ಹಲೋ ಸ್ನೇಹಿತರೇ, ಕೊನೆಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುದೊಡ್ಡ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ, ಏನದು ನಿರ್ಧಾರ ಎಂಬುದನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಇದೇ ಆಗಸ್ಟ್ 1ರಿಂದಲೇ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಜಾರಿಗೆಯಾಗಲಿದೆ. ಗಮನಾರ್ಹವೆಂದರೆ 7ನೇ ವೇತನ ಆಯೋಗದ ವರದಿಯಲ್ಲಿ ಏಪ್ರಿಲ್ 1, 2024ರಿಂದ ಪೂರ್ವಾನ್ವಯವಾಗಿ ಹಣಕಾಸು ಸೌಲಭ್ಯಗಳನ್ನು ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ, ಇದೀಗ ಬರಲಿರುವ ಆಗಸ್ಟ್ 1 ರಿಂದ ಹೊಸ ವೇತನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಯಾವ್ಯಾವ ಸರ್ಕಾರಿ ನೌಕರರ ಸಂಬಳ ಎಷ್ಟೆಷ್ಟು ಹೆಚ್ಚಾಗಲಿದೆ?
Contents
ಸಂಬಳ ಎಷ್ಟು ಏರಿಕೆಯಾಗಲಿದೆ?
ಕೆ. ಸುಧಾಕರ ರಾವ್ ನೇತೃತ್ವದ 7ನೇ ವೇತನ ಆಯೋಗವು ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸ್ಸು ಮಾಡಿ ಕಳೆದ ಮಾರ್ಚ್ 16ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ.
ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೌಕರರ ಸಂಬಳವನ್ನು ಶೇ.17ರಷ್ಟು ಹೆಚ್ಚಳ ಮಾಡಿತ್ತು. ಈಗ 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ.10.5ರಷ್ಟು ಸೇರಿಸಿ ಒಟ್ಟು ಶೇ.27.5ರಷ್ಟು ಆಗುವಂತೆ ವೇತನವನ್ನು ಏರಿಕೆ ಮಾಡಲು ನಿರ್ಧರಿಸಲಾಗಿದೆ.
‘ಸಿ’ & ‘ಡಿ’ ದರ್ಜೆ ನೌಕರರ ವೇತನ ವಿವರ
‘ಎ’ ವಲಯದ ‘ಸಿ’ & ‘ಡಿ’ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ.31 (5,270 ರೂ.) ಹಾಗೂ ಶೇ.27.50 (4,675 ರೂ.) ಫಿಟ್ಮೆಂಟ್ ಸೇರಿ ಒಟ್ಟು 26,945 ಸಿಗುತಿತ್ತು.
ಇದೀಗ 2024ರ ನೂತನ ವೇತನ ಶ್ರೇಣಿಯಲ್ಲಿ 27,000 ರೂ. ಮೂಲ ವೇತನವಿದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 ರೂ. (01-01-2024ಕ್ಕೆ) ಸಿಗುತ್ತದೆ.
‘ಎ’ & ‘ಬಿ’ ದರ್ಜೆ ನೌಕರರ ವೇತನ ವಿವರ
‘ಎ’ ವಲಯದ ‘ಎ’ & ‘ಬಿ’ ದರ್ಜೆಯ ನೌಕರರಿಗೆ 2022ರ ಜುಲೈ 1ರಂದು 17,000 ರೂ. ವೇತನ ಇದ್ದರೆ, ಶೇ.31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು.
ಇದೀಗ 2024ರ ನೂತನ ವೇತನ ಶ್ರೇಣಿಯಲ್ಲಿ 27,000 ರೂ. ಮೂಲ ವೇತನವಿದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ 900 ಸೇರಿ ಒಟ್ಟು 35,595 ವೇತನ ಸಿಗುತ್ತದೆ.
ಎಷ್ಟು ಜನರಿಗೆ ಅನುಕೂಲವಾಗಲಿದೆ?
ಸಂಪುಟ ಸಭೆಯ ತೀರ್ಮಾದಂತೆ 7ನೇ ವೇತನ ಆಯೋಗದ ಅಂತಿಮ ಶಿಫಾರಸ್ಸು ಜಾರಿಯಾದರೆ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ & ಪ್ರಾಧಿಕಾರಗಳಲ್ಲಿ 2.50 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 12.20 ಲಕ್ಷನೌಕರರ ಕುಟುಂಬಗಳಿಗೆ ಅನುಕೂಲವಾಗಲಿದೆ.
ಇತರೆ ವಿಷಯಗಳು
ನಾಡಿನ ಜನತೆಗೆ ಭರ್ಜರಿ ಸುದ್ದಿ! ಇನ್ಮುಂದೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ 100% ಮೀಸಲಾತಿ
ಗೃಹಜ್ಯೋತಿ ಗ್ರಾಹಕರಿಗೆ ದೊಡ್ಡ ಬರೆ: ಮೈನಸ್ ಬಿಲ್ ಬಂದ್ರೂ ಕಟ್ಟಬೇಕು ಎಎಸ್‌ಡಿ