ಹಲೋ ಸ್ನೇಹಿತರೇ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೊಟ್ಟ ಮೊದಲನೆಯದಾಗಿ ಜಾರಿಗೊಳಿಸಿದ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒಂದು ವರ್ಷ ಪೂರೈಸುವತ್ತ ಸಾಗುತ್ತಿದೆ. ಕಳೆದ ಒಂದು ವರ್ಷಗಳಿಂದ ರಾಜ್ಯ ಸರ್ಕಾರದ ಈ ಯೋಜನೆ ಯಶಸ್ವಿಯಾಗಿದ್ದು, ಕೋಟ್ಯಂತರ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ.
ರಾಜ್ಯ ಸರ್ಕಾರ ನೀಡಿರುವ ಉಚಿತ ಪ್ರಯಾಣ ಯೋಜನೆ ರಾಜ್ಯದ ಮಹಿಳೆಯರಿಗೆ ನೆರವಾಗಿದ್ದು, ಅಂತರ್ ರಾಜ್ಯ ಮಹಿಳೆಯರು ಕೂಡ ಆಧಾರ ಕಾರ್ಡ್ ತೋರಿಸಿ ಪ್ರಯಾಣ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನಡೆಸಲು ಗುರುತಿನ ಚೀಟಿ ನೀಡಲಿ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ರಾಜ್ಯಾದ್ಯಂತ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ ಒಂದು ವರ್ಷದತ್ತ ಹೆಜ್ಜೆ ಹಾಕುತ್ತಿದ್ದೆ. ಆದರೂ ಸಾರಿಗೆ ಇಲಾಖೆ ಗುರುತಿನ ಚೀಟಿ ನೀಡುವಲ್ಲಿ ವಿಫಲವಾಗಿದೆ. ಏಕೆಂದರೆ ಆಧಾರ್ ಕಾರ್ಡ್ ಇನ್ನಿತರ ಸರ್ಕಾರಿ ದಾಖಲೆಗಳನ್ನು ತೋರಿಸಿ ಬಸ್ ಪ್ರಯಾಣ ಮಾಡಲು ಅವಕಾಶ ನೀಡಿದೆ. ಈ ರೀತಿಯ ಸನ್ನಿವೇಶದಿಂದ ಸರ್ಕಾರಕ್ಕೆ ಬೋಗಸ್ ಲೆಕ್ಕ ತಲಪಲಿದೆಯಾ? ಎಂಬ ಅನುಮಾನ ಮೂಡಿಸಿದೆ.
ಇನ್ನುಳಿದ ಗ್ಯಾರಂಟಿಗಳಾದ ಉಚಿತ 200 ಯುನಿಟ್ ವಿದ್ಯುತ್, 2000 ರೂ. ಗೃಹಲಕ್ಷ್ಮೀ ಹಣ, ನಿರುದ್ಯೋಗಿ ಯುವಕ-ಯುವತಿಯರಿಗೆ 3000 ರೂ. ಹಣ ಪಡೆಯಲು ಅರ್ಜಿ ಆಹ್ವಾನಿಸಲಾಗಿತ್ತು. ಬೇಕಾದವರು ಅರ್ಜಿ ಹಾಕಿದರು ಬೇಡದವರು ಬಿಟ್ಟರು ಆದರೆ ಸರ್ಕಾರ ಕೆ.ಎಸ್.ಆರ್.ಟಿ.ಸಿ ವಿಷಯದಲ್ಲಿ ಮಾತ್ರ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರಿ ದಾಖಲೆ ತೋರಿಸಿ, ಉಚಿತ ಪ್ರಯಾಣ ಮಾಡಬಹುದೆಂದು ಹೇಳಿತು.
ಇದನ್ನೂ ಸಹ ಓದಿ : PU, ಪದವಿ, ಡಿಪ್ಲೊಮ ಹೊಸ ಪ್ರವೇಶಾತಿಗಳಿಗೆ ಉಚಿತ ಹಾಸ್ಟೆಲ್.! ಅರ್ಜಿ ಆಹ್ವಾನ
ಇದರಿಂದ ಅನುಕೂಲಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧವೇ ಇಲ್ಲದ ರಾಜ್ಯ ಗಡಿ ಜಿಲ್ಲೆಯ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ, ರಾಜರೋಷವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಆದ್ದರಿಂದ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ ಯಿಂದ ಗುರುತಿನ ಚೀಟಿ ಪಡೆಯಲು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಅರ್ಜಿ ಸಲ್ಲಿಸಲು ಮೂಲ ದಾಖಲೆಯನ್ನಾಗಿ ರಾಜ್ಯದ ಆಧಾರ್ ಕಾರ್ಡ್ ಅಪ್‍ಲೋಡ್ ಮಾಡಿದ ತಕ್ಷಣ ವೆಬ್‍ಸೈಟ್‍ನಲ್ಲಿವೇ ಗುರುತಿನ ಚೀಟಿ ಡೌನ್‍ಲೋಡ್ ಮಾಡುವಂತಹ ವ್ಯವಸ್ಥೆಯನ್ನು ಸರ್ಕಾರ ಅಳವಡಿಸಬೇಕು.
ಇದರಿಂದ ಸರ್ಕಾರಕ್ಕೆ ಸಲ್ಲಿಕೆಯಾಗುವ ಭೋಗಸ್ ವರದಿ ತಪ್ಪಿ, ಉಚಿತ ಬಸ್ ಪ್ರಯಾಣ ಬೇಕಿದ್ದ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ ನೀಡುವ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆದುಕೊಳ್ಳತ್ತಾರೆ. ಬೇಡದವರು ಗುರುತಿನ ಚೀಟಿ ಇಲ್ಲದೇ ಹಣ ನೀಡಿ ಪ್ರಯಾಣ ಬೆಳೆಸಬಹುದು. ಕೆ.ಎಸ್.ಆರ್.ಟಿ.ಸಿ ವಿಷಯದಲ್ಲಿ ಸರ್ಕಾರ ಹೆಚ್ಚು ಗಮನಹರಿಸಿ, ಸಾರಿಗೆ ಇಲಾಖೆಯಿಂದ ಉಚಿತ ಬಸ್ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಗುರುತಿನ ಚೀಟಿ ನೀಡುವಂತಹ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಇತರೆ ವಿಷಯಗಳು:
ಗಗನಕ್ಕೇರಿದ ತರಕಾರಿಗಳ ಬೆಲೆ; ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! 25.5% ವೇತನ ಹೆಚ್ಚಳ ಬಹುತೇಕ ಫಿಕ್ಸ್
ಈ ಬಾರಿಯ SSLC ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇಲ್ಲ! ಮಧು ಬಂಗಾರಪ್ಪ ಸ್ಪಷ್ಟನೆ