ಹಲೋ ಸ್ನೇಹಿತರೇ, ನಾವು ಚಿನ್ನ, ಗಾಡಿ ಮನೆ ಇದ್ಯಾವುದರ ಮೇಲೆ ಇನ್ವೆಸ್ಟ್ ಮಾಡಿದ್ರು ಒಂದು ಸೈಟ್ ಮೇಲೆ ಇನ್ವೆಸ್ಟ್ ಮಾಡಿದಷ್ಟು ಲಾಭ ಸಿಗುವುದಿಲ್ಲ ಎನ್ನಬಹುದು. ಯಾಕಂದ್ರೆ ನೀವು ಇಂದು ಖರೀದಿ ಮಾಡಿದ ಸೈಟ್ ಅಥವಾ ಜಮೀನಿನ ಬೆಲೆ ಇನ್ನೂ ಮುಂದಿನ ಕೆಲವು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಬಹುದು.
ಈ ನಿಟ್ಟಿನಲ್ಲಿ ಇಂದು ಆಸ್ತಿ ಖರೀದಿಸುವವರ ಸಂಖ್ಯೆಯು ಜಾಸ್ತಿಯಾಗಿದೆ. ಆದರೆ ಈ ರೀತಿ ನೀವು ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ಕೆಲವು ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.
Contents
ಆಸ್ತಿ ಖರೀದಿಯಲ್ಲಿ ನಡೆಯುತ್ತೆ ವಂಚನೆ:
ಯಾರದ್ದು ಜಾಗವನ್ನು ತಮ್ಮದೇ ಎಂದು ಸುಳ್ಳು ಡಾಕ್ಯೂಮೆಂಟ್ ಸೃಷ್ಟಿ ಮಾಡಿ ಮಾರಾಟ ಮಾಡುವ ವಂಚಕರ ಸಂಖ್ಯೆ ಜಾಸ್ತಿ ಆಗಿದೆ. ಹಾಗಾಗಿ ನೀವು ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ಸಾಕಷ್ಟು ಡಾಕ್ಯುಮೆಂಟ್ಸ್ ಗಳನ್ನು ಬಹಳ ಕೂಲಂಕುಶವಾಗಿ ಪರಿಶೀಲಿಸಬೇಕು.
ಒಂದೇ ಜಾಗವನ್ನು ನಾಲ್ಕೈದು ಜನರಿಗೆ ಮಾರಿ ಹಣ ಮಾಡುವ ವಂಚಕರು ಇದ್ದಾರೆ. ನಗರ ಪ್ರದೇಶಗಳಲ್ಲಿ ಇಂದು ಜಾಗದ ವ್ಯಾಲ್ಯೂ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಿ ಕಡಿಮೆ ಬೆಲೆಗೆ ಜಾಗ ಸಿಗುತ್ತದೆಯೋ ಅಲ್ಲಿ ಹೋಗಿ ಪ್ರಾಪರ್ಟಿ ಖರೀದಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ವಂಚನೆ ಆಗುತ್ತದೆ.
ಇದನ್ನೂ ಸಹ ಓದಿ : 6ನೇ ತರಗತಿ ಪ್ರವೇಶಾತಿಗೆ ಅಂತಿಮ ಮೆರಿಟ್ ಪಟ್ಟಿ ಬಿಡುಗಡೆ.! ಇಲ್ಲಿದೆ ಚೆಕ್ ಮಾಡುವ ವಿಧಾನ
ವಂಚನೆ ತಡೆಗಟ್ಟಲು ಈ ಡಾಕ್ಯುಮೆಂಟ್ಸ್ ಚೆಕ್ ಮಾಡಿ:
- ಮೊದಲು ಯಾವುದೇ ಆಸ್ತಿ ಖರೀದಿ ಮಾಡುವಾಗ ಆ ಆಸ್ತಿಯ ಮಾಲೀಕರು ಯಾರು ಎಂಬುದನ್ನು ಚೆಕ್ ಮಾಡಬೇಕು
- ಅವರಿಗೆ ಆ ಸೈಟ್ ಅಥವಾ ಜಮೀನು ಹೇಗೆ ಬಂದಿದೆ ಅದರ ಬಗ್ಗೆ ಯಾವುದೇ ರೀತಿಯ ಕಾಗದಪತ್ರ ಇದೆಯೇ ಎಂಬುದನ್ನು ಪರಿಶೀಲಿಸಬೇಕು.
