೇಟಿ ನೀಡಿ
ಸರ್ಕಾರಿ ನೌಕರರಿಗೆ ಹೊಸ ಯೋಜನೆ.! ಆಗಸ್ಟ್‌ನಿಂದ ಸಿಗಲಿದೆ ಈ ಉಚಿತ ಭಾಗ್ಯ