rtgh
Headlines

ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿ

pmay scheme
Share

ಹಲೋ ಸ್ನೇಹಿತರೇ, ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಆವಾಸ್ ಯೋಜನೆʼ ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈಗ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

pmay scheme

ನೀವು ಮನೆ ಖರೀದಿಸಲು ಬಯಸಿದರೆ & ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಲಾಭವನ್ನು ಪಡೆಯಲು ಬಯಸಿದರೆ ಇದು ತುಂಬಾ ಸುಲಭ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸರ್ಕಾರಿ ಯೋಜನೆಯಿಂದ ನೀವು ಅನೇಕ ಪ್ರಯೋಜನ ಪಡೆಯುತ್ತೀರಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಆಧಾರ್ ಸಂಖ್ಯೆ ಅಗತ್ಯವಿದೆ.

ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼ ಪ್ರಾರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ.

PMAY ಯೋಜನೆಯಡಿ ಪ್ರಯೋಜನಗಳು

  • PMAY ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ.6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುವುದು.
  • ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ & ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ
  • ಗೃಹ ನಿರ್ಮಾಣದಲ್ಲಿ ಸುಸ್ಥಿರ & ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುವುದು.
  • ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ & ನಗರ ಪ್ರದೇಶಗಳಿಗೆ ಅನ್ವಯವಾಗುತ್ತದೆ. ೩ ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.

ಯಾರು ಫಲಾನುಭವಿಗಳು?

ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಫಲಾನುಭವಿಗಳನ್ನು ವಾರ್ಷಿಕ ಆದಾಯದ ಆದಾರದಲ್ಲಿ ಈ ರೀತಿ ವರ್ಗೀಕರಣ ಮಾಡಲಾಗುತ್ತದೆ.

  • ಮಧ್ಯಮ ಆದಾಯ ಗುಂಪು 1 (MIG1): 6 ಲಕ್ಷದಿಂದ 12 ಲಕ್ಷ ರೂ.
  • ಮಧ್ಯಮ ಆದಾಯ ಗುಂಪು 2 (MIG2): 12 ಲಕ್ಷದಿಂದ 18 ಲಕ್ಷ ರೂ.
  • ಕಡಿಮೆ ಆದಾಯದ ಗುಂಪು (LIG) : 3 ಲಕ್ಷದಿಂದ 6 ಲಕ್ಷ ರೂ.
  • ಆರ್ಥಿಕವಾಗಿ ಹಿಂದುಳಿದ ವರ್ಗ (EWS): 3 ಲಕ್ಷ ರೂ.ವರೆಗೆ

ಅರ್ಜಿ ಸಲ್ಲಿಸುವುದು ಹೇಗೆ?

  • ಇದಕ್ಕಾಗಿ ಮೊದಲು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಅಧಿಕೃತ ವೆಬ್‌ಸೈಟ್ pmaymis.gov.in ಗೆ ಹೋಗಿ
  • ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂದಿನ ಪುಟಕ್ಕೆ ಹೋಗಬೇಕು
  • ಅರ್ಜಿದಾರರು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಯಾವ ರಾಜ್ಯಕ್ಕೆ ಸೇರಿದವರು ಎಂಬುದನ್ನು ನಮೂದಿಸಬೇಕು. ಕುಟುಂಬದ ಮುಖ್ಯಸ್ಥ, ಅವರ ಪ್ರಸ್ತುತ ವಸತಿ ವಿಳಾಸ ಮತ್ತು ಇತರ ಪ್ರಮುಖ ವಿವರಗಳನ್ನು ಒದಗಿಸಬೇಕು
  • ಸಿಟಿಜನ್ ಅಸೆಸ್‌ಮೆಂಟ್ ಡ್ರಾಪ್‌ಡೌನ್ ಅಡಿ ಬೆನಿಫಿಟ್ ಅಂಡರ್ 3 ಕಾಂಪೊನೆಂಟ್‌ಗಳ ಅಡಿಯಲ್ಲಿ ಕ್ಲಿಕ್ ಮಾಡಬೇಕು
  • ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ & Submit ಮಾಡಬೇಕು
  • ಸಂಖ್ಯೆ ಸರಿಯಾಗಿದ್ದರೆ ಅದು ಇನ್ನೊಂದು ಪುಟಕ್ಕೆ ಹೋಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸಬೇಕು.
  • ನಿಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದರೆ, ನಿಮ್ಮ ಆಧಾರ್ ಸಂಖ್ಯೆ & ಅಪ್ಲಿಕೇಶನ್ ಸಂಖ್ಯೆಯ ಸಹಾಯದಿಂದ ತಿದ್ದುಪಡಿ ಮಾಡಲು ಸಾಧ್ಯವಿರುತ್ತದೆ

ಇತರೆ ವಿಷಯಗಳು

7ನೇ ವೇತನ ಆಯೋಗ ವರದಿ ಅಗಸ್ಟ್‌ನಿಂದ ಜಾರಿ! ರಾಜ್ಯ ಸರ್ಕಾರದ ಸೂಚನೆ

7ನೇ ವೇತನ ಆಯೋಗ ಜಾರಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್..!


Share

Leave a Reply

Your email address will not be published. Required fields are marked *