- ಇನ್ನು ಸಾಕಷ್ಟು ಬಾರಿ ಉಡುಗೊರೆಯಾಗಿ ಸೈಟ್ ಸಿಗಬಹುದು. ಅಂತ ಸಂದರ್ಭದಲ್ಲಿ ಅವರಿಗೆ ಯಾವ ರೀತಿ ಸೈಟ್ ಸಿಕ್ಕಿತ್ತು ಎಂಬುದನ್ನು ತಿಳಿದುಕೊಳ್ಳಿ. ಇಲ್ಲವಾದರೆ ಅವರು ವಂಚನೆ ಮಾಡಿ ತೆಗೆದುಕೊಂಡ ಸೈಟ್ ಆಗಿದ್ರೆ ಮುಂದೆ ಅದರಿಂದ ಸಮಸ್ಯೆ ಅನುಭವಿಸುವುದು ನೀವೇ
- ಆನ್ಲೈನಲ್ಲಿ ಹಾಸಿಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ಅಪ್ಡೇಟ್ ಮಾಡಿದ್ದಾರಾ ಎಂಬುದನ್ನು ಚೆಕ್ ಮಾಡಿ.
- ನೀವು ಖರೀದಿಸುವ ಆಸ್ತಿಯ ಮೇಲೆ ಯಾವುದಾದರೂ ಕ್ರಿಮಿನಲ್ ಮುಖದ್ದಮೆ ಅಥವಾ ಸಾಲ ಇದ್ಯಾ ಎಂಬುದನ್ನು ಪರಿಶೀಲಿಸಿ.
- ಆಸ್ತಿ ನೋಂದಣಿ ಸಮಯದಲ್ಲಿ ಮ್ಯುಟೇಶನ್ ಪತ್ರ ಚೆಕ್ ಮಾಡುವುದನ್ನು ಮರೆಯಬೇಡಿ.
ಒಟ್ಟಿನಲ್ಲಿ ನೀವು ಖರೀದಿಸುವ ಆಸ್ತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಎಲ್ಲಾ ರೀತಿಯ ಕಾಗದ ಪತ್ರಗಳನ್ನು ಪರಿಶೀಲಿಸಿ. ಡಾಕ್ಯುಮೆಂಟ್ಸ್ ಇಲ್ಲದೆ ಇರುವ ಆಸ್ತಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದರು ಕೂಡ ಖರೀದಿಸಬೇಡಿ. ಮುಂದಿನ ದಿನಗಳಲ್ಲಿ ನೀವು ಸಮಸ್ಯೆ ಅನುಭವಿಸಬೇಕಾಗುತ್ತದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ಮುತುವರ್ಜಿಯಿಂದ ಆಸ್ತಿ ಖರೀದಿ ಮಾಡಿ.
ಇತರೆ ವಿಷಯಗಳು:
ಸ್ವಯಂ ಉದ್ಯೋಗಕ್ಕೆ ರಾಜ್ಯ ಸರ್ಕಾರದಿಂದ ನೇರ ಸಾಲ ಯೋಜನೆ! ಇಂದೇ ಅರ್ಜಿ ಸಲ್ಲಿಸಿ
ರಾಜ್ಯದ 8 ಜಿಲ್ಲೆಗಳಲ್ಲಿ ಅಂಗನವಾಡಿ ಸಮಯ ಬದಲಾವಣೆ.! ಹೊಸ ವೇಳಾಪಟ್ಟಿ ಬಿಡುಗಡೆ
SSLC ರಿಸಲ್ಟ್ ಚೆಕ್ ಮಾಡಲು ಸುಲಭ ವಿಧಾನ! ಇಲ್ಲಿ ಕ್ಲಿಕ್ ಮಾಡಿ