rtgh
Headlines

ವಾಹನಗಳ ಓವರ್‌ ಸ್ಪೀಡ್‌ಗೆ ಬ್ರೇಕ್‌! ವೇಗದ ಮಿತಿ ಮಿರಿದ್ರೆ FIR ದಾಖಲು

Speed ​​limit for vehicles on Nice Road
Share

ಹಲೋ ಸ್ನೇಹಿತರೇ, ನೈಸ್ ರಸ್ತೆಯಲ್ಲಿ ವಾಹನ ಚಾಲಕರ ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಅತಿವೇಗದಿಂದ ಹಲವಾರು ಗಂಭೀರ ಮತ್ತು ಮಾರಣಾಂತಿಕ ಅಪಘಾತಗಳು ಸಂಭವಿಸಿರುವುದರಿಂದ ರಸ್ತೆ ಬಳಕೆದಾರರ ಸುರಕ್ಷತೆಯ ಹಿತದೃಷ್ಟಿಯಿಂದ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Speed ​​limit for vehicles on Nice Road

ನೈಸ್ ರಸ್ತೆಯಲ್ಲಿ ಉಂಟಾಗುತ್ತಿದ್ದ ಅಪಘಾತಗಳಿಗೆ ಈ ರಸ್ತೆಗಳಲ್ಲಿ ಚಲಿಸುವ ವಾಹನ ಸವಾರರು ಹಾಗೂ ಚಾಲಕರ ನಿರ್ಲಕ್ಷ್ಯತೆ, ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಗೊಳಿಸಿ ಹಾಗೂ ಪ್ರತಿ ದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ವ್ಯವಸ್ಥೆಯನ್ನು ಆ.2 ರಿಂದ ಜಾರಿಗೆ ತರಲಾಗಿದ್ದು, ವಿವಿದ ಮಾದರಿಯ ವಾಹನಗಳಿಗೆ ನಿಗದಿಗೊಳಿಸಿರುವ ವೇಗದ ಮಿತಿಯ ವಿವರ ಈ ಕೆಳಕಂಡಂತಿದೆ.

ಇದನ್ನೂ ಸಹ ಓದಿ : ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ.!

ಬೆಂಗಳೂರು ಸಂಚಾರಿ ಪೊಲೀಸರ ಪ್ರಕಾರ, ಚಾಲಕನ ಆಸನದ ಜೊತೆಗೆ (M1 ವರ್ಗದ ವಾಹನಗಳು) ಹೆಚ್ಚುವರಿಯಾಗಿ ಎಂಟು ಆಸನಗಳನ್ನು ಒಳಗೊಂಡಿರುವ ಪ್ರಯಾಣಿಕರ ಸಾಗಣೆಗೆ ಬಳಸುವ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ. ಎಂದು ನಿಗದಿಪಡಿಸಲಾಗಿದೆ.

ಚಾಲಕನ ಆಸನದ ಜೊತೆಗೆ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚಿನ ಆಸನಗಳನ್ನು ಹೊಂದಿರುವ ಮೋಟಾರು ವಾಹನಗಳಿಗೆ ಗಂಟೆಗೆ 100 ಕಿ.ಮೀ ಮತ್ತು ಸರಕು ಸಾಗಣೆಗೆ ಬಳಸುವ ಮೋಟಾರ್‌ಸೈಕಲ್‌ಗಳು ಮತ್ತು ವಾಹನಗಳ ವೇಗದ ಮಿತಿಯನ್ನು ಗಂಟೆಗೆ 80 ಕಿಮೀ ಎಂದು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಇದಲ್ಲದೇ ನೈಸ್ ರಸ್ತೆಯಲ್ಲಿ ಎಲ್ಲಾ ದಿನ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳನ್ನು ಬಳಸದಂತೆ ಪೊಲೀಸರು ನಿರ್ಬಂಧ ಹೇರಿದ್ದು, ಆಗಸ್ಟ್ 2 ರಿಂದ ಈ ನಿರ್ಬಂಧಗಳು ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.ಷಞಞ

ಇತರೆ ವಿಷಯಗಳು:

ಗೃಹಲಕ್ಷ್ಮಿ ಜೂನ್, ಜುಲೈ ತಿಂಗಳ ಹಣ ಈ ದಿನ ಜಮಾ!

ಇನ್ಮುಂದೆ ಪಿಂಚಣಿದಾರರಿಗೆ ಮಾಸಿಕ 7500 ರೂ. ಕನಿಷ್ಠ ಪೆನ್ಷನ್! ಕೇಂದ್ರದ ಭರವಸೆ

ದಿಢೀರ್‌ ದುಪ್ಪಟ್ಟಾದ LPG ಸಿಲಿಂಡರ್‌ ಬೆಲೆ..!


Share

Leave a Reply

Your email address will not be published. Required fields are marked *