rtgh
Headlines

ಪ್ರತಿ ತಿಂಗಳು 300 ಯೂನಿಟ್‌ ಉಚಿತ ವಿದ್ಯುತ್‌! ಹೊಸ ಸರ್ಕಾರದ ಮಹತ್ವದ ನಿರ್ಧಾರ

pm surya ghar online apply
Share

ಹಲೋ ಸ್ನೇಹಿತರೇ, 3ನೇ ಬಾರಿ ದೇಶದ ಪ್ರಧಾನಮಂತ್ರಿಗಳಾಗಿ ಆಯ್ಕೆಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಬೆಳವಣಿಗೆಗಾಗಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಮತ್ತೊಂದು ಯೋಜನೆ ಸೂರ್ಯ ಘರ್ ಯೋಜನೆಯ ಮೂಲಕ 300 ಯೂನಿಟ್ ಕರೆಂಟ್ ಒದಗಿಸಲಾಗುವುದು. ಈ ಯೋಜನೆಯನ್ನು ಲೋಕಸಭಾ ಎಲೆಕ್ಷನ್ ಗಿಂತ ಮೊದಲು ಜಾರಿಗೆ ತರುವುದಾಗಿ ಪಿಎಂ ಮೋದಿ ಅವರು ತಿಳಿಸಿದ್ದರು.

pm surya ghar online apply

ಪಿಎಂ ಸೂರ್ಯ ಘರ್ ಯೋಜನೆಗಾಗಿ ₹75,000 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ. ಈ ಮೊತ್ತದಲ್ಲಿ ಎಲ್ಲರಿಗೂ 300 ಯೂನಿಟ್ ವರೆಗು ಉಚಿತ ವಿದ್ಯುತ್ ನೀಡುವ ಪ್ಲಾನ್ ಹೊಂದಿದ್ದಾರೆ. ಇದೀಗ ಮೋದಿ ಅವರು ಎಲೆಕ್ಷನ್ ನಲ್ಲಿ ಮೇಲುಗೈ ಸಾಧಿಸಿ, ಪಿಎಂ ಆಗಿ ಆಯ್ಕೆಯಾದ ಬಳಿಕ ಅವರು ಸೂರ್ಯ ಘರ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಇದರಿಂದ ದೇಶದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಕೇಂದ್ರ ಸರ್ಕಾರದಿಂದ ಹೊಸ ಘೋಷಣೆ

ಕೇಂದ್ರ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ವಿಚಾರದಿಂದ ದೇಶದ ಜನತೆಗೆ ಸಂತೋಷವಾಗಿದೆ. ಸುಮಾರು 1 ಕೋಟಿ ಮನೆಗಳಿಗೆ ಸೂರ್ಯ ಘರ್ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡುವ ಯೋಜನೆ ಹೊಂದಿದೆ.

ಈ ಯೋಜನೆಗೆ ನೀವು ಅಪ್ಲೈ ಮಾಡಿ, ಸೌಲಭ್ಯ ಪಡೆದರೆ ನಿಮ್ಮ ಮನೆಗೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ನಿಮಗೆ ಅಗತ್ಯ ಇರುವಷ್ಟು ವಿದ್ಯುತ್ ಅನ್ನು ಬಳಸಿ, ಉಳಿದಿದ್ದನ್ನು ಮಾರಾಟ ಮಾಡಬಹುದು. ಈ ಯೋಜನೆಯ ಸೌಲಭ್ಯ ಪಡೆಯುವುದಕ್ಕಿಂತ ಮೊದಲು ಕೆಲವು ವಿಚಾರಗಳು ನಿಮಗೆ ತಿಳಿದಿರಲಿ.

ಇದನ್ನೂ ಸಹ ಓದಿ : ರೈತರ ಜಮೀನಿನಲ್ಲಿ ನೀರಾವರಿ ವ್ಯವಸ್ಥೆಗೆ 1.5 ಲಕ್ಷ ಸಹಾಯಧನ!

ಕೇಂದ್ರ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ

ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯ ಮೂಲಕ ನಿಮಗೆ 300 ಯೂನಿಟ್ ವರೆಗು ಉಚಿತ ವಿದ್ಯುತ್ ಸಿಗಲಿದೆ. ನಿಮ್ಮ ಮನೆಯಲ್ಲಿ ಸೌರಫಲಕ ಅಳವಡಿಸಿದರೆ, 1 ಕಿಲೋವ್ಯಾಟ್ ಗೆ ₹90 ಸಾವಿರ, 2 ಕಿಲೋವ್ಯಾಟ್ ಗೆ 1.5 ಲಕ್ಷ ಹಾಗೆಯೇ 3 ಕಿಲೋವ್ಯಾಟ್ ಗೆ ₹2 ಲಕ್ಷ ರೂಪಾಯಿ ಆಗಿದೆ.

ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ಆದರೆ ನೀವು ಸೂರ್ಯಘರ್ ಯೋಜನೆಯ ಮೂಲಕ ಸೌರಫಲಕ ಅಳವಡಿಸಿಕೊಂಡರೆ, 1 ಕಿಲೋವ್ಯಾಟ್ ಗೆ ₹18 ಸಾವಿರ, 2 ಕಿಲೋವ್ಯಾಟ್ ₹30 ಸಾವಿರ, 3 ಕಿಲೋವ್ಯಾಟ್ ಗೆ ₹78 ಸಾವಿರ ಆಗಿದೆ.

ಕೇಂದ್ರದ ಯೋಜನೆಯ ಮೂಲಕ ನಿಮಗೆ ಹೆಚ್ಚು ಸಬ್ಸಿಡಿ ಸಿಗಲಿದೆ. ಸಬ್ಸಿಡಿ ಪಡೆಯಲು ಲೋಡ್ 85% ಗಿಂತ ಕಡಿಮೆ ಇರಬೇಕು. ಒಮ್ಮೆ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿದರೆ ಬಹಳಷ್ಟು ವರ್ಷಗಳ ಕಾಲ ಇದರ ಉಪಯೋಗ ಪಡೆದುಕೊಳ್ಳಬಹುದು.

1 ಗಂಟೆಗೆ 1 ಕಿಲೋವ್ಯಾಟ್ ಇಂದ 128 ಕಿಲೋವ್ಯಾಟ್ ವರೆಗು ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ವೇಳೆ ನಿಮ್ಮ ಮನೆಗೆ 3 ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, ವರ್ಷಕ್ಕೆ ₹30,240 ರೂಪಾಯಿ ಉಳಿತಾಯ ಮಾಡುತ್ತೀರಿ. ಸರ್ಕಾರದಿಂದ ನಿಮಗೆ ಸಿಗುವ ಸಬ್ಸಿಡಿ, ಇಲ್ಲಿ ಉಳಿತಾಯ ಮಾಡುವ ಹಣ ಎಲ್ಲವೂ ನಿಮಗೆ ಲಾಭದಾಯಕ ಆಗಿದೆ.

ಇತರೆ ವಿಷಯಗಳು:

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ; ಶೀಘ್ರವೇ ಉಚಿತ ಮೊಬೈಲ್ ವಿತರಣೆ

ನಿಮ್ಮ ಈ ನಷ್ಟಕ್ಕೆ ಸರ್ಕಾರದ ಪರಿಹಾರ!

SSY ನಲ್ಲಿ ಈ ಬದಲಾವಣೆ ಮಾಡದಿದ್ರೆ ಹಣ ಬರಲ್ಲ!


Share

Leave a Reply

Your email address will not be published. Required fields are marked *