rtgh
Headlines

ಹೊಸ ಬಿಪಿಎಲ್‌ ಕಾರ್ಡ್‌ ಸದ್ಯಕ್ಕಿಲ್ಲ: ಸರ್ಕಾರದ ಸವಲತ್ತು ಪಡೆಯಲು ಇಷ್ಟು ದಿನ ಕಾಯಲೇಬೇಕು

ration card update karnataka
Share

ಹಲೋ ಸ್ನೇಹಿತರೇ, ಕಳೆದ ಒಂದೂವರೆ ವರ್ಷದಿಂದ ಹೊಸ ಪಡಿತರ ಚೀಟಿ ವಿತರಣೆ, ತಿದ್ದುಪಡಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸರ್ಕಾರದ ಸವಲತ್ತು ಪಡೆಯಲು ಜನರು ಪರದಾಡುವಂತಿದೆ. ಪಡಿತರ ಚೀಟಿ ಇಲ್ಲದೇ ಯೋಜನೆಯ ಲಾಭ ಪಡೆಯಲು ಆಗುತ್ತಿಲ್ಲ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ration card update karnataka

ತಿದ್ದುಪಡಿಗೆ, ಹೊಸ ಚೀಟಿಗೆ ಅರ್ಜಿ ಕೊಟ್ಟರೆ ಸಿಗುತ್ತಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಕೈ ಚೆಲ್ಲುತ್ತಾರೆ ಎನ್ನುವಂತಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಇಲಾಖೆ ಬಳಿ ಲಕ್ಷ ಲಕ್ಷಗಟ್ಟಲೇ ಸಲ್ಲಿಸಿರುವ ಅರ್ಜಿಗಳು ಹಾಗೇ ಉಳಿದಿದೆ.

ಹೈಲೈಟ್ಸ್‌:

  • ಕಳೆದ ಒಂದೂವರೆ ವರ್ಷದಿಂದ ಹೊಸ ರೇಷನ್‌ ಕಾರ್ಡ್ ವಿತರಣೆ ಸ್ಥಗಿತ
  • ನಾನಾ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಪಡಿತರ ಚೀಟಿ ಇಲ್ಲದೇ ಜನರ ಪರದಾಟ
  • ಇಲಾಖೆಯಲ್ಲಿ ಲಕ್ಷಗಟ್ಟಲೇ ಅರ್ಜಿಗಳು ಬಾಕಿಯಿದೆ.

ಹಾವೇರಿ: ಕಳೆದ ಒಂದೂವರೆ ವರ್ಷದಿಂದ ಹೊಸ ರೇಷನ್‌ ಕಾರ್ಡ್ ವಿತರಣೆ ಇಲ್ಲದ ಕಾರಣಕ್ಕೆ ಜಿಲ್ಲೆಸೇರಿದಂತೆ ರಾಜ್ಯದ ಜನರು ಸರ್ಕಾರದ ಗ್ಯಾರಂಟಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಮಾಸಾಶನ ಸೇರಿದಂತೆ ನಾನಾ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ರೇಷನ್‌ ಕಾರ್ಡ್ ಕೇಳುತ್ತಿರುವುದರಿಂದ ಅನೇಕರಿಗೆ ತೊಂದರೆ ಉಂಟಾಗುತ್ತಿದೆ.

