rtgh
Headlines

ನೀವು ಕೋಳಿ ಫಾರ್ಮ್ ತೆರೆಯಬೇಕೆ? ಈ ಇಲಾಖೆ ಅನುಮತಿ ಇಲ್ಲದೆ ಆರಂಭಿಸಲು ಸಾಧ್ಯವೇ ಇಲ್ಲ

Poultry farm scheme
Share

ಹಲೋ ಸ್ನೇಹಿತರೇ, ಕೋಳಿ ಸಾಕಾಣಿಕೆಗೆ ಪಾರ್ಮ್ ಅನ್ನು ನಿರ್ಮಾಣ ಮಾಡಲು ಯಾವೆಲ್ಲಾ ಅನುಮತಿ ಪಡೆಯಬೇಕು? ಹೇಗೆ ಪಡೆಯಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

Poultry farm scheme

ಇದರ ಜೊತೆ ಕೋಳಿ ಸಾಕಾಣಿಕೆ ಪ್ರಾರಂಭಿಸಲು ತರಬೇತಿ ಪಡೆಯಲು ನಮ್ಮ ರಾಜ್ಯದಲ್ಲಿ ಇರುವ ಕೋಳಿ ಸಾಕಾಣಿಕೆ ಕೇಂದ್ರದ ವಿವರ & ಸಬ್ಸಿಡಿ ಯೋಜನೆಗಳ ಮಾಹಿತಿಯನ್ನು ತಿಳಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದಲ್ಲಿ ಏಕಾತ್ಮಕ ಆದಾಯ ಮೂಲವನ್ನು ನಂಬಿಕೊಳ್ಳದೇ ಕೃಷಿ ಜೊತೆಯಲ್ಲಿ, ಕೋಳಿ-ಕುರಿ ಸಾಕಾಣಿಕೆ, ಹೈನುಗಾರಿಕೆ ಮೀನುಗಾರಿಕೆ ಹೀಗೆ ಉಪವೃತಿಗಳನ್ನು ಸಹ ಅಳವಡಿಕೆ ಮಾಡಿಕೊಂಡಲ್ಲಿ ರೈತರು ಸುಸ್ಥಿರ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಪ್ರಶ್ನೆ-1: ಗ್ರಾಮಾಂತರ ಪ್ರದೇಶದಲ್ಲಿ ಕೋಳಿ ಫಾರಂ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಯಿಂದ ಕಟ್ಟಡ ಪರವಾನಿಗೆ ನೀಡಲು ಜಮೀನಿನ ಭೂಪರಿವರ್ತನೆ ಅವಶ್ಯವಾಗಿರುತ್ತದೆಯೇ?

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಪ್ರಕರಣ 2(ಎ)(ಡಿ) & ಪ್ರಕರಣ 81 ರಡಿ ಕೋಳಿ ಫಾರಂಗಳು ಕೃಷಿ ಕಸುಬಾಗಿ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶದ ವ್ಯಾಪ್ತಿಗೆ ಒಳಪಡಲಿರುವ ಕೋಳಿ ಫಾರಂ ಕಟ್ಟಡವನ್ನು ನಿರ್ಮಿಸಲು ಭೂ ಪರಿವರ್ತನೆ ಅಗತ್ಯವಿರುವುದಿಲ್ಲ.

ಪ್ರಶ್ನೆ-2: ಕಟ್ಟಡ ಪರವಾನಿಗೆ ಪಡೆಯಲು ಅಗತ್ಯವಾದ ಇನ್ನಿತರ ದಾಖಲಾತಿಗಳು ಯಾವುವು?

ಕಟ್ಟಡ ಪರವಾನಿಗೆ ಪಡೆಯಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್.ಓ.ಸಿ, ತಹಶೀಲ್ದಾರ
ರವರಿಂದ ನಿರಾಕ್ಷೇಪಣಾ ಪತ್ರ & ಪಹಣಿ ನೀಡಬೇಕಾಗಿರುತ್ತದೆ.

