ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಟಿಕೆಟ್ ಅನ್ನು ನೀಡುವ ವ್ಯವಸ್ಥೆಯನ್ನು KSRTC ಬಸ್ ಗಳಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.
ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಮಷೀನ್ ಬಳಕೆಯನ್ನು ಪ್ರಾಯೋಗಿಕವಾಗಿ 150 KSRTC ಬಸ್ ಗಳಲ್ಲಿ ಆರಂಭಿಸಲಿದ್ದು, ಸಾಧಕ ಬಾಧಕಗಳ ಪರಿಶೀಲಿಸಿದ ಬಳಿಕ ಎಲ್ಲಾ ಬಸ್ ಗಳ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಮಷೀನ್ ಅನ್ನು ಬಳಕೆ ಮಾಡಲಾಗುವುದು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, BMTC ಕೆಲವು ಮಾರ್ಗಗಳಲ್ಲಿ UPI ತಂತ್ರಜ್ಞಾನದ ಮೂಲಕ ಟಿಕೆಟ್ ದರದ ಪಾವತಿ ಪದ್ಧತಿಯು ಜಾರಿಯಲ್ಲಿದೆ. ಅದು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆಯಲ್ಲ. ನಿರ್ವಾಹಕರು ಕುತ್ತಿಗೆಗೆ ಕ್ಯೂಆರ್ ಕೋಡ್ ಹಾಕಿಕೊಂಡಿರುತ್ತಾರೆ. ಅದನ್ನು ಸ್ಕ್ಯಾನ್ ಮಾಡಿ ಟಿಕೆಟ್ ದರವನ್ನು ಪಾವತಿಸಿದವರಿಗೆ ಟಿಕೆಟ್ ಅನ್ನು ಕೊಡುತ್ತಾರೆ.
ಇದನ್ನೂ ಸಹ ಓದಿ: ಸರ್ಕಾರಿ ನೌಕರರಿಗೆ ಹೊಸ ಯೋಜನೆ.! ಆಗಸ್ಟ್‌ನಿಂದ ಸಿಗಲಿದೆ ಈ ಉಚಿತ ಭಾಗ್ಯ
ಕೆಎಸ್ಆರ್ಟಿಸಿಯಲ್ಲಿ ಈ ಪದ್ಧತಿಯ ಬದಲಿಗೆ ಟಿಕೆಟ್ ಮಷೀನ್ ನಲ್ಲಿ ಕ್ಯೂಆರ್ ಕೋಡ್ ಒದಗಿಸುವ ತಂತ್ರಜ್ಞಾನ ಇರುತ್ತದೆ. ನಗದು ರಹಿತವಾದ ವ್ಯವಸ್ಥೆಗೆ ಒತ್ತು ನೀಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. UPI ಬಳಕೆ ಈಗ ಎಲ್ಲಾ ಕಡೆ ಸಾಮಾನ್ಯವಾಗಿದ್ದು, KSRTC ಬಸ್ ಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಯಾದಲ್ಲಿ ಪ್ರಯಾಣಿಕರು UPI ಮೂಲಕವೇ ಟಿಕೆಟ್ ಹಣವನ್ನು ಪಾವತಿಸಲಿದ್ದಾರೆ.
ಮುಂದಿನ ವಾರ KSRTC ಯ 150 ಬಸ್ ಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಬಳಕೆ ಮಾಡಲಾಗುವುದು. ಸಾಧಕ –ಬಾಧಕ ಗಳ ಪರೀಕ್ಷಿಸಿದ ಬಳಿಕ ಎಲ್ಲಾ ಬಸ್ ಗಳಲ್ಲಿಯೂ ಇದನ್ನು ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಆಗಸ್ಟ್ 1 ರಿಂದ ಈ ಹೊಸ ನಿಯಮಗಳು! ಏನೆಲ್ಲಾ ಬದಲಾಗಲಿದೆ ಗೊತ್ತ?
ಮಳೆಯಿಂದಾದ ನಷ್ಟಕ್ಕೆ 775 ಕೋಟಿ ಅನುದಾನ.! ತಕ್ಷಣ ಪರಿಹಾರಕ್ಕೆ ಈ ಕಚೇರಿಗೆ ಬೇಟಿ ನೀಡಿ