ಹಲೋ ಸ್ನೇಹಿತರೇ, ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯು ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದ್ದು. 50 ರಿಂದ 55 ರೂ. ಗೆ ಸಿಗುತ್ತಿದ್ದುದು ಇದೀಗ 60 ರಿಂದ 70 ರೂ.ಗೆ ಏರಿಕೆಯಾಗಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ರೇಷನ್ ಅಕ್ಕಿ ಸಿಗುತ್ತಾ ಇಲ್ವಾ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈ ಹಿನ್ನೆಲೆಯಲ್ಲಿ APL ಕಾರ್ಡಿಗೆ ಸಿಗುವ ರಿಯಾಯಿತಿ ದರದ ಅಕ್ಕಿ ಎಲ್ಲರಿಗು ಆಸರೆಯಾಗಬಹುದು ಎಂದು ಕಾದಿರುವುದರಿಂದ ಮಧ್ಯಮ ವರ್ಗದವರಿಗೆ ನಿರಾಸೆಯಾಗುತ್ತದೆ. APL ಕಾರ್ಡ್‌ದಾರರ ಸಂಖ್ಯೆ ಕಡಿಮೆ ಇರುವುದರಿಂದ & BPL ಕಾರ್ಡ್‌ದಾರರಲ್ಲಿ ಹಲವರು ಅಕ್ಕಿ ತೆಗೆದಕೊಳ್ಳದ್ದರಿಂದ ಈ ಹಿಂದೆ APL ಕಾರ್ಡುದಾರರಿಗೆ ಸಿಗುತ್ತಿತ್ತು. ಇದೀಗ 2 ತಿಂಗಳಿಂದ ಅಕ್ಕಿ ಪೂರೈಕೆಯಾಗುತ್ತಿಲ್ಲ.
ಮಾರುಕಟ್ಟೆಯಲ್ಲಿ 2 ತಿಂಗಳ ಹಿಂದೆ ಸರಾಸರಿ ಅಕ್ಕಿ ದರ 50-55 ರೂ. ಇದ್ದ. ಪ್ರಸ್ತುತ 60-70 ರೂ.ಗೆ ಏರಿಕೆಯಾಗಿದೆ. ಮೊದಲು ಪಡಿತರ ಅಂಗಡಿಗಳಲ್ಲಿ APL (ಬಡತನ ರೇಖೆಯ ಮೇಲಿನವರು) ಕಾರ್ಡ್ ಹೊಂದಿದ್ದವರಿಗೆ ಪ್ರತಿ ಕಿಲೋ ಅಕ್ಕಿಗೆ 15 ರೂ. ದರದಂತೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಲಾಗುತ್ತಿತ್ತು.
ಆದರೆ, ಮಾರುಕಟ್ಟೆಯಲ್ಲಿದರ ಕಡಿಮೆ ಇದ್ದಾಗ BPL ಕಾರ್ಡ್ ಹೊಂದಿರುವ ಮಧ್ಯಮ ವರ್ಗದ ಬಹುತೇಕ ಕುಟುಂಬಗಳು ರೇಷನ್ ಅಂಗಡಿಗಳಲ್ಲಿಅಕ್ಕಿ ತೆಗೆದುಕೊಳ್ಳುತ್ತಿರಲಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿಅಕ್ಕಿ ದರ ಏರಿದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲಿ APL ಕಾರ್ಡ್‌ದಾರರಿಂದ ಅಕ್ಕಿಗೆ ಬೇಡಿಕೆಯು ಹೆಚ್ಚಾಗಿದೆ. ಆದರೆ, ಆಹಾರ ಇಲಾಖೆಯಿಂದ ರೇಷನ್ ಅಂಗಡಿಗಳಿಗೆ ಕಳೆದ 2 ತಿಂಗಳಿಂದ APL ಕಾರ್ಡ್ ಕೋಟಾದ ಅಕ್ಕಿ ಪೂರೈಕೆಯಾಗುತ್ತಿಲ್ಲ.
ಕಾರಣವೇನು?