ಲಕ್ಷಾಂತರ ಅರ್ಜಿ ಬಾಕಿ

ರೇಷನ್‌ ಕಾರ್ಡ್ ಬಲು ಮಹತ್ವದ ದಾಖಲೆಗಳಲ್ಲೊಂದು. ಇದನ್ನು ಪಡೆಯಲು ಈಗ ಲಿಖಿತವಾಗಿ ಅಪ್ಲೇ ಮಾಡುವ ಬದಲು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕಿದೆ. ಈ ಪ್ರಕ್ರಿಯೆ ಕೆಲ ಸಮಯ ಶುರುವಿದ್ದರೂ ಕೆಲವು ಸಮಯ ಸ್ಥಗಿತ ಮಾಡಲಾಗುತ್ತದೆ. ಖಚಿತ ಮೂಲಗಳ ಪ್ರಕಾರ ಈಗಾಗಲೇ ಇಲಾಖೆ ಬಳಿ ಲಕ್ಷ ಲಕ್ಷಗಟ್ಟಲೇ ಸಲ್ಲಿಸಿರುವ ಅರ್ಜಿಗಳು ಹಾಗೇ ಉಳಿದಿವೆ. ಅವುಗಳ ವಿಲೇವಾರಿ ಆದ ನಂತರ ಹೊಸ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಒಂದು ವೇಳೆ ಈ ಪ್ರಕ್ರಿಯೆ ನಿರಂತರಾವಾಗಿದ್ದಲ್ಲಿ ಜತೆಗೆ ಅರ್ಜಿ ಸಲ್ಲಿಸಿದ ಬಗ್ಗೆ ರಸೀದಿ ಪಡೆದು ಸಹ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರೇ ಹೆಚ್ಚು. ಈ ಎಲ್ಲಕಾರಣಗಳಿಂದಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಗ್ರಾಮಿಣ ಭಾಗದಲ್ಲಿ ನಾನಾ ಕಾರಣಕ್ಕೆ ಕುಟುಂಬ ವಿಭಜನೆಗೊಂಡು ಪ್ರತ್ಯೇಕ ಕುಟುಂಬಗಳಾಗುವುದು ಸಾಮಾನ್ಯ.

ಈ ವೇಳೆ ಮೂಲ ಕುಟುಂಬದಿಂದ ಹೊರಬಂದವರು ಹೊಸ ರೇಷನ್‌ ಕಾರ್ಡ್ ಮಾಡಿಸಲು ಮುಂದಾಗುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಮೊದಲಿದ್ದ ಕಾರ್ಡ್‌ನಲ್ಲಿನ ತಿದ್ದುಪಡಿ ಹಾಗೂ ಹೊಸ ಕಾರ್ಡ್‌ಗೆ ಅಜಿ ಸಲ್ಲಸಲು ಹೋದರೆ ಇಡೀ ಪ್ರಕ್ರಿಯೆಯೇ ಸ್ಥಗಿತವಾಗಿರುವುದು ತಲೇನೋವಾಗಿ ಪರಿಣಮಿಸಿದೆ.

ಜಿಲ್ಲೆಯ ಪರಿಸ್ಥಿತಿ

ಆಹಾರ ಇಲಾಖೆ ಮೂಲಗಳ ಪ್ರಕಾರ, 2023-24 ನೇ ಸಾಲಿಗೆ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ರೇಷನ್‌ ಕಾರ್ಡ್ ಪಡೆಯಲು ಸಲ್ಲಿಕೆಯಾದ ಒಟ್ಟು ಅರ್ಜಿಗಳು (29666). ಈ ಪೈಕಿ ಅರ್ಜಿ ಸ್ವೀಕರಿಸುವ ಜತೆಗೆ ಸ್ಥಳ ತನಿಖೆ ಕೈಗೊಂಡಿರುವ ಅರ್ಜಿಗಳು(27422). ಅಗತ್ಯ ದಾಖಲೆಗಳ ಪರಿಶೀಲನೆ ನಂತರ ಗುರುತಿಸಲಾಗಿರುವ ಅರ್ಹರ ಸಂಖ್ಯೆ (11908) ಜತೆಗೆ ತಿರ ಸ್ಕೃತ ಅರ್ಜಿಗಳು (7266) ವಿತರಿಸಲಾದ ರೇಷನ್‌ ಕಾರ್ಡ್‌ಗಳ ಸಂಖ್ಯೆ(19174) ಸದ್ಯಕ್ಕೆ ಇಲಾ ಖೆಯ ಬಳಿ ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆ(10497)ಬಡತನ ರೇಖೆಗಿಂತ ಮೇಲ್ಪಟ್ಟ ಕುಟುಂಬಗಳಿಗೆ ನೀಡಲಾಗುವ ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಯಾಗಿದ್ದು (3980), ಇವುಗಳ ಪೈಕಿ ಸ್ಥಳ ಪರಿಶೀಲನೆ ನಡೆಸಿದ್ದು (2004), ಅರ್ಹರ ಸಂಖ್ಯೆ(1224), ತಿರಸ್ಕೃತ (151), ವಿತರಿಸಲಾದ ಪಡಿತರ ಚೀಟಿಗಳ ಸಂಖ್ಯೆ (1375) ಇನ್ನೂ ಬಾಕಿ ಉಳಿದಿರುವುದು (2605).