ಪ್ರಶ್ನೆ-3: ಕೋಳಿ ಫಾರಂಗೆ ಸಂಬಂಧಪಟ್ಟಂತೆ ಉದ್ಯಮ ಪರವಾನಿಗೆ ನೀಡುವ ಪ್ರಾಧಿಕಾರ ಯಾವುವು?

ಇದನ್ನು ಓದಿ: ʼಆವಾಸ್‌ ಯೋಜನೆʼಯಡಿ ಮನೆ ಪಡೆಯಲು ಈ ಹೊಸ ದಾಖಲೆಗಳು ಬೇಕೆ ಬೇಕು!

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 64 ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ವಿಧವಾದ ಕಟ್ಟಡವನ್ನು ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ಅನುಮತಿಯನ್ನು ಪಡೆಯಬೇಕಾಗಿರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶುಸಂಗೋಪನೆ ಇಲಾಖೆಯ ವಿಧಿಸುವ ಷರತ್ತುಗಳನ್ನು ಪಾಲಿಸುವ ನಿಬಂಧನೆಗೊಳಪಟ್ಟು ಗ್ರಾಮ ಪಂಚಾಯತಿಯ ಪರವಾನಿಗೆ ನೀಡಲು ಸಕ್ಷಮ ಪ್ರಾಧಿಕಾರವಾಗಿರುತ್ತದೆ.

ಪ್ರಶ್ನೆ-4: ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅನುಸರಿಸಬೇಕಾದ ಕ್ರಮಗಳು ಮತ್ತು ಗ್ರಾಮ ಪಂಚಾಯತಿಗೆ ಒದಗಿಸಬೇಕಾದ ದಾಖಲೆಗಳು ಯಾವುವು?

ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಹಶೀಲ್ದಾರ ರವರಿಂದ ನಿರಾಕ್ಷೇಪಣಾ ಪತ್ರ, ಪಹಣಿ, ಕಟ್ಟಡ ಅನುಮತಿ ಪತ್ರ & ಕಂದಾಯ ರಶೀದಿ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

ಕೋಳಿ ಸಾಕಾಣಿಕೆಗೆ ಆರಂಭಿಸಲು ಸಬ್ಸಿಡಿ ಯೋಜನೆ

ಯೋಜನೆ ವರದಿ ತಯಾರಿಕೆ ಆಧಾರದ ಮೇಲೆ ಕೋಳಿ ಸಾಕಾಣಿಕೆಗೆ ಸಾಲ ಮತ್ತು ಸಹಾಯಧನವನ್ನು ಪಡೆಯಬವುದು ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಪಶು ಪಾಸ್ಪಿಟಲ್ ನ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ.

ಕೋಳಿ ಸಾಕಾಣಿಕೆ ಮಾಡಲು ಆಸಕ್ತಿಯಿರುವ ಯುವಕ-ಯುವತಿಯರು AgriClinic or Agri Business ಯೋಜನೆಯಡಿ 2 ತಿಂಗಳ ತರಬೇತಿ ಪಡೆದು ಶೇ 35 ಕ್ಕಿಂತ ಹೆಚ್ಚಿನ ಸಹಾಯಧನದಲ್ಲಿ ಬ್ಯಾಂಕ್ ಸಾಲ ಸಹಿತ ಕೋಳಿ ಸಾಕಾಣಿಕೆಯನ್ನು ಮಾಡಬವುದು ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಭೇಟಿ ಮಾಡಿ: https://www.agriclinics.net/

ಕೋಳಿ ಸಾಕಾಣಿಕೆ ಪಠ್ಯಕ್ರಮ ತಿಳಿಯಲು ಇಲ್ಲಿ ಕ್ಲಿಕ್
https://www.ahvs.kar.nic.in/pdfs/notifications/Training_Mod_POULTRYFARMING.pdf

ಇತರೆ ವಿಷಯಗಳು

35,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅಸ್ತು!

ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್!‌ ಪ್ರತಿ ತಿಂಗಳು ಸಿಗತ್ತೆ 3 ಸಾವಿರ ಪಿಂಚಣಿ


Share

Leave a Reply

Your email address will not be published. Required fields are marked *