ರಾಜ್ಯ ಸರಕಾರ ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ (ನಾಫೆಡ್), ನ್ಯಾಷನಲ್ ಕೋ ಆಪರೇಟಿವ್ ಕನ್ಸೂಮರ್ ಫೆಡರೇಶನ್ (ಎನ್‌ಸಿಸಿಎಫ್) ಮುಂತಾದ ಸಂಸ್ಥೆಗಳಿದ ಪ್ರತಿ ಕಿಲೋ ಅಕ್ಕಿಗೆ 34 ರೂ. ಬೆಲೆ ನೀಡಿ ಖರೀದಿಸಲಾಗುತ್ತಿದ್ದು. ಈ ಅಕ್ಕಿಯನ್ನು BPL ಕಾರ್ಡ್‌ದಾರರಿಗೆ ಉಚಿತವಾಗಿ & APL ಕಾರ್ಡ್‌ದಾರರಿಗೆ ಕಿಲೋಗೆ 15 ರೂ. ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿತ್ತು.
ಪ್ರಮಾಣ ಮೀರಿದ BPL ಕಾರ್ಡ್: ಸರ್ಕಾರದ ನಿಯಮದ ಪ್ರಕಾರ ಗ್ರಾಮೀಣ ಭಾಗದಲ್ಲಿ ಒಟ್ಟು ಪಡಿತರ ಕಾರ್ಡ್‌ಗಳಲ್ಲಿ ಗರಿಷ್ಠ ಶೇಕಡಾ 74% ಹಾಗೂ ನಗರ ಪ್ರದೇಶಗಳಲ್ಲಿಒಟ್ಟು ಪಡಿತರ ಕಾರ್ಡ್‌ಗಳಲ್ಲಿ ಗರಿಷ್ಠ ಶೇಕಡಾ 49ರಷ್ಟು BPL ಕಾರ್ಡ್ ಇರಲು ಅವಕಾಶ ಇತ್ತು. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಗ್ರಾಮೀಣ ಭಾಗದಲ್ಲಿಶೇ.85 ಹಾಗೂ ನಗರದ ಪ್ರದೇಶಗಳಲ್ಲಿ ಶೇಕಡಾ 70% BPL ಕಾರ್ಡ್‌ಗಳಿವೆ.
ಇದರಿಂದ ಪಡಿತರ ಅಂಗಡಿಗಳಿಗೆ ಪೂರೈಕೆಯಾಗುವ ಒಟ್ಟು ಅಕ್ಕಿಯ ಪ್ರಮಾಣದಲ್ಲಿಬಿಪಿಎಲ್ ಕಾರ್ಡ್‌ನ ಕೋಟಾ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಇದೇ ಸ್ಥಿತಿಯಿದ್ದು ಸರಕಾರ ಎಪಿಎಲ್ ಕಾರ್ಡ್‌ಗಳ ಅಕ್ಕಿ ಪೂರೈಕೆ ಸ್ಥಗಿತ ಮಾಡಿದೆ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಮೊದಲು ಸಿಗುತ್ತಿತ್ತು
ಮೊದಲೆಲ್ಲ, APL ಕಾರ್ಡ್‌ದಾರರು ರೇಷನ್ ಅಂಗಡಿಗಳಲ್ಲಿ ಅಕ್ಕಿ ಕೊಳ್ಳುವ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿಅಕ್ಕಿ ಕೊಳ್ಳಲು ಬರುತ್ತಿದ್ದ ಕೆಲವು APL ಕಾರ್ಡ್‌ದಾರರಿಗೆ BPL ಕಾರ್ಡ್‌ನಲ್ಲಿ ಅಕ್ಕಿ ಕೊಳ್ಳದ ಕೆಲವರ ಕೋಟಾವನ್ನು ಸರಿ ಹೊಂದಿಸಿ ಪೂರೈಕೆ ಮಾಡುತ್ತಿದ್ದರು.
ಇತರೆ ವಿಷಯಗಳು
ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ಬೆಲೆ?
ಮೋದಿ ₹78,000 ಸಬ್ಸಿಡಿ ವಿದ್ಯುತ್.! ಅಪ್ಲೇ ಮಾಡಿ, ಫ್ರೀ ಕರೆಂಟ್ ಪಡೆದು KEB ಗೆ ಮಾರಾಟ ಮಾಡಿ