ಬಾಕಿ ಇತ್ಯರ್ಥ ನಂತರವೇ ಹೊಸದು

ಜಿಲ್ಲೆಯಲ್ಲಿಒಟ್ಟಾರೆ ಬಾಕಿ ಉಳಿದಿರುವ ಅರ್ಜಿದಾರರಿಗೆ ರೇಷನ್‌ ಕಾರ್ಡ್ ವಿತರಿಸಿದ ನಂತರವೇ ಹೊಸ ರೇಷನ್‌ ಕಾರ್ಡ್ ಪಡೆಯಲು ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದ್ದು. ಹೊಸ ರೇಷನ್‌ ಕಾರ್ಡ್ ಪಡೆದುಕೊಳ್ಳುವವರೆಗೂ ಸರಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳಿಂದ ದೂರವಿದ್ದಂತೆಯೇ ಸರಿ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೆಲವರು ಹಣ ಪಡೆಯುತ್ತಾರೆ ಎಂಬ ದೂರುಗಳು ಕೂಡ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಒಂದೆಡೆ ಸರ್ಕಾರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ನಿತ್ಯ ಲಕ್ಷಾಂತರ ಜನರು ಫಲಾನುಭವಿಗಳಾಗುತ್ತಿದ್ದಾರೆ ಎಂದು ಪ್ರಚಾರ ಪಡೆದುಕೊಳ್ಳುತ್ತಿದ್ದು. ಪಡಿತರ ಚೀಟಿ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆ ಆಹಾರ ಖಾತೆ ಸಚಿವ ಕೆ.ಎಚ್‌ ಮುನಿಯಪ್ಪ ಅವರು ಹಳೆಯ ಪಡಿತರ ಚೀಟಿ ಅರ್ಜಿ ಇತ್ಯರ್ಥಪಡಿಸಿದ ನಂತರವೇ ಹೊಸ ರೇಷನ್‌ ಕಾರ್ಡ್ಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ರಿ ಎಪ್ಪಾ, ಅರ್ಜಿ ಹಾಕಾಕ ನೂರಾರು ರೂಪಾಯಿ ಕೊಟ್ಟೇವ್ರಿ. ಆದರೂ ಈ ವರೆಗೂ ರೇಷನ್‌ ಕಾರ್ಡ್ ಬಂದಿಲ್ಲ. ಕೇಳಿದ್ರ ಬರಾಕ ಇನ್ನೂ ಟೈಮ್‌ ಹಿಡೀತೈತಿ ಅಂತಾರ್ರಿ. ನನಗ ವಯಸ್ಸು ಆಗೇತಿ ಮಗ-ಸೊಸಿ ಹೊರಗ ಹಾಕ್ಯಾರ. ದುಡಿದ ತಿನಬೇಕ್ರಿ. ಮಾಶಾಸನಕ್ಕೂ ಅರ್ಜಿ ಸಲ್ಲಿಸಬೇಕು ಅಂದ್ರ ಪಡಿತರ ಚೀಟಿ ಎಲ್ಲಿಐತಿ ಅಂತ ಕೇಳ್ತಾರ್ರಿ. ನಮ್ಮಂತವರು ಏನ್‌ ಮಾಡಬೇಕ್ರಿ

ಇತರೆ ವಿಷಯಗಳು

ಡಿಪ್ಲೊಮಾ ಫಲಿತಾಂಶ ಈಗಾಗಾಲೇ ಬಿಡುಗಡೆ! ಮಾರ್ಕ್‌ ಶೀಟ್‌ ಇಲ್ಲಿಂದ ಡೌನ್‌ಲೋಡ್‌ ಮಾಡಿ

ಕಿಸಾನ್ 17ನೇ ಕಂತಿನ ಹಣ ಖಾತೆಗೆ ಜಮಾ! 2000 ಬರದೆ ಇದ್ದವರು ಈ ನಂಬರ್‌ಗೆ ಕರೆ ಮಾಡಿ


Share

Leave a Reply

Your email address will not be published. Required fields are marked *